3rd T20I: ಅಭಿಷೇಕ್ ಶರ್ಮಾ ಭರ್ಜರಿ ಬ್ಯಾಟಿಂಗ್, ವಿಂಡೀಸ್ ಗೆ ಗೆಲ್ಲಲು 224 ರನ್ ಗುರಿ ನೀಡಿದ ಭಾರತ

ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 3ನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ವಿಂಡೀಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
Abhishek Sharma-Ishan Kishan
ಅಭಿಷೇಕ್ ಶರ್ಮಾ-ಇಶಾನ್ ಕಿಶನ್ ಬ್ಯಾಟಿಂಗ್
Updated on: 

ಇಂದೋರ್: ವೆಸ್ಟ್ ಇಂಡೀಸ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 224 ರನ್ ಗಳ ಬೃಹತ್ ಗುರಿ ನೀಡಿದೆ.

ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 3ನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ವಿಂಡೀಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು.

ಅದರಂತೆ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡ ನಿಗಧಿತ 20 ಓವರ್ ನಲ್ಲಿ 223 ರನ್ ಗಳಿಸಿ ಆಲೌಟ್ ಆಯಿತು.

ಭಾರತ ತಂಡದ ಪರ ಅಭಿಶೇಕ್ ಶರ್ಮಾ (69) ಅರ್ಧಶತಕ ಗಳಿಸಿದರೆ, ಇಶಾನ್ ಕಿಶನ್ (37) ಅವರಿಗೆ ಉತ್ತಮ ಸಾಥ್ ನೀಡಿದರು.

Abhishek Sharma-Ishan Kishan
3ನೇ ಟಿ20 ಪಂದ್ಯ: ವಿಂಡೀಸ್ ವಿರುದ್ಧ ಅಭಿಷೇಕ್ ಶರ್ಮಾ ಭರ್ಜರಿ ಬ್ಯಾಟಿಂಗ್, SKY ದಾಖಲೆ ಉಡೀಸ್!

ಆರಂಭಿಕ ಆಘಾತದ ಹೊರತಾಗಿಯೂ ತಂಡಕ್ಕೆ ಸ್ಫೋಟಕ ಆರಂಭ ನೀಡಿದ ಅಭಿಷೇಕ್ ಶರ್ಮಾ ಕೇವಲ 30 ಎಸೆತಗಳನ್ನು ಎದುರಿಸಿ 5 ಸಿಕ್ಸರ್ ಮತ್ತು 6 ಬೌಂಡರಿ ಸಹಿತ 69 ರನ್ ಪೇರಿಸಿದರು.

ಉಳಿದಂತೆ ಭಾರತದ ಪರ ತಿಲಕ್ ವರ್ಮಾ (28), ನಿತೀಶ್ ಕುಮಾರ್ ರೆಡ್ಡಿ (21) ಮತ್ತು ಅಕ್ಸರ್ ಪಟೇಲ್ (20) ಕೆಳ ಕ್ರಮಾಂಕದಲ್ಲಿ ಸಮಯೋಚಿತ ಬ್ಯಾಟಿಂಗ್ ನಡೆಸಿ ತಂಡದ ಮೊತ್ತ 200ರ ಗಡಿ ದಾಟುವಂತೆ ನೋಡಿಕೊಂಡರು.

ವಿಂಡೀಸ್ ಪರ ರೋಸ್ಟನ್ ಚೇಸ್, ಶಮರ್ ಜೋಸೆಫ್ ಮತ್ತು ಸ್ಪ್ರಿಂಗರ್ ತಲಾ 2 ವಿಕೆಟ್ ಪಡೆದರೆ, ಮೋಟಿ ಮತ್ತು ಕೀಮೋ ಪಾನ್ ತಲಾ 1 ವಿಕೆಟ್ ಪಡೆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com