ಸೂಪರ್ ಸ್ಟಾರ್ ರಜನಿಕಾಂತ್ 
ದೇಶ

#ಸಿಎಎಯಿಂದ ಮುಸ್ಲಿಮರಿಗೆ ಯಾವುದೇ ತೊಂದರೆ ಇಲ್ಲ, ಹೊರಗಿನವರ ಪತ್ತೆ ಮಾಡಲು ಎನ್ ಪಿಆರ್ ಬಹುಮುಖ್ಯ: ರಜನಿಕಾಂತ್

ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವಾಗಿ ನಡೆಯುತ್ತಿರುವ ಹೋರಾಟ ಮುಂದುವರೆದಿರುವಂತೆಯೇ ಇತ್ತ ಸೂಪರ್ ಸ್ಟಾರ್ ರಜನಿಕಾಂತ್ ಇದಕ್ಕೆ ಪ್ರತಿಕ್ರಿಯೆ ನೀಡಿ ಸುದ್ದಿಗೆ ಗ್ರಾಸವಾಗಿದ್ದಾರೆ.

ಚೆನ್ನೈ: ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವಾಗಿ ನಡೆಯುತ್ತಿರುವ ಹೋರಾಟ ಮುಂದುವರೆದಿರುವಂತೆಯೇ ಇತ್ತ ಸೂಪರ್ ಸ್ಟಾರ್ ರಜನಿಕಾಂತ್ ಇದಕ್ಕೆ ಪ್ರತಿಕ್ರಿಯೆ ನೀಡಿ ಸುದ್ದಿಗೆ ಗ್ರಾಸವಾಗಿದ್ದಾರೆ.

ಸಿಎಎ, ಎನ್ ಆರ್ ಸಿ ಮತ್ತು ಎನ್ ಪಿಆರ್ ಕುರಿತು ಚೆನ್ನೈನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ರಜನಿಕಾಂತ್ ಅವರು, ಸಿಎಎಯಿಂದ ಭಾರತದ ಯಾವುದೇ ಮುಸ್ಲಿಮರಿಗೂ ತೊಂದರೆಯಿಲ್ಲ. ಇದರಿಂದ ಭಯಗೊಳ್ಳುವ ಅಗತ್ಯವಿಲ್ಲ. ಕೇವಲ ಮುಸ್ಲೀಮರಷ್ಟೇ ಅಲ್ಲ ಸಿಎಎ ಯಿಂದ ಭಾರತದ ಯಾವುದೇ ಪ್ರಜೆಗೂ ಅಥವಾ ಆತನ ಹಕ್ಕೆಗೆ ಯಾವುದೇ ರೀತಿಯ ಧಕ್ಕೆಯಾಗುವುದಿಲ್ಲ. ಒಂದು ವೇಳೆ ಯಾವುದೇ ಮುಸ್ಲಿಮನಿಗೆ ಇದರಿಂದ ಧಕ್ಕೆಯಾದರೆ ಆಗ ಇದನ್ನು ವಿರೋಧಿಸುವ ಮೊದಲ ವ್ಯಕ್ತಿ ನಾನಾಗಿರುತ್ತೇನೆ ಎಂದು ಹೇಳಿದ್ದಾರೆ.

ಅಂತೆಯೇ ಎನ್ ಆರ್ ಸಿ ಕುರಿತು ಮಾತನಾಡಿದ ರಜನಿಕಾಂತ್, ಎನ್ ಆರ್ ಸಿ ಕುರಿತು ಇನ್ನೂ ಸೂಕ್ತ ನಿರ್ಧಾರ ಬಂದಿಲ್ಲ. ಹೀಗಾಗಿ ಅದರ ಕುರಿತು ಈಗಲೇ ಹೇಳಿಕೆ ನೀಡುವುದು ಸರಿಯಲ್ಲ ಎಂದು ಹೇಳಿದು. ಇನ್ನು ಎನ್ ಪಿಆರ್ ಕುರಿತು ಮಾತನಾಡಿದ ಅವರು, ರಾಷ್ಟ್ರೀಯ ಜನಸಂಖ್ಯಾ ನೋಂದಣಿಯಿಂದಾಗಿ ಹೊರಗಿನವರ ಪತ್ತೆ ಮಾಡಲು ಸಾಧ್ಯವಾಗುತ್ತದೆ. ನಮ್ಮವರಿಗೆ ಸಿಗಬೇಕಿದ್ದ ಹಕ್ಕುಗಳು ಬೇರೆಯವರ ಪಾಲಾಗುವುದು ತಪ್ಪುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ಜೊತೆ ವ್ಯಾಪಾರ ಒಪ್ಪಂದ: 'ನಮ್ಮ ತಲೆಗೇ ಬಂದೂಕು ಇಟ್ಟುಕೊಳ್ಳುವ ವ್ಯಾಪಾರ ಒಪ್ಪಂದಕ್ಕೆ ಭಾರತ ಸಹಿ ಹಾಕಲ್ಲ': ಪಿಯೂಷ್ ಗೋಯಲ್

ಟ್ರಂಪ್ ಕೋರಿಕೆಯ ಮೇರೆಗೆ ಭಾರತ ರಷ್ಯಾದಿಂದ ತೈಲ ಆಮದನ್ನು ತಗ್ಗಿಸಲಿದೆ: ಶ್ವೇತಭವನ

ಭಾರತದ ಗಡಿಯಲ್ಲಿ ಹೊಸದಾದ 'ವಾಯು ರಕ್ಷಣಾ ವ್ಯವಸ್ಥೆ' ನಿರ್ಮಿಸುತ್ತಿರುವ ಚೀನಾ! Satellite Images

ಮುಳ್ಳಂದಿ ಮುಖದ ಕಾಮಿಡಿ ಪೀಸ್! ನಮ್ಮ ತಂದೆ ಚಿಕ್ಕಬಳ್ಳಾಪುರ ಕಡೆ ಬಂದಿದ್ರೆ ನೀನು ಸುಂದರವಾಗಿ ಹುಟ್ಟುತ್ತಿದ್ದೆ: ಪ್ರತಾಪ್ ಸಿಂಹ ಲೇವಡಿ

Kurnool Bus Fire: ಆಂಧ್ರ ಪ್ರದೇಶದ ಕರ್ನೂಲ್ ಹೆದ್ದಾರಿಯಲ್ಲಿ ಹೈದರಾಬಾದ್-ಬೆಂಗಳೂರು ಖಾಸಗಿ ಬಸ್ ನಲ್ಲಿ ಭೀಕರ ಬೆಂಕಿ ಅವಘಡ: 21 ಮಂದಿ ಸಜೀವ ದಹನ-Video

SCROLL FOR NEXT