ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

ಮೂರನೇ ಟಿ20 ಕ್ರಿಕೆಟ್ ನಲ್ಲಿ ಭಾರತ ವೆಸ್ಟ್ ಇಂಡೀಸ್ ಅನ್ನು 14 ರನ್‌ಗಳಿಂದ ಸೋಲಿಸಿ ಐದು ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿತು. ಭಾರತದ 223 ರನ್‌ಗಳಿಗೆ ಪ್ರತಿಯಾಗಿ, ವೆಸ್ಟ್ ಇಂಡೀಸ್ 7 ವಿಕೆಟ್‌ಗೆ 209 ರನ್‌ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು.
arshdeep singh
ಅರ್ಷದೀಪ್ ಸಿಂಗ್
Updated on: 

ನವದೆಹಲಿ: ಮೂರನೇ ಟಿ20 ಕ್ರಿಕೆಟ್ ನಲ್ಲಿ ಭಾರತ ವೆಸ್ಟ್ ಇಂಡೀಸ್ ಅನ್ನು 14 ರನ್‌ಗಳಿಂದ ಸೋಲಿಸಿ ಐದು ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿತು. ಭಾರತದ 223 ರನ್‌ಗಳಿಗೆ ಪ್ರತಿಯಾಗಿ, ವೆಸ್ಟ್ ಇಂಡೀಸ್ 7 ವಿಕೆಟ್‌ಗೆ 209 ರನ್‌ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು. ಸರಣಿಯ ನಾಲ್ಕನೇ ಟಿ20ಐ ಅಕ್ಟೋಬರ್ 14 ರಂದು ಹೈದರಾಬಾದ್‌ನಲ್ಲಿ ನಡೆಯಲಿದೆ. ಭಾರತ ಪರ ವೇಗದ ಬೌಲರ್ ಅರ್ಶ್‌ದೀಪ್ ಸಿಂಗ್ ಗರಿಷ್ಠ ಮೂರು ವಿಕೆಟ್‌ಗಳನ್ನು ಕಬಳಿಸಿದರೆ, ನಮನ್ ಧೀರ್ ಎರಡು ವಿಕೆಟ್‌ಗಳನ್ನು ಕಬಳಿಸಿದರು. ಅಕ್ಷರ್ ಪಟೇಲ್ ಮತ್ತು ನಿತೀಶ್ ರೆಡ್ಡಿ ತಲಾ ಒಂದು ವಿಕೆಟ್ ಪಡೆದರು.

ಭಾರತದ 224 ರನ್‌ಗಳ ಗುರಿಯನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್ ಕಳಪೆ ಆರಂಭವನ್ನು ಪಡೆಯಿತು. ನಾಯಕ ಮತ್ತು ವಿಕೆಟ್ ಕೀಪರ್ ಶೈ ಹೋಪ್ ಒಟ್ಟು 5 ರನ್‌ ಗಳಿಸಿದ್ದಾಗ ಅರ್ಶ್‌ದೀಪ್ ಸಿಂಗ್ ಅವರನ್ನು ಕ್ಲೀನ್‌ಬೌಲ್ಡ್ ಮಾಡಿದರು. ನಂತರ ಶಿಮ್ರಾನ್ ಹೆಟ್ಮೈರ್ ಕೆಲವು ಉತ್ತಮ ಹೊಡೆತಗಳನ್ನು ಆಡಿದರು. ಆದರೆ 26 ಎಸೆತಗಳಲ್ಲಿ 43 ರನ್‌ಗಳಿಗೆ ಔಟಾದರು. ರೋವ್ಮನ್ ಪೊವೆಲ್ ಏಳು ಎಸೆತಗಳಲ್ಲಿ ಐದು ರನ್ ಗಳಿಸಿ ಗಮನಾರ್ಹ ಪರಿಣಾಮ ಬೀರುವಲ್ಲಿ ವಿಫಲರಾದರು. ಸ್ಯಾಂಪ್ಸನ್ 21 ರನ್ ಗಳಿಸಿದರು. ಕೀಮೊ ಪಾಲ್ ಅವರನ್ನು ಅರ್ಶ್ದೀಪ್ ಸಿಂಗ್ ಎಸೆತದಲ್ಲಿ 10 ರನ್ ಗಳಿಸಿ ಔಟಾದರು. 20 ಎಸೆತಗಳಲ್ಲಿ 32 ರನ್ ಗಳಿಸಿದ ನಂತರ ಶೆರ್ಫೇನ್ ರುದರ್ಫೋರ್ಡ್ ನಿರ್ಗಮಿಸಿದರು. ಶಮರ್ ಸ್ಪ್ರಿಂಗರ್ 11 ಎಸೆತಗಳಲ್ಲಿ 35 ರನ್ ಹಾಗೂ ರೋಸ್ಟನ್ ಚೇಸ್ 5 ರನ್ ಗಳಿಸಿ ಅಜೇಯರಾಗಿ ಉಳಿದರು.

arshdeep singh
ಒಂದು ಕ್ಷಣದ ನಿರ್ಲಕ್ಷ್ಯ, ವಿಚಿತ್ರ ರನೌಟ್‌ಗೆ ತಿಲಕ್ ವರ್ಮಾ ಬಲಿ; ಗಂಭೀರ್ ಫುಲ್ ಗರಂ! ಆಗಿದ್ದೇನು? Video

ಅಭಿಷೇಕ್ ಶರ್ಮಾ ಅವರ ಅಬ್ಬರದ ಅರ್ಧಶತಕದ ಹೊರತಾಗಿಯೂ, ವೆಸ್ಟ್ ಇಂಡೀಸ್ ತಂಡವು ಭಾರತವನ್ನು 223 ರನ್‌ಗಳಿಗೆ ಆಲೌಟ್ ಮಾಡಿತು. ಅಭಿಷೇಕ್ 30 ಎಸೆತಗಳಲ್ಲಿ ಐದು ಸಿಕ್ಸರ್ ಮತ್ತು ಆರು ಬೌಂಡರಿಗಳೊಂದಿಗೆ 69 ರನ್ ಗಳಿಸಿದರು. ಇಶಾನ್ ಕಿಶನ್ (37 ರನ್, 18 ಎಸೆತ) ಅವರೊಂದಿಗೆ ಎರಡನೇ ವಿಕೆಟ್‌ಗೆ 108 ರನ್ ಪೇರಿಸುವ ಮೂಲಕ ಭಾರತಕ್ಕೆ ಭದ್ರ ಬುನಾದಿ ಒದಗಿಸಿದರು. ಆದಾಗ್ಯೂ, ಈ ಪಾಲುದಾರಿಕೆ ಮುರಿದ ನಂತರ, ಭಾರತ ನಿಯಮಿತ ಅಂತರದಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡಿತು.

ಆಫ್-ಸ್ಪಿನ್ನರ್ ರೋಸ್ಟನ್ ಚೇಸ್ ವೆಸ್ಟ್ ಇಂಡೀಸ್ ಪರ ಅತ್ಯಂತ ಯಶಸ್ವಿ ಬೌಲರ್ ಆಗಿದ್ದರು. 38 ರನ್‌ಗಳಿಗೆ ಎರಡು ವಿಕೆಟ್ ಪಡೆದರು. ವೇಗದ ಬೌಲರ್‌ಗಳಾದ ಶಮರ್ಹ್ ಸ್ಪ್ರಿಂಗರ್ ಮತ್ತು ಶಮರ್ಹ್ ಜೋಸೆಫ್ ಕೂಡ ತಲಾ ಎರಡು ವಿಕೆಟ್ ಪಡೆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com