

ಇಂದೋರ್: ವೆಸ್ಟ್ ಇಂಡೀಸ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ 223 ರನ್ ಪೇರಿಸಿದ ಭಾರತ ತಂಡ ವಿಚಿತ್ರ ದಾಖಲೆಯೊಂದನ್ನು ಬರೆದಿದೆ.
ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 3ನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗಧಿತ 20 ಓವರ್ ನಲ್ಲಿ 223 ರನ್ ಗಳಿಸಿ ಆಲೌಟ್ ಆಯಿತು.
ಈ ಪಂದ್ಯದಲ್ಲಿ ಭಾರತ ತಂಡದ ಪರ ಅಭಿಶೇಕ್ ಶರ್ಮಾ (69) ಅರ್ಧಶತಕ ಗಳಿಸಿದರೆ, ಇಶಾನ್ ಕಿಶನ್ (37) ಅವರಿಗೆ ಉತ್ತಮ ಸಾಥ್ ನೀಡಿದರು.
ಆರಂಭಿಕ ಆಘಾತದ ಹೊರತಾಗಿಯೂ ತಂಡಕ್ಕೆ ಸ್ಫೋಟಕ ಆರಂಭ ನೀಡಿದ ಅಭಿಷೇಕ್ ಶರ್ಮಾ ಕೇವಲ 30 ಎಸೆತಗಳನ್ನು ಎದುರಿಸಿ 5 ಸಿಕ್ಸರ್ ಮತ್ತು 6 ಬೌಂಡರಿ ಸಹಿತ 69 ರನ್ ಪೇರಿಸಿದರು.
ಉಳಿದಂತೆ ಭಾರತದ ಪರ ತಿಲಕ್ ವರ್ಮಾ (28), ನಿತೀಶ್ ಕುಮಾರ್ ರೆಡ್ಡಿ (21) ಮತ್ತು ಅಕ್ಸರ್ ಪಟೇಲ್ (20) ಕೆಳ ಕ್ರಮಾಂಕದಲ್ಲಿ ಸಮಯೋಚಿತ ಬ್ಯಾಟಿಂಗ್ ನಡೆಸಿ ತಂಡದ ಮೊತ್ತ 200ರ ಗಡಿ ದಾಟುವಂತೆ ನೋಡಿಕೊಂಡರು.
ಆಲೌಟ್ ನಲ್ಲೂ ದಾಖಲೆ
ಇನ್ನು ಇಂದಿನ ಪಂದ್ಯದಲ್ಲಿ 223 ರನ್ ಗಳಿಸಿ ಭಾರತ ಆಲೌಟ್ ಆಗಿದ್ದು, ಆ ಮೂಲಕ ಪುರುಷರ ಟಿ20ಐ ಪಂದ್ಯಗಳಲ್ಲಿ ತಂಡವೊಂದು ಆಲೌಟ್ ಆದ ಬಳಿಕವೂ ದಾಖಲಿಸಿರುವ ಗರಿಷ್ಠ ಮೊತ್ತಗಳ ಪಟ್ಟಿಯಲ್ಲಿ ಭಾರತ ಎರಡು ಬಾರಿ ಸ್ಥಾನ ಪಡೆದಿದೆ.
2026ರಲ್ಲಿ ನ್ಯೂಜಿಲೆಂಡ್ ವಿರುದ್ಧ ತಿರುವನಂತಪುರದಲ್ಲಿ ಭಾರತ 225 ರನ್ ಗಳಿಸಿದ್ದರೆ, ಇಂದು ವೆಸ್ಟ್ ಇಂಡೀಸ್ ವಿರುದ್ಧ ಇಂದೋರ್‌ನಲ್ಲಿ 223 ರನ್ ಗಳಿಸಿ ಆಲೌಟ್ ಆಗಿದೆ.
