ಸುನಿಲ್ ಕೊಠಾರಿ 
ದೇಶ

ಪದ್ಮಶ್ರೀ ಪುರಸ್ಕೃತ ನೃತ್ಯ ವಿಮರ್ಶಕ ಸುನಿಲ್ ಕೊಠಾರಿ ನಿಧನ

ಪದ್ಮಶ್ರೀ ಪ್ರಶಸ್ತಿ ವಿಜೇತ ನೃತ್ಯ ವಿಮರ್ಶಕ, ಸಂಶೋಧಕ  ಸುನಿಲ್ ಕೊಠಾರಿ (87) ಹೃದಯ ಸ್ತಂಭನದಿಂದ ದೆಹಲಿ ಆಸ್ಪತ್ರೆಯಲ್ಲಿ ಭಾನುವಾರ ಬೆಳಿಗ್ಗೆ ನಿಧನರಾದರು.

ನವದೆಹಲಿ: ಪದ್ಮಶ್ರೀ ಪ್ರಶಸ್ತಿ ವಿಜೇತ ನೃತ್ಯ ವಿಮರ್ಶಕ, ಸಂಶೋಧಕ  ಸುನಿಲ್ ಕೊಠಾರಿ (87) ಹೃದಯ ಸ್ತಂಭನದಿಂದ ದೆಹಲಿ ಆಸ್ಪತ್ರೆಯಲ್ಲಿ ಭಾನುವಾರ ಬೆಳಿಗ್ಗೆ ನಿಧನರಾದರು.

"ಅವರು ಸುಮಾರು ಒಂದು ತಿಂಗಳ ಹಿಂದೆಯೇ ಕೋವಿಡ್  ಸೋಂಕಿಗೆ ತುತ್ತಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು, ಅವರ ಆರೋಗ್ಯ ಸ್ಥಿತಿ ಉತ್ತಮವಾಗಿರಲಿಲ್ಲ" ಎಂದು ಕುಟುಂಬದ ಆಪ್ತೆ ಮತ್ತು ಸ್ವತಃ ನರ್ತಕಿಯಾಗಿರುವ ವಿಧಾ ಲಾಲ್ ಪಿಟಿಐಗೆ ಹೇಳಿದ್ದಾರೆ. 

ಕೊಠಾರಿ ಏಷ್ಯನ್ ಗೇಮ್ಸ್ ವಿಲೇಜ್‌ನ ಮನೆಯಲ್ಲಿ ಆರೋಗ್ಯ ಸಂಬಂಧ ಹೋರಾಟ ನಡೆಸಿದ್ದರೂ ಇಂದು ಬೆಳಿಗ್ಗೆ ಹೃದಯ ಸ್ತಂಭನದ ನಂತರ ಆಸ್ಪತ್ರೆಗೆ ದಾಖಲಾಗಿದ್ದರು. 

ಡಿಸೆಂಬರ್ 20, 1933 ರಂದು ಮುಂಬೈನಲ್ಲಿ ಜನಿಸಿದ ಕೊಠಾರಿ ಭಾರತೀಯ ನೃತ್ಯ ಪ್ರಕಾರಗಳ ಅಧ್ಯಯನಕ್ಕೆ ಪ್ರಾರಂಭಿಸುವ ಮುನ್ನ ಚಾರ್ಟರ್ಡ್ ಅಕೌಂಟೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಕೊಠಾರಿ ಅಸ್ಸಾಂನ ಸತ್ಯ ನೃತ್ಯಗಳು, ಭಾರತೀಯ ನೃತ್ಯದಲ್ಲಿ ಹೊಸ ನಿರ್ದೇಶನಗಳು, ಮತ್ತು ಭರತನಾಟ್ಯಂ, ಒಡಿಸ್ಸಿ, ಚೌ, ಕಥಕ್, ಕೂಚುಪುಡಿಮತ್ತು ಉದಯ್ ಶಂಕರ್ ಮತ್ತು ರುಕ್ಮಿಣಿ ದೇವಿ ಅರುಂಡೇಲ್ ಅವರ ಜೀವನಚರಿತ್ರೆ ಸೇರಿದಂತೆ ಭಾರತೀಯ ನೃತ್ಯ ಪ್ರಕಾರಗಳ ವಿಷಯದ ಬಗ್ಗೆ 20 ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ.

ನೃತ್ಯ ವಿದ್ವಾಂಸ ಕೊಠಾರಿ ರವೀಂದ್ರ ಭಾರತಿ ವಿಶ್ವವಿದ್ಯಾಲಯದಲ್ಲಿ ಉದಯ್ ಶಂಕರ್ ಅವರ ಸ್ಥಾನವನ್ನಲಂಕರಿಸಿದ್ದರು.ನ್ಯೂಯಾರ್ಕ್ ವಿಶ್ವವಿದ್ಯಾಲಯದ ನೃತ್ಯ ವಿಭಾಗದಲ್ಲಿ ಫುಲ್‌ಬ್ರೈಟ್ ಪ್ರಾಧ್ಯಾಪಕರಾಗಿ ಕಾರ್ಯನಿರ್ಬಹಿಸಿದ್ದರು.

ಭಾರತೀಯ ನೃತ್ಯ ಪ್ರಕಾರಗಳಿಗೆ ನೀಡಿದ ಕೊಡುಗೆಗಾಗಿ ಕೊಠಾರಿ ಅವರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (1995) ಸೇರಿದಂತೆಲವಾರು ಪ್ರಶಸ್ತಿ, ಪುರಸ್ಕಾರಗಳು ಲಭಿಸಿದೆ. ಗುಜರಾತ್ ಸಂಗೀತ ನಾಟಕ ಅಕಾಡೆಮಿ  ಗೌರವ ಪುರಸ್ಕಾರ(2000),  ಭಾರತ ಸರ್ಕಾರ ಪದ್ಮಶ್ರೀ (2001); ಮತ್ತು ನ್ಯೂಯಾರ್ಕ್, ಯುಎಸ್ಎ ನೃತ್ಯ ವಿಮರ್ಶಕರ ಸಂಘದ ಲೈಫ್ ಟೈಮ್ ಅಚೀವ್ಮೆಂಟ್ ಅವಾರ್ಡ್(2011) ಸಹ ಇವರಿಗೆ ಒಲಿದು ಬಂದಿತ್ತು. ಇದೇ ಅಲ್ಲದೆ ವಿದ್ವಾಂಸರಾಗಿ ಭಾರತೀಯ ನೃತ್ಯಕ್ಕೆ ನೀಡಿದ ಕೊಡುಗೆಗಾಗಿ ಅವರು ಸಂಗೀತ ನಾಟಕ ಅಕಾಡೆಮಿಯ ಚುನಾಯಿತ ಫೆಲೋ ಆಗಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಬ್ರೇಕ್ ಫಾಸ್ಟ್ 02: ಒಗ್ಗಟ್ಟು ಪ್ರದರ್ಶನ, ಹೈಕಮಾಂಡ್ ಹೇಳಿದಾಗ 'ಡಿಕೆ ಸಿಎಂ' ಎಂದ ಸಿದ್ದು! ಡಿ. 8ಕ್ಕೆ ದೆಹಲಿ ಭೇಟಿ-DKS

Sanchar Saathi ಆ್ಯಪ್ ಅಳವಡಿಕೆ ಕಡ್ಡಾಯವೇ? ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಕೊಟ್ರು ಮಹತ್ವದ update!

'ನಾಟಿ ಚಿಕನ್-ಇಡ್ಲಿ': ಇಂದಿನ ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಬ್ರೇಕ್ ಫಾಸ್ಟ್ ಮೀಟಿಂಗ್ ರಹಸ್ಯವೇನು?

ಮೊಬೈಲ್‌ಗಳಲ್ಲಿ 'ಸಂಚಾರ ಸಾಥಿ' ಆ್ಯಪ್‌ ಅಳವಡಿಕೆ ಕಡ್ಡಾಯ: ಸರ್ವಾಧಿಕಾರ ರಾಷ್ಟ್ರವನ್ನಾಗಿಸುವ ಹುನ್ನಾರ; ಪ್ರಿಯಾಂಕಾ ಆಕ್ರೋಶ

ಡಿಸಿಎಂ ನಿವಾಸಕ್ಕೆ ಬ್ರೇಕ್ ಫಾಸ್ಟ್ ಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ- ಡಿಕೆ ಸೋದರರಿಂದ ಸ್ವಾಗತ-Video

SCROLL FOR NEXT