3ನೇ ಟಿ20 ಪಂದ್ಯ: ವಿಂಡೀಸ್ ವಿರುದ್ಧ ಅಭಿಷೇಕ್ ಶರ್ಮಾ ಭರ್ಜರಿ ಬ್ಯಾಟಿಂಗ್, SKY ದಾಖಲೆ ಉಡೀಸ್!

ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡಕ್ಕೆ ಅಭಿಷೇಕ್ ಶರ್ಮಾ ಸ್ಫೋಟಕ ಆರಂಭ ನೀಡಿದರು. ಕೇವಲ 30 ಎಸೆತಗಳನ್ನು ಎದುರಿಸಿದ ಅಭಿಷೇಕ್ ಶರ್ಮಾ 5 ಸಿಕ್ಸರ್ ಮತ್ತು 6 ಬೌಂಡರಿ ಸಹಿತ 69 ರನ್ ಪೇರಿಸಿದರು.
Abhishek Sharma
ಅಭಿಷೇಕ್ ಶರ್ಮಾ
Updated on: 

ಇಂದೋರ್: ವೆಸ್ಟ್ ಇಂಡೀಸ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಭಾರತದ ಅಭಿಶೇಕ್ ಶರ್ಮಾ ಭರ್ಜರಿ ಬ್ಯಾಟಿಂಗ್ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 3ನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ವಿಂಡೀಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು.

ಅದರಂತೆ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡಕ್ಕೆ ಅಭಿಷೇಕ್ ಶರ್ಮಾ ಸ್ಫೋಟಕ ಆರಂಭ ನೀಡಿದರು. ಕೇವಲ 30 ಎಸೆತಗಳನ್ನು ಎದುರಿಸಿದ ಅಭಿಷೇಕ್ ಶರ್ಮಾ 5 ಸಿಕ್ಸರ್ ಮತ್ತು 6 ಬೌಂಡರಿ ಸಹಿತ 69 ರನ್ ಪೇರಿಸಿದರು.

ಅಂತೆಯೇ ತಮ್ಮ ಇದೇ ಇನ್ನಿಂಗ್ಸ್ ನಲ್ಲಿ ಅಭಿಶೇಕ್ ಶರ್ಮಾ 2,000 ರನ್ ಪೂರೈಸಿದ ಹೆಗ್ಗಳಿಕೆಗೂ ಪಾತ್ರರಾದರು.

Abhishek Sharma
'ಹಸಿದ ಸಿಂಹಕ್ಕೆ ಮೇಕೆಯನ್ನು ಒಪ್ಪಿಸಿದಂತಿತ್ತು': ಭಾರತದ ವಿರುದ್ಧ ಗೆದ್ದರೂ ದೊಡ್ಡ ತಪ್ಪು ಮಾಡಿದ ವೆಸ್ಟ್ ಇಂಡೀಸ್ ನಾಯಕನ ವಿರುದ್ಧ ಆರ್ ಅಶ್ವಿನ್ ಕಿಡಿ

ವೇಗದ 2 ಸಾವಿರ ರನ್

ಇನ್ನು ಅಭಿಷೇಕ್ ಶರ್ಮಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎದುರಿಸಿದ ಎಸೆತಗಳ ಲೆಕ್ಕದಲ್ಲಿ ಅತ್ಯಂತ ವೇಗವಾಗಿ 2,000 ರನ್ ಪೂರೈಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಸೂರ್ಯ ಕುಮಾರ್ ಯಾದವ್ ದಾಖಲೆ ಪತನ

ಅಭಿಷೇಕ್ ಶರ್ಮಾ ಈ ಸಾಧನೆಗಾಗಿ ಕೇವಲ 1,024 ಎಸೆತಗಳನ್ನು ಎದುರಿಸಿದ್ದು, ಈ ಮೂಲಕ ಭಾರತದ ಪರ ವೇಗದ (ಎಸೆತಗಳ ಲೆಕ್ಕಾಚಾರ) 2,000 ರನ್ ಪೂರೈಸಿದ ಬ್ಯಾಟರ್ ಎಂಬ ಕೀರ್ತಿಗೆ ಭಾಜನರಾದರು.

ಈವರೆಗೂ ಈ ದಾಖಲೆ ಸೂರ್ಯ ಕುಮಾರ್ ಯಾದವ್ ಅವರ ಹೆಸರಲ್ಲಿತ್ತು. ಸೂರ್ಯ 1,164 ಎಸೆತಗಳಲ್ಲಿ 2,000 ಟಿ20 ಅಂತಾರಾಷ್ಟ್ರೀಯ ರನ್ ಪೂರೈಸಿದ್ದರು. ಇದೀಗ ಅಭಿಷೇಕ್ ಅದಕ್ಕಿಂತಲೂ ಕಡಿಮೆ ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com