ಕಾಶಿ ವಿಶ್ವನಾಥ, ಬೌದ್ಧ ಯಾತ್ರಾ ಸ್ಥಳ, ತಿರುಪತಿಗೆ ಶ್ರೀಲಂಕಾ ಪ್ರಧಾನಿ ರಾಜಪಕ್ಸ 
ದೇಶ

ಕಾಶಿ ವಿಶ್ವನಾಥ, ಬೌದ್ಧ ಯಾತ್ರಾ ಸ್ಥಳ, ತಿರುಪತಿಗೆ ಶ್ರೀಲಂಕಾ ಪ್ರಧಾನಿ ರಾಜಪಕ್ಸ

ಶ್ರೀಲಂಕಾ ಪ್ರಧಾನಿ ಮಹಿಂದ ರಾಜಪಕ್ಸ 5 ದಿನಗಳ ಭಾರತ ಪ್ರವಾಸದಲ್ಲಿದ್ದು ಕಾಶಿ ವಿಶ್ವನಾಥ ದೇವಾಲಯ, ಸಾರನಾಥದಲ್ಲಿರುವ ಬೌದ್ಧ ಯಾತ್ರಾ ಸ್ಥಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. 

ಲಖ್ನೋ: ಶ್ರೀಲಂಕಾ ಪ್ರಧಾನಿ ಮಹಿಂದ ರಾಜಪಕ್ಸ 5 ದಿನಗಳ ಭಾರತ ಪ್ರವಾಸದಲ್ಲಿದ್ದು ಕಾಶಿ ವಿಶ್ವನಾಥ ದೇವಾಲಯ, ಸಾರನಾಥದಲ್ಲಿರುವ ಬೌದ್ಧ ಯಾತ್ರಾ ಸ್ಥಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. 

ರಾಜಪಕ್ಸ ಭೇಟಿ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರ್ಕಾರ ಭದ್ರತೆಯನ್ನು ಹೆಚ್ಚಿಸಿದೆ. ಕಾಶಿ ವಿಶ್ವನಾಥ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ರಾಜಪಕ್ಸ ಸಾರನಾಥ ದೇವಾಲಯಕ್ಕೆ ತೆರಳಲಿದ್ದು, ಉತ್ತರ ಪ್ರದೇಶದಲ್ಲೇ ರಾತ್ರಿ ತಂಗಲಿದ್ದಾರೆ. ಫೆ.10 ರಂದು ಬೆಳಿಗ್ಗೆ ಬೋಧ್ ಗಯಾ ಕೇಂದ್ರದಲ್ಲಿರುವ ಮಹಾಬೋಧಿ ದೇವಾಲಯಕ್ಕೆ ರಾಜಪಕ್ಸ ತೆರಳಲಿದ್ದು, ಆ ನಂತರ ತಿರುಪತಿ ವೆಂಕಟೇಶ್ವರ ದೇವಾಲಯದ ದರ್ಶನ ಮಾಡಲಿದ್ದಾರೆ. 

ಮಹಿಂದಾ ರಾಜಪಕ್ಸ ತಿರುಪತಿ ದೇವಾಲಯದ ಕಟ್ಟಾ ಭಕ್ತರಾಗಿದ್ದು, ತಿರುಪತಿ ದೇವಾಲಯದ ದರ್ಶನದ ಬಳಿಕ ಶ್ರೀಲಂಕಾಗೆ ವಾಪಸ್ಸಾಗಲಿದ್ದಾರೆ. 5 ದಿನಗಳ ಭಾರತ ಪ್ರವಾಸದಲ್ಲಿ ರಾಜಪಕ್ಸ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ವಿಷಯಗಳಾದಿಯಾಗಿ ಹಲವು ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT