ದೇಶ

ಸಿಯಾಚಿನ್ ಸಮೀಕ್ಷೆ ನಡೆಸಿ ಸೇನೆಗೆ ನೆರವಾಗಿದ್ದ ಕರ್ನಲ್ ನರೇಂದ್ರ ‘ಬುಲ್’ ಕುಮಾರ್ ನಿಧನ

Raghavendra Adiga

ನವದೆಹಲಿ: ಸಿಯಾಚಿನ್ ಹಿಮನದಿಯನ್ನು ಸಮೀಕ್ಷೆ ನಡೆಸಿ ಭಾರತೀಯ ಸೈನ್ಯಕ್ಕೆ ಸಹಾಯ ಮಾಡಿದ್ದ ಅಧಿಕಾರಿ ಕರ್ನಲ್ ನರೇಂದ್ರ ‘ಬುಲ್’ ಕುಮಾರ್ (ನಿವೃತ್ತ) ಇಂದು ದೆಹಲಿಯ ಸೇನಾ ಸಂಶೋಧನೆ ಮತ್ತು ರೆಫರಲ್ (ಆರ್ & ಆರ್) ಆಸ್ಪತ್ರೆಯಲ್ಲಿ ನಿಧನರಾದರು. 

ಅವರಿಗೆ 87 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಅವರು ಆಸ್ಪತ್ರೆಗೆ ದಾಖಲಾಗಿದ್ದರು.

ಕರ್ನಲ್ ನರೇಂದ್ರ ‘ಬುಲ್’ ಕುಮಾರ್  ಈಗ ಪಾಕಿಸ್ತಾನದಲ್ಲಿರುವ ರಾವಲ್ಪಿಂಡಿಯಲ್ಲಿ ಜನಿಸಿ ಕುಮೋವಾನ್ ರೆಜಿಮೆಂಟ್‌ಗೆ ಸೇರ್ಪಡೆಯಾಗಿದ್ದರು. ರಹಸ್ಯ ಸಾಹಸಯಾತ್ರೆಯ ನಂತರ, ಸಿಯಾಚಿನ್‌ನ ಕಾರ್ಯತಂತ್ರದ ಮಹತ್ವದ ಬಗ್ಗೆ ಕುಮಾರ್ ನೀಡಿದ್ದ ವರದಿ ಏಪ್ರಿಲ್ 13, 1984 ರಂದು ಪ್ರಧಾನಿ ಇಂದಿರಾ ಗಾಂಧಿಯವರಿಗೆ "ಆಪರೇಷನ್ ಮೇಘದೂತ್" ನಡೆಸಲು ಪ್ರೇರಣೆಯಾಗಿತ್ತು.

ಪಾಕಿಸ್ತಾನ ಸೈನ್ಯವನ್ನು ಮಣಿಸಲು ಭಾರತೀಯ ಪಡೆಗಳಿಗೆ ಸಹಾಯವಾಗುವಂತೆ ಸಿಯಾಚಿನ್ ಹಿಮನದಿಯನ್ನು ವಶಕ್ಕೆ ಪಡೆಯಲಾಗಿತ್ತು.. ಹಿಮನದಿಯ ಮೇಲೆ ಭಾರತ ಮತ್ತು ಪಾಕಿಸ್ತಾನವನ್ನು ಬೇರ್ಪಡಿಸುವ 109 ಕಿ.ಮೀ ಆಕ್ಚುವಲ್ ಗ್ರೌಂಡ್ ಪೊಜಿಷನ್ ಲೈನ್ (ಎಜಿಪಿಎಲ್) ಇದ್ದು ಇದು ಕರ್ನಲ್ ಕುಮಾರ್ ಅವರ ಸಾಹಸಮಯ ದಂಡಯಾತ್ರೆಯ ಫಲಿತಾಂಶವಾಗಿದೆ.

ಕರ್ನಲ್ ನರೇಂದ್ರ ‘ಬುಲ್’ ಕುಮಾರ್ (ನಿವೃತ್ತ)

ಸೈನ್ಯವು ದಂಡಯಾತ್ರೆಯ ಉಡಾವಣಾ ನೆಲೆಯನ್ನು ‘ಕುಮಾರ್ ಬೇಸ್’ ಎಂದು ಹೆಸರಿಸಿರುವುದು ಸೇನಾಧಿಕಾರಿಗೆ ಸಲ್ಲಿಸಿದ ಉತ್ತಮ ಗೌರವವಾಗಿದೆ. 1970 ರ ದಶಕದ ಮಧ್ಯಭಾಗದಲ್ಲಿ ಕುಮಾರ್ ಅವರನ್ನು ಗುಲ್ಮಾರ್ಗ್‌ನ ಹೈ ಆಲ್ಟಿಟ್ಯೂಡ್ ವಾರ್‌ಫೇರ್ ಸ್ಕೂಲ್ ಗೆ ಕಳುಹಿಸಲಾಯಿತು  ಅಲ್ಲಿ ಜರ್ಮನಿಯ ಸಂಶೋಧಕನೊಬ್ಬ ಯುಎಸ್ ರಚಿಸಿದ್ದ ಉತ್ತರ ಕಾಶ್ಮೀರದ ನಕಾಶೆಯನ್ನು ತೋರಿಸಿದಾಗ ಅದರಲ್ಲಿ ನಿಯಂತ್ರಣ ರೇಖೆ (ಎಲ್‌ಒಸಿ) ಸಿಯಾಚಿನ್ ಪಾಕಿಸ್ತಾನದಲ್ಲಿದೆ ಎನ್ನುವುದನ್ನು ಬಿಂಬಿಸಲಾಗುತ್ತು. 

ಸಿಯಾಚಿನ್ ಗ್ಲೇಸಿಯರ್ ಪಾಯಿಂಟ್ ಎನ್ಜೆ 9842 ರ ಉತ್ತರದಲ್ಲಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ 1949 ರ ಕರಾಚಿ ಒಪ್ಪಂದವು ಪಾಯಿಂಟ್ ಎನ್ಜೆ 9842 ರ ಉತ್ತರದ ಪ್ರದೇಶಗಳನ್ನು ಅಸ್ಪಷ್ಟವಾಗಿ ಗುರುತಿಸಿದೆ. ಆದಾಗ್ಯೂ, ಪಾಕಿಸ್ತಾನದ ತಂತ್ರವನ್ನು ಗ್ರಹಿಸಿದ ಭಾರತ, ಆಪರೇಷನ್ ಮೇಘದೂತ್ ಅನ್ನು ಪ್ರಾರಂಭಿಸಿತು ಮತ್ತು ಹಿಮನದಿಯನ್ನು ಆಕ್ರಮಿಸಿತು. ಈ ಹಿಂದೆ 1965 ರಲ್ಲಿ, ಅವರು ಕ್ಯಾಪ್ಟನ್ ಎಂ.ಎಸ್. ಕೊಹ್ಲಿ ನೇತೃತ್ವದ ಎವರೆಸ್ಟ್ ಪರ್ವತದ ಸಾಹಸಯಾತ್ರೆಯ ಭಾಗವಾಗಿದ್ದರು.

SCROLL FOR NEXT