ಅಸ್ಸಾಂಗೆ ಗೃಹ ಸಚಿವ ಅಮಿತ್ ಶಾ ಭೇಟಿ: ಮತ್ತೊಂದು ಸುತ್ತಿನ ಪಕ್ಷಾಂತರ ಪರ್ವ?
ಗೃಹ ಸಚಿವ ಅಮಿತ್ ಶಾ ಡಿ.26 ರಂದು ಅಸ್ಸಾಂಗೆ ಭೇಟಿ ನೀಡುತ್ತಿದ್ದು ಪಶ್ಚಿಮ ಬಂಗಾಳದ ನಂತರ ಮತ್ತೊಂದು ಸುತ್ತಿನ ಪಕ್ಷಾಂತರ ಪರ್ವಕ್ಕೆ ಬಿಜೆಪಿ ವೇದಿಕೆ ಸಿದ್ಧಗೊಳಿಸಿದೆ.
ಅಸ್ಸಾಂ: ಗೃಹ ಸಚಿವ ಅಮಿತ್ ಶಾ ಡಿ.26 ರಂದು ಅಸ್ಸಾಂಗೆ ಭೇಟಿ ನೀಡುತ್ತಿದ್ದು ಪಶ್ಚಿಮ ಬಂಗಾಳದ ನಂತರ ಮತ್ತೊಂದು ಸುತ್ತಿನ ಪಕ್ಷಾಂತರ ಪರ್ವಕ್ಕೆ ಬಿಜೆಪಿ ವೇದಿಕೆ ಸಿದ್ಧಗೊಳಿಸಿದೆ.
ವಿಪಕ್ಷಗಳ ಹಲವು ನಾಯಕರು ಅಮಿತ್ ಶಾ ಭೇಟಿ ವೇಳೆ ಬಿಜೆಪಿ ಸೇರುವುದಕ್ಕೆ ಉತ್ಸುಕರಾಗಿದ್ದು, 2021 ಕ್ಕೆ ನಡೆಯಲಿರುವ ಅಸ್ಸಾಂ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಇದು ಮಹತ್ವ ಪಡೆದುಕೊಂಡಿದೆ.
ಅಸ್ಸಾಂ ಭೇಟಿ ವೇಳೆ ಅಮಿತ್ ಶಾ ಪಕ್ಷದ ನಾಯಕರೊಂದಿಗೆ ಚುನಾವಣಾ ತಯಾರಿ ಬಗ್ಗೆ ಸಭೆ ನಡೆಸಿ ಚರ್ಚಿಸಲಿದ್ದಾರೆ. ಬಿಜೆಪಿಯ ಉಪಾಧ್ಯಕ್ಷ ಹಾಗೂ ಅಸ್ಸಾಂ ನ ಬಿಜೆಪಿ ಉಸ್ತುವಾರಿ ಬೈಜಯಂತ್ ಪಾಂಡ ಅಮಿತ್ ಶಾ ಭೇಟಿಗೂ ಮೊದಲೇ ಅಂದರೆ ಡಿ.23 ರಂದು ಅಸ್ಸಾಂ ಗೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ.
ಡಿ.25 ರಂದು ಅಮಿತ್ ಶಾ ಅಟಲ್ ಬಿಹಾರಿ ವಾಜಪೇಯಿ ಅವರ ಪ್ರತಿಮೆಯನ್ನೂ ಅಸ್ಸಾಂ ನಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಬೈಜಯಂತ್ ಪಾಂಡ ತಿಳಿಸಿದ್ದಾರೆ.
ಇದೇ ವೇಳೆ ವಿಪಕ್ಷಗಳ ಹಲವಾರು ನಾಯಕರು ಬಿಜೆಪಿ ಸೇರಲು ಉತ್ಸುಕರಾಗಿದ್ದು, ಪಕ್ಷದ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಬೈಜಯಂತ್ ಪಾಂಡ ತಿಳಿಸಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.