ದೇಶ

೨ ಲಕ್ಷ  ಲಂಚ ಸ್ವೀಕರಿಸುತ್ತಿದ್ದಾಗ ಸಿಬಿಐ ಬಲೆಗೆ ಬಿದ್ದ ದೆಹಲಿ ಡಿಸಿಎಂ ಓಎಸ್ ಡಿ 

Shilpa D

ನವದೆಹಲಿ: ದೆಹಲಿ ಉಪ ಮುಖ್ಯಮಂತ್ರಿ, ಮನೀಶ್ ಸಿಸೋಡಿಯಾ ಅವರ ಬಳಿ ಓ ಎಸ್ ಡಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಗೋಪಾಲಕೃಷ್ಣ ಮಾಧವ್, ವ್ಯಕ್ತಿಯೊಬ್ಬರಿಂದ ೨ ಲಕ್ಷ  ರೂ ಹಣವನ್ನು ಲಂಚ ಪಡೆಯುತ್ತಿದ್ದಾಗ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ಲಂಚದ ಹಣದ ಸಮೇತ ಸೆರೆ ಹಿಡಿದಿದ್ದಾರೆ. 

ಅಂಡಮಾನ್ ನಿಕೋಬಾರ್ ಡಿಯು ಡಮನ್ ನಾಗರೀಕ ಸೇವೆಗಳಿಗೆ ಸೇರಿದ ಆಧಿಕಾರಿಯಾಗಿರುವ ಆರೋಪಿ ಗೋಪಾಲಕೃಷ್ಣ ಮಾಧವ್, ಒಬ್ಬ ವ್ಯಕ್ತಿಯಿಂದ ೨ ಲಕ್ಷ ರೂಪಾಯಿ ಪಡೆದುಕೊಳ್ಳುತ್ತಿದ್ದ ವೇಳೆ ಸಿಬಿಐ ಅಧಿಕಾರಿಗಳು ಸೆರೆಹಿಡಿದಿದ್ದಾರೆ.   

ಈ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾ ಪಾತ್ರ ಇದೆಯೇ ಎಂಬುದನ್ನು ಸಿಬಿಐ ಅಧಿಕಾರಿಗಳು ವಿಚಾರಿಸುತ್ತಿದ್ದಾರೆ. ೨೦೧೫ ರಲ್ಲಿ ದೆಹಲಿಯ ಉಪ ಮುಖ್ಯಮಂತ್ರಿ ಓ ಎಸ್ ಡಿ ಯಾಗಿ ನೇಮಕಗೊಂಡಿದ್ದ ಗೋಪಾಲಕೃಷ್ಣ ಅವರನ್ನು ಚುನಾವಣೆಯ ಸಂದರ್ಭದಲ್ಲಿ ಬಂಧಿಸಿರುವುದು ತೀವ್ರ  ಚರ್ಚೆಯ ವಿಷಯವಾಗಿದೆ.

ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ದೆಹಲಿ ಉಪಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಪ್ರತಿಕ್ರಿಯಿಸಿದ್ದು, ಸದರಿ ಅಧಿಕಾರಿಯ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಸಿಬಿಐಗೆ ಕೋರಿದ್ದಾರೆ. 

ತಮ್ಮ ಐದು ವರ್ಷಗಳ ಅಧಿಕಾರಾವಧಿಯಲ್ಲಿ ಇಂತಹ ಅನೇಕ ಭ್ರಷ್ಟ ಅಧಿಕಾರಿಗಳ ಲಂಚ ಪಡಯುವಾಗ ಸಿಕ್ಕಿಬಿದ್ದಿದ್ದಾರೆ ಎಂದು ಹೇಳಿದ್ದಾರೆ.  

ದೆಹಲಿ ವಿಧಾನಸಭಾ ಚುನಾವಣೆಗೆ ಕೇವಲ ಎರಡು ದಿನಗಳಿರುವಾಗ ತಮ್ಮ ಓಎಸ್‌ಡಿಯನ್ನು ಬಂಧಿಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಹಿನ್ನಲೆಯಲ್ಲಿ ಸಿಸೋಡಿಯಾ ಟ್ವಿಟರ್‌ನಲ್ಲಿ ಈ ಪ್ರತಿಕ್ರಿಯೆ ನೀಡಿದ್ದಾರೆ.

SCROLL FOR NEXT