ಅಂಕಿಅಂಶಗಳ ಪ್ರಕಾರ, ಪುರುಷರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಲೌಟ್ ಆದ ತಂಡವೊಂದು ಗಳಿಸಿದ ಗರಿಷ್ಠ ಮೊತ್ತದ ದಾಖಲೆ ಟರ್ಕಿ ತಂಡದ ಹೆಸರಿನಲ್ಲಿದೆ. 2025ರಲ್ಲಿ ಸೋಫಿಯಾದಲ್ಲಿ ಬಲ್ಗೇರಿಯಾ ವಿರುದ್ಧ ಟರ್ಕಿ 237 ರನ್ ಗಳಿಸಿ ಆಲೌಟ್ ಆಗಿತ್ತು.
ಈ ಪಟ್ಟಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಗಳಿಸಿದ 225 ರನ್ ದಾಖಲೆ ಎರಡನೇ ಸ್ಥಾನದಲ್ಲಿದೆ. ಇಂದಿನ ವೆಸ್ಟ್ ಇಂಡೀಸ್ ವಿರುದ್ಧ ಇಂದೋರ್‌ನಲ್ಲಿ ಗಳಿಸಿದ 223 ರನ್ ದಾಖಲೆ ಮೂರನೇ ಸ್ಥಾನದಲ್ಲಿದೆ.
Highest all-out totals in Men’s T20Is
237 - Turkey vs Bulgaria, Sofia, 2025
225 - New Zealand vs India, Thiruvananthapuram, 2026
223 - India vs West Indies, Indore, 2026
219 - Canada vs Bahamas, King City (NE), 2025
207 - Pakistan vs UAE, Sharjah, 2025
205 - Ireland vs Afghanistan, Greater Noida, 2017
204 - New Zealand vs Pakistan, Auckland, 2025
ಕೆಳ ಕ್ರಮಾಂಕದಲ್ಲಿ ಪ್ರಿನ್ಸ್ ಯಾದವ್ ದಾಖಲೆ
ಇದೇ ವೇಳೆ, ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತದ 10 ಅಥವಾ 11ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಆಟಗಾರರು ಬಾರಿಸಿದ ಗರಿಷ್ಠ ಬೌಂಡರಿಗಳ ಪಟ್ಟಿಯಲ್ಲೂ ಹೊಸ ಹೆಸರು ದಾಖಲೆ ಸೇರ್ಪಡೆಯಾಗಿದೆ.
2007ರಲ್ಲಿ ಜೊಹಾನ್ಸ್‌ಬರ್ಗ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಎಸ್. ಶ್ರೀಶಾಂತ್ ನಾಲ್ಕು ಬೌಂಡರಿಗಳನ್ನು ಬಾರಿಸಿದ್ದರು. ಈ ಸಾಧನೆ ಭಾರತದ 10 ಮತ್ತು 11ನೇ ಕ್ರಮಾಂಕದ ಬ್ಯಾಟರ್‌ಗಳ ಪೈಕಿ ದಾಖಲಾದ ಗರಿಷ್ಠ ಬೌಂಡರಿಗಳ ಸಂಖ್ಯೆಯಾಗಿತ್ತು. ಇದಾದ ಬಳಿಕ 2011ರಲ್ಲಿ ಕೋಲ್ಕತ್ತಾದಲ್ಲಿ ಇಂಗ್ಲೆಂಡ್ ವಿರುದ್ಧ ರವಿಚಂದ್ರನ್ ಅಶ್ವಿನ್ ಮೂರು ಬೌಂಡರಿಗಳನ್ನು ಬಾರಿಸಿದ್ದರು.
ಇದೀಗ 2026ರಲ್ಲಿ ಅಂದರೆ ಇಂದು ಇಂದೋರ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪ್ರಿನ್ಸ್ ಯಾದವ್ ಕೂಡ ಮೂರು ಬೌಂಡರಿಗಳನ್ನು ಬಾರಿಸಿ ಈ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
Most boundaries by an India No.10/11 in a T20I
4 - S Sreesanth vs NZ, Johannesburg, 2007
3 - Ravichandran Ashwin vs ENG, Kolkata, 2011
3 - Prince Yadav vs WI, Indore, 2026