ಮೋಹನ್ ಭಾಗವತ್ 
ದೇಶ

ಜಗತ್ತಿನಲ್ಲಿ ಮೂರನೇ ಮಹಾಯುದ್ಧದ ಆತಂಕ ಹೆಚ್ಚುತ್ತಿದೆ: ಮೋಹನ್ ಭಾಗವತ್ 

ಸಮಾಜದಲ್ಲಿ ಹಿಂಸಾಚಾರ ಮತ್ತು ಅಸಮಾಧಾನ, ಅತೃಪ್ತಿ ಬೆಳೆಯುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ರಾಷ್ಟ್ರೀಯ ಸ್ವಯಂ ಸೇವಕ(ಆರ್ ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್, ಜಗತ್ತಿನಲ್ಲಿ 3ನೇ ಮೂರನೇ ಮಹಾಯುದ್ಧದ ಬೆದರಿಕೆ ಹೆಚ್ಚಾಗುತ್ತಿದೆ ಎಂದಿದ್ದಾರೆ.

ಅಹಮದಾಬಾದ್: ಸಮಾಜದಲ್ಲಿ ಹಿಂಸಾಚಾರ ಮತ್ತು ಅಸಮಾಧಾನ, ಅತೃಪ್ತಿ ಬೆಳೆಯುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ರಾಷ್ಟ್ರೀಯ ಸ್ವಯಂ ಸೇವಕ(ಆರ್ ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್, ಜಗತ್ತಿನಲ್ಲಿ 3ನೇ ಮೂರನೇ ಮಹಾಯುದ್ಧದ ಬೆದರಿಕೆ ಹೆಚ್ಚಾಗುತ್ತಿದೆ ಎಂದಿದ್ದಾರೆ.


ಈ ಜಗತ್ತಿನಲ್ಲಿ ರಾಷ್ಟ್ರಗಳು ಹತ್ತಿರವಾದ ಪ್ರಕ್ರಿಯೆ ಮಧ್ಯೆ ಎರಡು ಮಹಾಯುದ್ಧಗಳು ನಡೆದವು. ಇದೀಗ ಮೂರನೇ ಮಹಾಯುದ್ಧದ ಬೆದರಿಕೆ ಹೆಚ್ಚಾಗುತ್ತಿದೆ. ಅದು ನಾನಾ ರೂಪಗಳಲ್ಲಿ ಕಂಡುಬರುತ್ತಿದೆ. ಸಮಾಜದಲ್ಲಿ ಹಿಂಸಾಚಾರ ಮತ್ತು ಅಸಮಾಧಾನ ಭುಗಿಲೆದ್ದಿದೆ. ಪ್ರತಿಯೊಬ್ಬರೂ, ಪ್ರತಿಯೊಂದು ಕ್ಷೇತ್ರದಲ್ಲಿರುವವರು ಕೂಡ ಪ್ರತಿಭಟನೆಗಿಳಿಯುತ್ತಿದ್ದಾರೆ ಎಂದು ಮೋಹನ್ ಭಾಗವತ್ ಅಹಮದಾಬಾದ್ ನಲ್ಲಿ ಕಾರ್ಯಕ್ರಮವೊಂದರಲ್ಲಿ ಹೇಳಿದರು.


