ದೇಶ

ಘನ ಉದ್ದೇಶಕ್ಕಾಗಿ ಮನೆಯನ್ನು ದಾನ ಮಾಡಿದ ಎಸ್ ಪಿ ಬಾಲಸುಬ್ರಹ್ಮಣ್ಯಂ!

Srinivas Rao BV

ನೆಲ್ಲೂರು: ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಉದಾತ್ತ ಉದ್ದೇಶಕ್ಕಾಗಿ ತಮ್ಮ ಪಿತ್ರಾರ್ಜಿತ ಆಸ್ತಿಯನ್ನು ದಾನ ಮಾಡಿದ್ದಾರೆ. 

ನೆಲ್ಲೂರಿನ ತಿಪ್ಪರಾಜುವಾರಿ ರಸ್ತೆಯಲ್ಲಿರುವ ತಮ್ಮ ಪಿತ್ರಾರ್ಜಿತ ಮನೆಯನ್ನು ಕಂಚಿ ಕಾಮಕೋಟಿ ಪೀಠಕ್ಕೆ ಹಸ್ತಾಂತರಿಸಿದ್ದಾರೆ. ಧಾರ್ಮಿಕ ಚಿಂತನೆಗಳಲ್ಲಿ ಶ್ರದ್ಧೆ ಹೊಂದಿರುವ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ತಮ್ಮ ಪಿತ್ರಾರ್ಜಿತ ಮನೆಯನ್ನು ಸಂಸ್ಕೃತ ಹಾಗೂ ವೇದ ಪಾಠಶಾಲೆ ಆರಂಭಿಸುವುದಕ್ಕೆ ನೀಡಿದ್ದಾರೆ. 

ಈ ಉದ್ದೇಶಕ್ಕಾಗಿ ತಮ್ಮ ಮನೆಯನ್ನು ಹಸ್ತಾಂತರಿಸುವುದಾಗಿ ಎಸ್ ಪಿಬಿ ಘೋಷಿಸಿದ್ದರು. ಅದರಂತೆಯೇ ನಡೆದಿದ್ದು, ನೆಲ್ಲೂರಿನಲ್ಲಿ ಕಂಚಿ ಕಾಮಕೋಟಿ ಪೀಠದ ವಿಜಯೇಂದ್ರ ಸರಸ್ವತಿ ಸ್ವಾಮಿಗಳಿಗೆ ಹಸ್ತಾಂತರಿಸಿದ್ದಾರೆ. 

ದಕ್ಷಿಣ ಭಾರತದಾದ್ಯಂತ 1000 ಕ್ಕೂ ಹೆಚ್ಚು ಹಾಡುಗಳನ್ನು ಎಸ್ ಪಿಬಿ ಹಾಡಿದ್ದು, ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ಅತ್ಯುತ್ತಮ ಹಿನ್ನೆಲೆ ಗಾಯನಕ್ಕಾಗಿ 6 ನ್ಯಾಷನಲ್ ಫಿಲ್ಮ್ ಪ್ರಶಸ್ತಿಗಳು ಎಸ್ ಪಿಬಿ ಅವರನ್ನು ಅರಸಿ ಬಂದಿದೆ.

ಚೆನ್ನೈ ನಲ್ಲಿ ನೆಲೆಸಿರುವ ಎಸ್ ಪಿಬಿ ಅವರ ಪಿತ್ರಾರ್ಜಿತ ಮನೆಯನ್ನು ವಾಣಿಜ್ಯೋದ್ದೇಶಗಳಿಗೆ ಬಳಕೆ ಮಾಡಲು ಹಲವಾರು ಅವಕಾಶಗಳು ಬಂದಿದ್ದರೂ ಸಹ ಅದನ್ನು ಲೆಕ್ಕಿಸದೇ ಘನ ಉದ್ದೇಶಕ್ಕಾಗಿ ದಾನ ಮಾಡಿದ್ದಾರೆ.

SCROLL FOR NEXT