ಸಂಗ್ರಹ ಚಿತ್ರ 
ದೇಶ

ಹಿಂದೂಗಳ ತಾಳ್ಮೆಯನ್ನೇ ದೌರ್ಬಲ್ಯ ಎಂದು ತಪ್ಪು ತಿಳಿಯಬೇಡಿ: ವಾರಿಸ್ ಪಠಾಣ್ ಗೆ ದೇವೇಂದ್ರ ಫಡ್ನವಿಸ್ ತಿರುಗೇಟು

ಹಿಂದೂಗಳ ತಾಳ್ಮೆಯನ್ನೇ ದೌರ್ಬಲ್ಯ ಎಂದು ತಪ್ಪು ತಿಳಿಯಬೇಡಿ ಎಂದು ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.

ನಾಗ್ಪುರ: ಹಿಂದೂಗಳ ತಾಳ್ಮೆಯನ್ನೇ ದೌರ್ಬಲ್ಯ ಎಂದು ತಪ್ಪು ತಿಳಿಯಬೇಡಿ ಎಂದು ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.

ದೇಶದಲ್ಲಿರುವ ನೂರು ಕೋಟಿ ಹಿಂದೂಗಳನ್ನು ಮಣಿಸಲು 15 ಕೋಟಿ ಮುಸ್ಲಿಮರು ಸಾಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಎಐಎಂಐಎಂ ಮುಖಂಡ ವಾರಿಸ್‌ ಪಠಾಣ್ ಹೇಳಿಕೆ ವಿರೋಧ ವ್ಯಕ್ತಪಡಿಸಿರುವ ದೇವೇಂದ್ರ ಫಡ್ನವಿಸ್ ಅವರು, 'ನಮ್ಮ ತಾಳ್ಮೆಯನ್ನೇ ನೀವು ದೌರ್ಬಲ್ಯ ಎಂದು ತಪ್ಪು ತಿಳಿಯಬೇಡಿ’ ಎಂದು ಖಡಕ್ ತಿರುಗೇಟು ನೀಡಿದ್ದಾರೆ. 

ಹಿಂದೂಗಳ ಕುರಿತು ಪ್ರಚೋದನಾಕಾರಿ ಹೇಳಿಕೆ ನೀಡಿರುವ ಪಠಾಣ್ ಅವರು ಕೂಡಲೇ ಕ್ಷಮೆ ಕೇಳಬೇಕು ಮತ್ತು ಉದ್ದವ್‌ ಠಾಕ್ರೆ ಸರ್ಕಾರ ಅವರ ವಿರುದ್ಧ ಕ್ರಮ ಜರುಗಿಸಬೇಕು. ಪಠಾಣ್‌ ಅವರು ಹೇಳಿಕೆಯನ್ನು ಖಂಡಿಸುತ್ತೇನೆ ಮತ್ತು ಅವರು ಎಲ್ಲರ ಕ್ಷಮೆಯಾಚಿಸಬೇಕು. ಒಂದು ವೇಳೆ ಅವರು ಕ್ಷಮೆ ಕೇಳದಿದ್ದರೆ, ಮಹಾರಾಷ್ಟ್ರ ಸರ್ಕಾರ ಅವರ ವಿರುದ್ಧ ಕ್ರಮಕೈಗೊಳ್ಳಬೇಕು. 100 ಕೋಟಿ ಹಿಂದೂಗಳು ಇರುವುದರಿಂದಲೇ, ಈ ದೇಶದಲ್ಲಿ ಅಲ್ಪಸಂಖ್ಯಾತರು ಸುರಕ್ಷಿತವಾಗಿದ್ದಾರೆ ಮತ್ತು ಸ್ವಾತಂತ್ರ್ಯವನ್ನು ಖುಷಿಯಿಂದ ಅನುಭವಿಸುತ್ತಿದ್ದಾರೆ ಎನ್ನುವುದನ್ನು ಪಠಾಣ್‌ ಅರ್ಥ ಮಾಡಿಕೊಳ್ಳಬೇಕು ಎಂದು ಫಡ್ನವಿಸ್ ಹೇಳಿದರು.

ಮುಸ್ಲಿಮರು ಬಹುಸಂಖ್ಯಾತರಿರುವ ದೇಶದಲ್ಲಿ ಈ ರೀತಿಯ ಹೇಳಿಕೆಯನ್ನು ನೀಡಲು ಯಾರಿಗೂ ಧೈರ್ಯವಿಲ್ಲ. ಹಿಂದೂಗಳಲ್ಲಿ ತಾಳ್ಮೆ ಇದೆ. ಆದರೆ, ಅದನ್ನೇ ದೌರ್ಬಲ್ಯ ಎಂದು ತಪ್ಪು ತಿಳಿಯಬಾರದು. ಅವರನ್ನು ಪ್ರಚೋದಿಸುವ ಕಾರ್ಯ ಯಾರೂ ಮಾಡಬಾರದು ಎಂದು ಫಡ್ನವಿಸ್ ಎಚ್ಚರಿಕೆ ನೀಡಿದರು. 

ಇದೇ ಫೆಬ್ರುವರಿ 16ರಂದು ಕಲಬುರ್ಗಿಯಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ ಪಠಾಣ್ ಈ ಹೇಳಿಕೆಯನ್ನು ನೀಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್‌ನಿಂದ 550ಕ್ಕೂ ಹೆಚ್ಚು ಭಾರತೀಯರ ಸ್ಥಳಾಂತರ; ಗಲ್ಫ್‌ನಿಂದ 20,000 ಜನ ಭಾರತಕ್ಕೆ ವಾಪಸ್

ಎಪ್ಸ್ಟೀನ್ ಲಿಂಕ್ ಆರೋಪ: 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಕೇಂದ್ರ ಸಚಿವ ಹರ್ದೀಪ್ ಪುರಿ ಪುತ್ರಿ!

ವಿಧಾನಸಭೆ ಕಲಾಪ: ಸ್ಪೀಕರ್ ಯುಟಿ ಖಾದರ್ ಸಿಟ್ಟಿಗೆ ಮೂವರು ಅಧಿಕಾರಗಳ ತಲೆದಂಡ!

ಎಲ್‌ಪಿಜಿ ಕೊರತೆ: 'ಜನ ಆತಂಕಗೊಳ್ಳುವ ಅವಶ್ಯಕತೆ ಇಲ್ಲ.. ಹೊಟೆಲ್ ನವರು ಪರ್ಯಾಯ ವ್ಯವಸ್ಥೆ ಮಾಡ್ಕೊಳ್ಳಿ'; K H Muniyappa

Video: 390 ಕೆಜಿ ತಂಬಾಕು ಅಕ್ರಮ ರವಾನೆ, ಪ್ರಶ್ನಿಸಿದ ಪೊಲೀಸ್ ಅನ್ನೇ ಕಾರಿನ ಬಾನೆಟ್ ಮೇಲೆ ಎಳೆದೊಯ್ದ ಭೂಪ!

SCROLL FOR NEXT