ದೇಶ

ಮಾಲೇಗಾಂವ್ ಸ್ಫೋಟ ಪ್ರಕರಣದ ವಿಚಾರಣೆ ವಿಳಂಬಕ್ಕೆ ಕಾರಣ ಏನು?: ಎನ್ಐಎಗೆ ಬಾಂಬೆ ಹೈಕೋರ್ಟ್ ಪ್ರಶ್ನೆ

Lingaraj Badiger

ಮುಂಬೈ: ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಪ್ರಮುಖ ಆರೋಪಿಯಾಗಿರುವ 2008ರ ಮಾಲೇಗಾಂವ್​ ಸ್ಫೋಟ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ 'ಯಾವುದೇ ಪರಿಣಾಮಕಾರಿ ಪ್ರಗತಿಯಾಗಿಲ್ಲ' ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಬಾಂಬೆ ಹೈಕೋರ್ಟ್, ವಿಳಂಬಕ್ಕೆ ಕಾರಣ ಏನು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ)ಯನ್ನು ಪ್ರಶ್ನಿಸಿದೆ.

ಉದ್ದೇಶ ಪೂರ್ವಕವಾಗಿಯೇ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ಪ್ರಕರಣದ ಮತ್ತೊಬ್ಬ ಆರೋಪಿ ಸಮೀರ್ ಕುಲಕರ್ಣಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಬಿಪಿ ಧರ್ಮಾಧಿಕಾರಿ ಮತ್ತು ನ್ಯಾಯಮೂರ್ತಿ ಎನ್ ಆರ್ ಬೊರ್ಕರ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಪ್ರಕರಣದ ವಿಳಂಬದ ಕುರಿತು ವಿವರಣೆ ನೀಡುವಂತೆ ಎನ್ಐಎಗೆ ಸೂಚಿಸಿದೆ.

20-18ರಲ್ಲಿ ಪ್ರಕರಣದ ವಿಚಾರಣೆಗಾಗಿ ಮುಂಬೈನಲ್ಲಿ ವಿಶೇಷ ಎನ್ಐಎ ಕೋರ್ಟ್ ಸ್ಥಾಪಿಸಲಾಗಿದ್ದರೂ ಸಹ ಕಳೆದ ಆರು ತಿಂಗಳಲ್ಲಿ ಕೇವಲ 14 ಸಾಕ್ಷ್ಯಗಳನ್ನು ಮಾತ್ರ ಪರಿಶೀಲಿಸಲಾಗಿದೆ ಎಂದು ಕುಲಕರ್ಣಿ ದೂರಿದ್ದಾರೆ.

2019ರ ಜನವರಿಯಲ್ಲಿ, ಯಾವುದೇ ಆರೋಪಿ ವಿಚಾರಣಾ ಕೋರ್ಟ್ ಗೆ ಸಹಕರಿಸದಿದ್ದರೆ ಅವರ ಬಗ್ಗೆ ಮುಚ್ಚಿದ ಕವರ್ ನಲ್ಲಿ ವರದಿ ನೀಡುವಂತೆ ಬಾಂಬೆ ಹೈಕೋರ್ಟ್ ಎನ್ಐಎ ಕೋರ್ಟ್ ಗೆ ಆದೇಶಿಸಿತ್ತು. ಆದರೂ ವಿಚಾರಣೆಯಲ್ಲಿ ಯಾವುದೇ ಪ್ರಗತಿ ಕಾಣದಿರುವುದಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

SCROLL FOR NEXT