ಗುಡಿಸಲುಗಳಿಗೆ ಬೆಂಕಿ 
ದೇಶ

ಅಸ್ಸಾಂನಲ್ಲಿ ಭೀಕರ ದುರಂತ: 20 ಸಿಲಿಂಡರ್ ಸ್ಫೋಟ; 66 ಗುಡಿಸಲುಗಳು ಭಸ್ಮ

ಅಸ್ಸಾಂನಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, 20 ಅನಿಲ ಸಿಲಿಂಡರ್ ಗಳು ಸ್ಫೋಟವಾಗಿ ಬರೊಬ್ಬರಿ 66 ಗುಡಿಸಲುಗಳು ಸುಟ್ಟು ಕರಕಲಾಗಿವೆ.

ಗುವಾಹತಿ: ಅಸ್ಸಾಂನಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, 20 ಅನಿಲ ಸಿಲಿಂಡರ್ ಗಳು ಸ್ಫೋಟವಾಗಿ ಬರೊಬ್ಬರಿ 66 ಗುಡಿಸಲುಗಳು ಸುಟ್ಟು ಕರಕಲಾಗಿವೆ.

ಗುವಾಹತಿಯ ಜಲುಕ್‌ ಬರಿಯಲ್ಲಿ ಈ ಅಗ್ನಿ ಅವಘಡ ಸಂಭವಿಸಿದ್ದು, ಒಂದು ಗುಡಿಸಲಿನ್ಲಲಿ ಬೆಂಕಿ ಕಾಣಿಸಿಕೊಂಡ ನಂತರ ಅದು ಇತರೆ ಗುಡಿಸಲುಗಳಿಗೆ ಹರಡಿದೆ. ಈ ವೇಳೆ ಮನೆಗಳಲ್ಲಿ ಇರಿಸಲಾಗಿದ್ದ ಎಲ್‌ಪಿಜಿ ಸಿಲಿಂಡರ್‌ಗಳು ಒಂದರ ಬಳಿಕ ಒಂದರಂತೆ ಸ್ಫೋಟಗೊಂಡಿದ್ದು, ಒಟ್ಟು 20  ಸಿಲಿಂಡರ್ ಗಳು ಸ್ಫೋಟಗೊಂಡಿದ್ದು, ಇದೇ ವೇಳೆ 66 ಗುಡಿಸಲುಗಳು ಬೆಂಕಿಗಾಹುತಿಯಾಗಿವೆ. 

ಅಸ್ಸಾಂನ ಗುವಾಹಟಿಯಲ್ಲಿ ಶನಿವಾರ ಸುಮಾರು 20 ಎಲ್‌ಪಿಜಿ ಸಿಲಿಂಡರ್‌ಗಳು ಸ್ಫೋಟಗೊಂಡ ಪರಿಣಾಮ ಸಂಭವಿಸಿದ ಅನಾಹುತದಲ್ಲಿ 66 ಗುಡಿಸಲುಗಳು ಬೆಂಕಿಗಾಹುತಿಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇನ್ನು ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಉಂಟಾಗಿರಬಹುದು ಎಂದು ಶಂಕಿಸಲಾಗಿದೆ.  ಪ್ರಸ್ತುತ 14 ಅಗ್ನಿ ಶಾಮಕ ವಾಹನಗಳು ಸುಮಾರು ಮೂರು ಗಂಟೆಗಳ ನಿರಂತರ ಶ್ರಮಿಸಿ ಬೆಂಕಿ ನಂದಿಸಿವೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು: ಗಾಜಿಯಾಬಾದ್‌ನ ಹರೀಶ್ ರಾಣಾ ದಯಾಮರಣಕ್ಕೆ ಅನುಮತಿ! ಏನಿದು ಪ್ರಕರಣ?

ದೇಶಾದ್ಯಂತ 'ಗ್ಯಾಸ್ ಟ್ರಬಲ್': ಪ್ರಮುಖ ನಗರಗಳಲ್ಲಿ LPG ಕೊರತೆಯ ಭೀತಿ; ಸಮಸ್ಯೆ ಬಗೆಹರಿಸಲು ಅಗತ್ಯ ಸರಕುಗಳ ಕಾಯ್ದೆ ಬಳಸಿದ ಕೇಂದ್ರ!

ರಿಲಯನ್ಸ್ ಇಂಡಸ್ಟ್ರೀಸ್ ಜೊತೆ ಅಮೆರಿಕದ ತೈಲ ಶುದ್ಧೀಕರಣ ಘಟಕ ಒಪ್ಪಂದ: Donald Trump ಘೋಷಣೆ

KPCC ಅಧ್ಯಕ್ಷರಾಗಿ ಆರು ವರ್ಷ: ಡಿ ಕೆ ಶಿವಕುಮಾರ್ ಔತಣಕೂಟ ಆಯೋಜನೆ; ಸಿಎಂ ಸೇರಿ ಸಚಿವರು, ಶಾಸಕರು ಭಾಗಿ, ನಾಯಕತ್ವ ಬದಲಾವಣೆ ಚರ್ಚೆ ಮತ್ತೆ ತೀವ್ರ

'ನಮ್ಮ ಮಕ್ಕಳಿಗೆ ವಿಷ ನೀಡುತ್ತಿದ್ದೀರಿ': ಬಣ್ಣ ಕಳೆದುಕೊಂಡ ನೀರಿನ ಬಾಟಲಿ ಪ್ರದರ್ಶಿಸಿದ ಜೆಡಿಎಸ್ ಶಾಸಕ; ರಣಾಂಗಣವಾದ ಸದನ!

SCROLL FOR NEXT