ದೇಶ

ಕೇಂದ್ರ ಸರ್ಕಾರ ನಮ್ಮ ಬೇಡಿಕೆ ಈಡೇರಿಸುವವರೆಗೆ ಹೊಸ ವರ್ಷಾಚರಣೆ ಇಲ್ಲ: ಪ್ರತಿಭಟನಾನಿರತ ರೈತರು

Lingaraj Badiger

ನವದೆಹಲಿ: ಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ರಾಷ್ಟ್ರ ರಾಜಧಾನಿ ದೆಹಲಿಯ ಗಡಿಯಲ್ಲಿ ಕಳೆದ ಒಂದು ತಿಂಗಳಿಂದ ಪ್ರತಿಭಟನೆ ನಡೆಸುತ್ತಿರುವ ಸಾವಿರಾರು ರೈತರು ಹೊಸ ವರ್ಷಾಚರಣೆ ಮಾಡದಿರಲು ನಿರ್ಧರಿಸಿದ್ದಾರೆ.

"ಕೇಂದ್ರ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ನಮಗೆ ಹೊಸ ವರ್ಷವಿಲ್ಲ" ಎಂದು ಕಳೆದ ನವೆಂಬರ್ 25 ರಿಂದ ದೆಹಲಿ-ಹರಿಯಾಣ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಪಂಜಾಬ್‌ನ ರೋಪರ್‌ನ ರೈತ ಹರ್ಜಿಂದರ್ ಸಿಂಗ್ ಅವರು ಹೇಳಿದ್ದಾರೆ.

ಕೇಂದ್ರ ಸರ್ಕಾರ ರೈತರೊಂದಿಗೆ ನಿನ್ನೆ ನಡೆಸಿದ ಮಾತುಕತೆ ವಿಫಲವಾಗಿದ್ದು, ಹೆಚ್ಚುತ್ತಿರುವ ವಿದ್ಯುತ್ ದರ ಮತ್ತು ಕೃಷಿ ತ್ಯಾಜ್ಯ ಸುಡುವಿಕೆಗೆ ದಂಡ ವಿಧಿಸುವ ಬಗ್ಗೆ ರೈತರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

"ಸರ್ಕಾರ ನಮ್ಮ ಶಕ್ತಿಯನ್ನು ನೋಡಲು ಬಯಸಿದರೆ, ನಾವು ಅದನ್ನು ತೋರಿಸುತ್ತೇವೆ." ಕೋಥಿಸ್" (ಬಂಗಲೆಗಳು)ನಲ್ಲಿ ವಾಸಿಸುವ ನಮ್ಮಂತಹ ಜನರು ಈಗ ರಸ್ತೆಯಲ್ಲಿ ಮಲಗಿದ್ದಾರೆ. ನಾವು ಒಂದು ತಿಂಗಳಿನಿಂದ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ ಮತ್ತು ಒಂದು ವರ್ಷದವರೆಗೆ ಪ್ರತಿಭಟನೆ ನಡೆಸಲು ನಾವು ಸಿದ್ಧರಿದ್ದೇವೆ” ಎಂದು ಹೋಶಿಯಾರ್‌ಪುರದ ಭೂಪಿಂದರ್ ಸಿಂಗ್ ಹೇಳಿದ್ದಾರೆ.

SCROLL FOR NEXT