ದೇಶ

ಆಲಿಗಢ ಮುಸ್ಲಿಂ ವಿ.ವಿ. ಒಂದು 'ಮಿನಿ ಭಾರತ'; ಶತಮಾನೋತ್ಸವ ಅಂಚೆ ಚೀಟಿ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

Sumana Upadhyaya

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಶತಮಾನೋತ್ಸವ ಕಾರ್ಯಕ್ರಮವನ್ನು ಅಂಚೆಚೀಟಿ ಬಿಡುಗಡೆ ಮಾಡುವ ಮಾಡಿ ವಿಡಿಯೊ ಕಾನ್ಫರೆನ್ಸ್ ಮೂಲಕ ಮಂಗಳವಾರ ಉದ್ದೇಶಿಸಿ ಮಾತನಾಡಿದರು.

ಆಲಿಗಢ ಮುಸ್ಲಿಂ ವಿಶ್ವವಿದ್ಯಾಲಯ ಕೇವಲ ಒಂದು ಕಟ್ಟಡ ಮಾತ್ರವಲ್ಲ, ಇಲ್ಲಿ ಕಲಿತು ಹೊರಬಂದ ಸಾಕಷ್ಟು ಹಳೆ ವಿದ್ಯಾರ್ಥಿಗಳು ರಾಷ್ಟ್ರ ನಿರ್ಮಾಣದಲ್ಲಿ, ರಾಷ್ಟ್ರದ ಪ್ರಗತಿಯಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ದೇಶವೇ ಹೆಮ್ಮೆ ಪಡುವಂತೆ ಮಾಡಿದೆ. 

ಇತ್ತೀಚೆಗೆ ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ಸ್ಥಾಪಿಸಲಾದ ತಪಾಸಣೆ ಕೇಂದ್ರಗಳು, ಪಿಎಂ ಕೇರ್ಸ್ ಫಂಡ್ ಗೆ ನೀಡಿರುವ ಕೊಡುಗೆಗಳು ಎಲ್ಲವೂ ಅಭೂತಪೂರ್ವ ಎಂದು ಶ್ಲಾಘಿಸಿದರು.

ಈ ಪ್ರತಿಷ್ಠಿತ ವಿಶ್ವವಿದ್ಯಾನಿಲಯದಲ್ಲಿ, ಒಬ್ಬ ವಿದ್ಯಾರ್ಥಿಯು ಶಿಕ್ಷಣವನ್ನು ಉರ್ದುವಿನಲ್ಲಿ ಪಡೆದರೆ, ಅವರು ಹಿಂದಿಯಲ್ಲಿ ಮಾಡಬಹುದು, ಒಂದು ಕಡೆ ಒಬ್ಬರು ಅರೇಬಿಕ್ ಬಗ್ಗೆ ಜ್ಞಾನವನ್ನು ಪಡೆಯಬಹುದು, ಮತ್ತೊಂದೆಡೆ ನಾವು ಸಂಸ್ಕೃತದಲ್ಲಿ ಮಾಡಬಹುದು. ಒಂದು ಕಡೆ ನೀವು ಕುರಾನ್ ನಲ್ಲಿ ಬೋಧನೆಗಳನ್ನು ಕಲಿಯಬಹುದು, ಮತ್ತೊಂದೆಡೆ, ಎಎಂಯು ಗೀತಾ ಮತ್ತು ಇತರ ಧರ್ಮಗ್ರಂಥಗಳ ಬೋಧನೆಗಳನ್ನು ಸಹ ಕಲಿಸುತ್ತದೆ. ಭಾರತವು ಇದನ್ನೇ ಹೊಂದಿದೆ, ಮತ್ತು ಈ ಸಂಸ್ಥೆಯು ಪ್ರತಿದಿನ ಆ ತತ್ತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ ಎಂದರು.

ಮುಸ್ಲಿಂ ಬಾಲಕಿಯರಲ್ಲಿ ಶಾಲೆಯಲ್ಲಿ ಹೊರಗುಳಿಯುವವರ ಪ್ರಮಾಣವು ಶೇಕಡಾ 70ರಿಂದ ಪ್ರಸ್ತುತ ಶೇಕಡಾ 30ಕ್ಕೆ ಇಳಿದಿದೆ ಮತ್ತು ಇದನ್ನು ಮತ್ತಷ್ಟು ಕಡಿಮೆ ಮಾಡಲು ನಾವು ಕೆಲಸ ಮಾಡುತ್ತಿದ್ದೇವೆ.ಈ ಮಹಾನ್ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ನಮ್ಮ ರಾಷ್ಟ್ರಕ್ಕೆ ಹಲವಾರು ಸ್ವಾತಂತ್ರ್ಯ ಹೋರಾಟಗಾರರನ್ನು ನೀಡಿದೆ. ಇಲ್ಲಿಂದ ಅನೇಕರು ಭಾರತಕ್ಕೆ ಸ್ವಾತಂತ್ರ್ಯ ಪಡೆಯಲು ಸಹಾಯ ಮಾಡಿದರು ಮತ್ತು ಇತರ ಎಲ್ಲ ನಾಗರಿಕರೊಂದಿಗೆ ಹೆಗಲುಕೊಟ್ಟು ನಿಂತಿದ್ದಾರೆ. ಆ ಕೊಡುಗೆ ನಮ್ಮೆಲ್ಲರಿಗೂ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ. ಆಲಿಗಢ ಮುಸ್ಲಿಂ ವಿಶ್ವವಿದ್ಯಾಲಯ ಒಂದು ಮಿನಿ ಭಾರತ ಇದ್ದಂತೆ. ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ಮಿನಿ ಭಾರತ ನೋಡಿದ್ದೇವೆ.

ಇದು ದೇಶದ ಸಂಸ್ಕೃತಿ, ವಿದ್ಯೆ, ಶಿಕ್ಷಣ ಕಲಿಕೆಯನ್ನು, ಪರಂಪರೆ, ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ ಎಂದು ಶ್ಲಾಘಿಸಿದರು.

SCROLL FOR NEXT