ದೇಶ

ಜಮ್ಮು-ಕಾಶ್ಮೀರ ಡಿಡಿಸಿ ಚುನಾವಣೆ ಫಲಿತಾಂಶ: ಗುಪ್ಕಾರ್ ಮೈತ್ರಿಕೂಟ 73 ರಲ್ಲಿ, ಬಿಜೆಪಿ 50 ರಲ್ಲಿ ಮುನ್ನಡೆ; ಪಕ್ಷೇತರರೇ ನಿರ್ಣಾಯಕ?

Srinivas Rao BV

ಶ್ರೀನಗರ: ಇತ್ತೀಚೆಗಷ್ಟೇ ನಡೆದಿದ್ದ ಜಮ್ಮು-ಕಾಶ್ಮೀರ ಜಿಲ್ಲಾ ಅಭಿವೃದ್ಧಿ ಪರಿಷತ್ (ಡಿಡಿಸಿ) ಚುನಾವಣೆಯಲ್ಲಿ ಪೀಪಲ್ಸ್ ಅಲಾಯನ್ಸ್ ಫಾರ್ ಗುಪ್ಕಾರ್ ಡಿಕ್ಲರೇಷನ್ (ಗುಪ್ಕಾರ್ ಮೈತ್ರಿಕೂಟ, ಪಿಎಜಿಡಿ) 73 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೆ, ಬಿಜೆಪಿ 50 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಮಂಗಳವಾರ ಡಿಡಿಸಿ ಚುನಾವಣೆಯ ಮತ ಎಣಿಕೆ  ನಡೆಯುತ್ತಿದ್ದು, ಕಾಂಗ್ರೆಸ್ ಪಕ್ಷ 21 ಸ್ಥಾನಗಳೊಂದಿಗೆ 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.  280 ಸ್ಥಾನಗಳ ಫಲಿತಾಂಶದ ಪೈಕಿ 193 ಸ್ಥಾನಗಳ ಟ್ರೆಂಡ್ ಲಭ್ಯವಿದ್ದು,  ಹೊಸದಾಗಿ ರಚನೆಗೊಂಡಿದ್ದ ಹಲವು ಪ್ರದೇಶಗಳಲ್ಲಿ ಮೊದಲ ಬಾರಿಗೆ ಡಿಡಿಸಿ ಚುನಾವಣೆ ನಡಿದಿದ್ದು, ಅಲ್ಲಿ ಬಿಜೆಪಿಗೆ ನಿರೀಕ್ಷಿತ ಪ್ರಮಾಣದ ಫಲಿತಾಂಶ ದೊರೆಯುವ ಸೂಚನೆಗಳಿವೆ. ಈ ಮೂಲಕ ಜಮ್ಮು ವಿಭಾಗದಲ್ಲಿ ಬಿಜೆಪಿಯ ಹಿಡಿತ ಮತ್ತಷ್ಟು ಪ್ರಬಲವಾಗಿದ್ದರೆ, ಆರ್ಟಿಕಲ್ 370 ರದ್ದತಿ ನಂತರದಲ್ಲಿ ರಚನೆಯಾಗಿದ್ದ ಎನ್ ಸಿ, ಪಿಡಿಪಿಯನ್ನೊಳಗೊಂಡ ಗುಪ್ಕಾರ್ ಮೈತ್ರಿಕೂಟ 73 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಕಣಿವೆಯಲ್ಲಿ ತನ್ನ ಪ್ರಾಬಲ್ಯವನ್ನು ಉಳಿಸಿಕೊಂಡಂತಾಗಿದೆ. 

ಬಂಡಿಪೋರಾ ಗುರೇಜ್ ಪ್ರದೇಶದಲ್ಲಿ ಬಿಜೆಪಿ ಗಣನೀಯ ಬೆಳವಣಿಗೆ ಸಾಧಿಸಿದ್ದು, ಭಯೋತ್ಪಾದಕರೊಂದಿಗೆ ಸಂಪರ್ಕವಿದ್ದ ಆರೋಪದಡಿ ಬಂಧನಕ್ಕೊಳಗಾಗಿದ್ದ ಪಿಡಿಪಿ ನಾಯಕ ವಾಹೀದ್ ಪಾರ ಪುಲ್ವಾಮ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. 

ಆರ್ಟಿಕಲ್ 3370 ರದ್ದುಗೊಂಡ ನಂತರ ಇದೇ ಮೊದಲ ಬಾರಿಗೆ ಡಿಡಿಸಿ ಚುನಾವಣೆ ನಡೆದಿದೆ. ಪಕ್ಷೇತರ ಅಭ್ಯರ್ಥಿಗಳು 40 ಕ್ಕೂ ಹೆಚ್ಚುಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು ನಿರ್ಣಾಯಕರಾಗುವ ಸಾಧ್ಯತೆ ಇದೆ. 

SCROLL FOR NEXT