ದೇಶ

ಸಿಂಗು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು 2 ದಿನ 370 ಕಿ.ಮೀ ಸೈಕಲ್ ತುಳಿದ ಪಂಜಾಬ್ ರೈತ!

Vishwanath S

ನವದೆಹಲಿ: ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಿಂಗುವಿನಲ್ಲಿ ಪಂಜಾಬ್ ರೈತರು ತೀವ್ರತರ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಪಂಜಾಬ್ ರೈತರೊಬ್ಬರು ಎರಡು ದಿನಗಳ ಕಾಲ ಬರೋಬ್ಬರಿ 370 ಕಿ.ಮೀ ದೂರ ಸೈಕಲ್ ತುಳಿದು ಪ್ರತಿಭಟನಾ ಸ್ಥಳ ಸೇರಿದ್ದಾರೆ.   

"ನಾನು ಪ್ರತಿಭಟನಾ ಸ್ಥಳ ಸಿಂಗುವನ್ನು ತಲುಪಬೇಕಾಗಿತ್ತು. ಏಕೆಂದರೆ ಕೃಷಿ ಕಾಯ್ದೆಗಳು ರದ್ದುಗೊಳ್ಳದಿದ್ದರೆ, ನಾನು ನನ್ನ ಜೀವನೋಪಾಯವನ್ನೇ ಕಳೆದುಕೊಳ್ಳುಬೇಕಾಗುತ್ತದೆ ಎಂದು ಪಂಜಾಬ್‌ನ ಕೃಷಿಕ ಸುಖ್ಪಾಲ್ ಬಜ್ವಾ ಹೇಳಿದ್ದಾರೆ. ರೈತರ ಆಂದೋಲನವನ್ನು ಬೆಂಬಲಿಸಲು 370 ಕಿ.ಮೀ. ದೂರ ಸೈಕಲ್ ನಲ್ಲಿ ಬಂದಿರುವುದಾಗಿ ತಿಳಿಸಿದ್ದಾರೆ. 

ತನ್ನ ಸೈಕಲ್ ಪಕ್ಕದಲ್ಲಿ ನಿಂತು, ಪಂಜಾಬ್ ಮೊಗಾ ಜಿಲ್ಲೆಯ 36 ವರ್ಷದ ಸುಖ್ಪಾಲ್ ಬಜ್ವಾ ನನ್ನ ಬಳಿ ಯಾವುದೇ ವಾಹನವಿಲ್ಲ ಹೀಗಾಗಿ ನಾನು ನಿತ್ಯ ಓಡಿಸುವ ಸೈಕಲ್ ನಲ್ಲೇ ಸಿಂಗು ಪ್ರತಿಭಟನಾ ಸ್ಥಳಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ. 

ನನ್ನ ಸೈಕಲ್ ಪ್ರಯಾಣವು ತುಂಬಾ ಕಠಿಣವಾಗಿತ್ತು. "ನನ್ನ ಊರನ್ನು ಬಿಟ್ಟು ಇಷ್ಟು ದೂರ ಬಂದಿರುವುದು ಇದೇ ಮೊದಲು. ಅಲ್ಲಲ್ಲಿ ನಿಲ್ಲಿಸಿ ಬಂದಿದ್ದರಿಂದ ನನಗೆ ಇಲ್ಲಿ ಬಂದು ತಲುಪಲು ಎರಡು ದಿನ ಬೇಕಾಯಿತು. ಆದರೆ ಮೋಟಾರು ವಾಹನದಲ್ಲಿ ಬಂದಿದ್ದರೆ ಆರು ಗಂಟೆಗಳಲ್ಲಿ ಇಲ್ಲಿಗೆ ಬಂದು ತಲುಪಬಹುದಿತ್ತು. ಪ್ರಮಾಣದ ವೇಳೆ ಟೈರ್ ಪಂಚರ್ ಆಗಿದ್ದರಿಂದ ಇಲ್ಲಿಗೆ ಬಂದು ತಲುಪಲು ವಿಳಂಬವಾಯಿತು ಎಂದರು. 

SCROLL FOR NEXT