ದೇಶ

ಸಿಎಎ ವಿರುದ್ಧ ನಿರ್ಣಯಕ್ಕೆ ಮುಂದಾದ ತೆಲಂಗಾಣ ಸರ್ಕಾರ

Manjula VN

ಹೈದರಾಬಾದ್: ದೇಶದ ನಾಲ್ಕು ಬಿಜೆಪಿಯೇತರ ರಾಜ್ಯಗಳ ಬಳಿಕ ಇದೀಗ ತೆಲಂಗಾಣ ಸರ್ಕಾರದ ಕೂಡ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಿಂತಿದ್ದು, ಕಾಯ್ದೆ ವಿರುದ್ಧ ತನ್ನ ವಿಧಾನಸಭೆಯಲ್ಲಿ ನಿರ್ಣಯ ಮಂಡನೆ ಮಾಡಿದೆ ಎಂದು ವರದಿಗಳು ತಿಳಿಸಿವೆ. 

ತೆಲಂಗಾಣ ರಾಜ್ಯ ವಿಧಾನಸಭೆಯಲ್ಲಿ ಅಧಿವೇಶನ ನಡೆಯುತ್ತಿದ್ದು, ಅಧಿವೇಶನದ ವೇಳೆ ವಿರೋಧ ಪಕ್ಷ ಬಿಜೆಪಿ ನಾಯಕರು ಆಡಳಿತಾರೂಢ ಟಿಆರ್ಎಸ್ ಪಕ್ಷಕ್ಕೆ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಪೌರತ್ವ ಕಾಯ್ದೆ ವಿರುದ್ಧ ದೇಶದಾದ್ಯಂತ ವಿರೋಧ ವ್ಯಕ್ತಪಡಿಸುತ್ತಿದ್ದರೂ, ರಾಜ್ಯ ಸರ್ಕಾರ ಮಾತ್ರ ತುಟಿಬಿಚ್ಚುತ್ತಿಲ್ಲವೇಕೆ ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಇದೀಗ ಪ್ರತಿಕ್ರಿಯೆ ನೀಡಿರುವ ಸರ್ಕಾರ, ಮುಂದಿನ ಸಚಿವ ಸಂಪುಟದಲ್ಲಿ ಕಾಯ್ದೆ ವಿರುದ್ಧ ನಿರ್ಣಯಕೈಗೊಳ್ಳಲಾಗುತ್ತದೆ ಎಂದು ತಿಳಿಸಿದೆ. 

ತೆಲಂಗಾಣದ ಪ್ರಗತಿ ಭವನದಲ್ಲಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ನೇತೃತ್ವದಲ್ಲಿ ಶೀಘ್ರದಲ್ಲಿಯೇ ಸಂಪುಟ ಸಭೆ ನಡೆಯಲಿದೆ. ಧರ್ಮದ ಆಧಾರದ ಮೇಲೆ ಜನರನ್ನು ತಾರತಮ್ಯ ಮಾಡಬೇಡಿ. ಕಾನೂನಿನ ಪ್ರಕಾರ ಪ್ರತೀಯೊಬ್ಬರನ್ನು ಸಮಾನಾಗಿ ನೋಡಬೇಕು. ಹೀಗಾಗಿ ಕಾಯ್ದೆಯನ್ನು ಹಿಂಪಡೆಯಬೇಕೆಂದು ಕೇಂದ್ರದ ಬಿಜೆಪಿಗೆ ಟಿಆರ್ಎಸ್ ನಾಯಕರು ಮನವಿ ಮಾಡಿಕೊಂಡಿದ್ದಾರೆ. 

ಕೆಲ ತಿಂಗಳ ಹಿಂದಷ್ಟೇ ತೆಲಂಗಾಣ ರಾಜ್ಯ ಮುಖ್ಯಂತ್ರಿಗಳು ಸ್ಥಲೀಯ ಪಕ್ಷಗಳು ಹಾಗೂ ಇತರೆ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿದ್ದು, ಮಸೂದೆ ಕುರಿತು ಈ ವೇಳೆ ವಿರೋಧಗಳು ವ್ಯಕ್ತವಾಗಿದೆ. ಹೀಗಾಗಿಯೇ ಈ ರೀತಿಯ ನಿರ್ಣಯ ಕೈಗೊಂಡಿದ್ದಾರೆಂದು ಮೂಲಗಳು ತಿಳಿಸಿವೆ.

SCROLL FOR NEXT