Cricket: ಇತಿಹಾಸ ಬರೆದ ಭಾರತ: ಆಸ್ಟ್ರೇಲಿಯಾ-ವೆಸ್ಟ್ ಇಂಡೀಸ್ ಜಂಟಿ ವಿಶ್ವದಾಖಲೆ ಉಡೀಸ್!

ಭಾರತ ತಂಡವು ಅಂತಿಮ ಪಂದ್ಯದಲ್ಲಿ 23 ಸಿಕ್ಸರ್‌ಗಳನ್ನು ಬಾರಿಸಿತು. ಅಂತೆಯೇ ಒಟ್ಟಾರೆ ಐದು ಪಂದ್ಯಗಳಲ್ಲಿ ಭಾರತ 69 ಸಿಕ್ಸರ್‌ಗಳನ್ನು ಸಿಡಿಸಿ ಸರಣಿಯನ್ನು ಪೂರ್ಣಗೊಳಿಸಿತು.
Shatter Australia And West Indies Joint World Record
ಸಿಕ್ಸರ್ ಗಳ ದಾಖಲೆ ಬರೆದ ಭಾರತ
Updated on

ತಿರುವನಂತಪುರ: ಇತ್ತೀಚೆಗೆ ಅಂತ್ಯವಾದ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡ ವಿಶ್ವದಾಖಲೆ ನಿರ್ಮಿಸಿದ್ದು, ಆಸ್ಟ್ರೇಲಿಯಾ-ವೆಸ್ಟ್ ಇಂಡೀಸ್ ತಂಡಗಳು ನಿರ್ಮಿಸಿದ್ದ ಜಂಟಿ ದಾಖಲೆಯನ್ನು ಧೂಳಿಪಟ ಮಾಡಿದೆ.

ಕೇರಳದ ತಿರುವನಂತಪುರದ ಗ್ರೀನ್‌ಫೀಲ್ಡ್ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಐದನೇ ಹಾಗೂ ಅಂತಿಮ ಟಿ20ಐ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ 46 ರನ್‌ಗಳಿಂದ ಜಯಗಳಿಸಿ 4-1 ಅಂತರದಲ್ಲಿ ಸರಣಿ ಜಯ ಸಾಧಿಸುವ ಮೂಲಕ ಇತಿಹಾಸ ಸೃಷ್ಟಿಸಿದೆ. ಅಂತೆಯೇ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ಜಂಟಿಯಾಗಿ ಹೊಂದಿದ್ದ ವಿಶ್ವ ದಾಖಲೆಯನ್ನು ಹಿಂದಿಕ್ಕಿದೆ.

ಭಾರತ ತಂಡವು ಅಂತಿಮ ಪಂದ್ಯದಲ್ಲಿ 23 ಸಿಕ್ಸರ್‌ಗಳನ್ನು ಬಾರಿಸಿತು. ಅಂತೆಯೇ ಒಟ್ಟಾರೆ ಐದು ಪಂದ್ಯಗಳಲ್ಲಿ ಭಾರತ 69 ಸಿಕ್ಸರ್‌ಗಳನ್ನು ಸಿಡಿಸಿ ಸರಣಿಯನ್ನು ಪೂರ್ಣಗೊಳಿಸಿತು.

ಉಳಿದಂತೆ 5 ಪಂದ್ಯಗಳ ಟಿ20 ಸರಣಿಯಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ತಂಡಗಳ ಪಟ್ಟಿಯಲ್ಲಿ ತಲಾ 64 ಸಿಕ್ಸರ್ ಗಳನ್ನು ಸಿಡಿಸಿರುವ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಇವೆ. ಇಂಗ್ಲೆಂಡ್ ವೆಸ್ಟ್ ಇಂಡೀಸ್ ವಿರುದ್ದ56 ಸಿಕ್ಸರ್ ಗಳನ್ನು ಸಿಡಿಸಿದೆ.

Shatter Australia And West Indies Joint World Record
T20 ವಿಶ್ವಕಪ್ ನಲ್ಲಿ ಪಾಕಿಸ್ತಾನ ಒಂದು ಪಂದ್ಯ ಆಡದಿರಬಹುದೇ? ICC ನಿಯಮ ಏನು, ಆಗುವ ನಷ್ಟ ಎಷ್ಟು ಗೊತ್ತಾ!

ಇಶಾನ್ ಕಿಶನ್ ಭರ್ಜರಿ ಕಮ್ ಬ್ಯಾಕ್

ಕಳಪೆ ಫಾರ್ಮ್ ನಿಂದಾಗಿ ತಂಡದಿಂದ ದೂರ ಉಳಿದಿದ್ದ, ಇಶಾನ್ ಕಿಶನ್ ಈ ಸರಣಿ ಮೂಲಕ ಭರ್ಜರಿ ಕಮ್ ಬ್ಯಾಕ್ ಮಾಡಿದ್ದಾರೆ. ಈ ಸರಣಿಯಲ್ಲಿ ಐದು ಪಂದ್ಯಗಳಲ್ಲಿ ಒಂದು ಶತಕ ಸೇರಿದಂತೆ 215 ರನ್ ಗಳಿಸಿದ್ದಾರೆ. ತಮ್ಮ ಕಮ್ ಬ್ಯಾಕ್ ಸರಣಿಯಲ್ಲಿ ಕೇವಲ ನಾಲ್ಕು ಪಂದ್ಯಗಳನ್ನು ಆಡಿ 16 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.

ಈ ಸರಣಿಯಲ್ಲಿ ಅಭಿಷೇಕ್ ಶರ್ಮಾ ಕೂಡ ಭರ್ಜರಿ ಬ್ಯಾಟಿಂಗ್ ಮಾಡಿದ್ದು, ಈ ಸರಣಿಯಲ್ಲಿ 15 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಉಳಿದಂತೆ ನಾಯಕ ಸೂರ್ಯಕುಮಾರ್ ಯಾದವ್ (14) ಮತ್ತು ಶಿವಂ ದುಬೆ (12) ಸಹ ಸಿಕ್ಸರ್ ಗಳಿಕೆಯಲ್ಲಿ ಎರಡಂಕಿಯ ದಾಖಲೆಯನ್ನು ತಲುಪಿದರು.

ಭಾರತ ಕ್ರಿಕೆಟ್ ತಂಡ ಇತಿಹಾಸ ಸೃಷ್ಟಿ

ಭಾರತದ ದ್ವಿಪಕ್ಷೀಯ ಟಿ20ಐ ಸರಣಿಯಲ್ಲಿ ತಂಡವೊಂದು ಬಾರಿಸಿದ ಅತಿ ಹೆಚ್ಚು ಸಿಕ್ಸರ್‌ಗಳು ಇದಾಗಿದೆ. ಈ ದಾಖಲೆಯನ್ನು ಈ ಹಿಂದೆ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ತಂಡಗಳ ಹೆಸರಿಲ್ಲಿತ್ತು. ವೆಸ್ಟ್ ಇಂಡೀಸ್‌ನಲ್ಲಿ ನಡೆದ ಸರಣಿಯಲ್ಲಿ ಈ ದಾಖಲೆ ಹರಿದುಬಂದಿತ್ತು.

ಉಳಿದಂತೆ ಭಾರತದ 2ನೇ ಅತ್ಯುತ್ತಮ ಸಿಕ್ಸರ್ ಗಳು ದಕ್ಷಿಣ ಆಫ್ರಿಕಾ ವಿರುದ್ಧ ಬಂದಿದ್ದು ಆ ಸರಣಿಯಲ್ಲಿ ಭಾರತ ತಂಡ ಒಟ್ಟು 52 ಸಿಕ್ಸರ್ ಗಳು ಸಿಡಿಸಿತ್ತು. ಅಂತೆಯೇ ತವರಿನಿಂದ ಹೊರಗೆ ಅಂದರೆ ವಿದೇಶಿ ಟಿ20 ಸರಣಿಯಲ್ಲಿ ಮೆನ್ ಇನ್ ಬ್ಲೂ ಪಡೆ ಇಂಗ್ಲೆಂಡ್ ವಿರುದ್ಧ47 ಸಿಕ್ಸರ್ ಸಿಡಿಸಿತ್ತು.

ವಾಸ್ತವವಾಗಿ, ಭಾರತದ ತಂಡವು ಯಾವುದೇ ಟಿ 20 ಐ ಸರಣಿ ಅಥವಾ ಟೂರ್ನಮೆಂಟ್‌ನಲ್ಲಿ ಪೂರ್ಣ ಸದಸ್ಯರಿಂದ ಗಳಿಸಿದ ಅತ್ಯಧಿಕ ಸಿಕ್ಸರ್ ಗಳಾಗಿದೆ. ರೊಮೇನಿಯಾ (78) ಮತ್ತು ಫಿಲಿಪೈನ್ಸ್ (70) ಮಾತ್ರ ಹೆಚ್ಚು ಗರಿಷ್ಠ ಸಿಕ್ಸರ್ ಗಳನ್ನು ಸಿಡಿಸಿದ್ದವು. ಇವೆರಡೂ ತ್ರಿಕೋನ ಸರಣಿಯಲ್ಲಿ ಬಂದವಾಗಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com