ಇಂದು ಯಾರಿಗೂ ಸಂತೋಷವೆಂಬುದಿಲ್ಲ, ಎಲ್ಲೆಲ್ಲೂ ಅಸಮಾಧಾನ, ಹಿಂಸಾಚಾರ, ಗಿರಾಣಿ ಮಾಲೀಕರು, ಕಾರ್ಮಿಕರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಮಾಲೀಕರು ಮತ್ತು ನೌಕರರು ಘರ್ಷಣೆಗಿಳಿಯುತ್ತಾರೆ. ಸರ್ಕಾರ ಮತ್ತು ಜನರ ನಡುವೆ ಕಿತ್ತಾಟ ನಡೆಯುತ್ತಿದೆ. ಅಭಿವೃದ್ಧಿ ಹೊಂದಿದ ಜಗತ್ತಿನಲ್ಲಿ ಇಂದು ನಾವಿದ್ದೇವೆ ಎಂದು ಹೇಳಿಕೊಳ್ಳುತ್ತೇವೆ, 50-100 ವರ್ಷಗಳ ಹಿಂದೆ ಜನರಿಗೆ ಸಿಗದ ಸೌಲಭ್ಯ, ಸವಲತ್ತು ಇಂದು ಸಿಗುತ್ತಿದೆ, ಆದರೆ ಯಾರಿಗೂ ಸಮಾಧಾನ ಎಂಬುದಿಲ್ಲ. ಪಾಣಿಪತ್ ಯುದ್ಧದಲ್ಲಿ ಮರಾಠರು ಗೆದ್ದರೋ, ಇಲ್ಲವೋ ಯಾರು ಸತ್ತರು ಎಂಬ ಮಾಹಿತಿ ಪೂನಾಕ್ಕೆ ತಲುಪಲು ಒಂದು ತಿಂಗಳು ಮೇಲಾಯಿತು. ಆದರೆ ಇಂದು ಪರಿಸ್ಥಿತಿ ಹಾಗಿಲ್ಲ. ನೀವೊಂದು ಮೇಲ್ ಕಳುಹಿಸಿದರೆ 5 ನಿಮಿಷದೊಳಗೆ ನಿಮಗೆ ಪ್ರತಿಕ್ರಿಯೆ ಬರುತ್ತದೆ, ಆದರೆ ಈ ಸವಲತ್ತುಗಳು ಸದ್ಭಳಕೆಯಾಗುತ್ತಿಲ್ಲ ಎಂದರು. 


ಪ್ರಸ್ತುತ ಜಗತ್ತಿನಲ್ಲಿ ಧರ್ಮಾಂಧತೆ, ಹಿಂಸೆ ಮತ್ತು ಭಯೋತ್ಪಾದನೆ ಹೆಚ್ಚುತ್ತಿದೆ. ಈ ಸಂದರ್ಭದಲ್ಲಿ ಮಾನವರು ರೋಬೋಟ್‌ಗಳಾಗುವುದನ್ನು ತಡೆಯಲು ಭಾರತವು ಜಗತ್ತಿಗೆ ಬುದ್ಧಿವಂತಿಕೆ ಪ್ರದರ್ಶಿಸಬೇಕು. ಧರ್ಮ ಪ್ರತಿಪಾದನೆಯಲ್ಲಿ ಮುಂದಿರುವ ಭಾರತ ಜಗತ್ತಿಗೆ ಧರ್ಮವನ್ನು ಪ್ರಚಾರಮಾಡಬೇಕು. ಇದರಿಂದ ಜ್ಞಾನ ವೃದ್ಧಿಯಾಗುತ್ತದೆ. ಜಗತ್ತಿಗೆ ಜಾಗತಿಕ ಕುಟುಂಬ ವ್ಯವಸ್ಥೆ ಬಗ್ಗೆ ಹೇಳಿಕೊಟ್ಟವರು ನಾವು, ಜಾಗತಿಕ ಮಾರುಕಟ್ಟೆ ಬಗ್ಗೆ ಅಲ್ಲ ಎಂದು ಹೇಳಿದರು.


ಇಂದು ಉತ್ತಮ ಜಗತ್ತಿನಲ್ಲಿ ನಾವು ಬದುಕುತ್ತಿದ್ದೇವೆ ಎಂದು ಹೇಳುವುದು ಅರ್ಧ ಸತ್ಯವಾಗುತ್ತದೆ, ಏಕೆಂದರೆ ಸೌಲಭ್ಯಗಳು ಸರಿಯಾಗಿ ಹಂಚಿಕೆಯಾಗುವುದಿಲ್ಲ. ಜಂಗಲ್ ಆಡಳಿತ ಜಗತ್ತಿನಾದ್ಯಂತ ಇದೆ. ಸಮರ್ಥ ಮನುಷ್ಯನೊಬ್ಬ ದುರ್ಬಲ ವ್ಯಕ್ತಿಯನ್ನು ತುಳಿದು ಮೇಲೆ ಹೋಗುತ್ತಾನೆ. ಇಂದು ಜ್ಞಾನವನ್ನು ಜಗತ್ತನ್ನು ನಾಶ ಮಾಡಲು ಬಳಸಲಾಗುತ್ತದೆ ಎಂದು ಖೇದ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT