ದೇಶ

ಮನ್ ಕಿ ಬಾತ್: ಚಕ್ರವರ್ತಿ ಸೂಲಿಬೆಲೆ ನೇತೃತ್ವದ ಯುವ ಬ್ರಿಗೇಡ್ ತಂಡದ ಸಾಮಾಜಿಕ ಕೆಲಸಕ್ಕೆ ಪ್ರಧಾನಿ ಮೋದಿ ಪ್ರಶಂಸೆ

Srinivas Rao BV

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಡಿ.27 ರಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿರುವ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಕರ್ನಾಟಕದ ಯುವಾ ಬ್ರಿಗೇಡ್ ಬಗ್ಗೆಯೂ ಮಾತನಾಡಿದ್ದಾರೆ. 

ಇತ್ತೀಚೆಗಷ್ಟೇ ಶ್ರೀರಂಗಪಟ್ಟಣದಲ್ಲಿ ಚಕ್ರವರ್ತಿ ಸೂಲಿಬೆಲೆ ನೇತೃತ್ವದ ಯುವಾ ಬ್ರಿಗೇಡ್ ತಂಡ ಶಿಥಿಲಗೊಂಡಿದ್ದ, ಅವ್ಯವಸ್ಥೆಗೀಡಾಗಿದ್ದ ವೀರಭದ್ರಸ್ವಾಮಿ ದೇವಾಲಯದ ಜೀರ್ಣೋದ್ಧಾರ ಮಾಡಿತ್ತು. ಈ ಜೀರ್ಣೋದ್ಧಾರ ಕಾಮಗಾರಿಯ ಫೋಟೋಗಳು ಸಹ ವೈರಲ್ ಆಗಿತ್ತು. ಅದೇ ಫೋಟೋಗಳ ಬಗ್ಗೆ 
 ಪ್ರಧಾನಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮುಕ್ತ ಕಂಠದಿಂದ ಶ್ಲಾಘಿಸಿದ್ದು, ಇಚ್ಛಾಶಕ್ತಿ, ಬದ್ಧತೆ ಇದ್ದಲ್ಲಿ ಯಾವುದನ್ನೂ ಸಾಧಿಸಬಹುದು ಎಂಬುದಕ್ಕೆ ಯುವಾ ಬ್ರಿಗೇಡ್ ತಂಡ ಉದಾಹರಣೆ ಎಂದು ಹೇಳಿದ್ದಾರೆ. 

"ಸಾಧಿಸುವ ಛಲ, ಚೈತನ್ಯ, ಮಾಡಬೇಕೆಂಬ ಹುಮ್ಮಸ್ಸು ಕಂಡಾಗ ದೇಶದ ಯುವಕರ ಬಗ್ಗೆ ಸಂತೋಷ ಮತ್ತು ಭರವಸೆ" ಮೂಡುತ್ತದೆ, ಇಂತಹ ಇಚ್ಛಾಶಕ್ತಿ ಹೊಂದಿದ ಯುವಕರಿಗೆ ಯಾವುದೂ ಸಹ ದೊಡ್ಡ ಸವಾಲಲ್ಲ ಹಾಗೂ ಅಂತಹ ಯುವ ಶಕ್ತಿಗೆ ಯಾವುದೂ ಅಸಾಧ್ಯವಲ್ಲ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಮೆಚ್ಚುಗೆ ಮಾತುಗಳಿಗೆ ಪ್ರತಿಕ್ರಿಯೆ ನೀಡಿರುವ ಯುವಾಬ್ರಿಗೇಡ್ ನ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ, ಪ್ರಧಾನಿಗಳ ಮೆಚ್ಚುಗೆಯ ಮಾತುಗಳಿಂದ ಈಗ ನಮ್ಮ ಶಕ್ತಿ ನೂರ್ಮಡಿಯಾಗಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.

SCROLL FOR NEXT