ಕಮಲ್ ಹಾಸನ್ 
ದೇಶ

ಗೃಹಿಣಿಯರಿಗೆ ಸಂಬಳ! ಕಮಲ್ ಹಾಸನ್ ಪಕ್ಷದ 'ವಿಷನ್ ಡಾಕ್ಯುಮೆಂಟ್'

ಗೃಹಿಣಿಯರಿಗೆ ಸಂಬಳ, ಜನರನ್ನು ಸಬಲೀಕರಣಗೊಳಿಸಿ ಉದ್ಯಮಶೀಲತಾ ಮನೋಭಾವವನ್ನು ಉತ್ತೇಜಿಸುವ ವಾತಾವರಣವನ್ನು ಸೃಷ್ಟಿಸುವುದು ಮತ್ತಿತರ ಎಂಟರ್ ಪ್ರೈಸ್  ಎಕಾನಮಿ ಅಂಶಗಳ ಮೂಲಕ ತಮಿಳುನಾಡನ್ನು ಮರುರೂಪಿಸುವುದಾಗಿ ನಟ , ರಾಜಕಾರಣಿ ಕಮಲ್ ಹಾಸನ್ ಪ್ರಕಟಿಸಿದ್ದಾರೆ.

ಚೆನ್ನೈ: ಗೃಹಿಣಿಯರಿಗೆ ಸಂಬಳ, ಜನರನ್ನು ಸಬಲೀಕರಣಗೊಳಿಸಿ ಉದ್ಯಮಶೀಲತಾ ಮನೋಭಾವವನ್ನು ಉತ್ತೇಜಿಸುವ ವಾತಾವರಣವನ್ನು ಸೃಷ್ಟಿಸುವುದು ಮತ್ತಿತರ ಎಂಟರ್ ಪ್ರೈಸ್  ಎಕಾನಮಿ ಅಂಶಗಳ ಮೂಲಕ ತಮಿಳುನಾಡನ್ನು ಮರುರೂಪಿಸುವುದಾಗಿ ನಟ , ರಾಜಕಾರಣಿ ಕಮಲ್ ಹಾಸನ್ ಪ್ರಕಟಿಸಿದ್ದಾರೆ.

ಮಕ್ಕಳ್ ನಿಧಿ ಮೈಮ್ ಪಕ್ಷದ ಅಧ್ಯಕ್ಷರೂ ಆಗಿರುವ ಕಮಲ್ ಹಾಸನ್, ತಮ್ಮ ಪಕ್ಷದ ವಿಷನ್ ಡಾಕ್ಯುಮೆಂಟನ್ನು ಟ್ವೀಟ್ ಮಾಡಿದ್ದಾರೆ.ಈ ಕೇಂದ್ರಿತ ಸಿದ್ದಾಂತದೊಂದಿಗೆ ಎರಡು ಪಟ್ಟು ಬದಲಾವಣೆ ತರುವ ನಿಟ್ಟಿನಲ್ಲಿ ಪಕ್ಷ ಕಾರ್ಯನಿರ್ವಹಿಸುತ್ತಿದೆ. ತಮಿಳುನಾಡನ್ನು ಮರು ರೂಪಿಸಲಾಗುವುದು,  ರಾಜಕೀಯದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಾಗುವುದು ಎಂದು ಅವರು ತಿಳಿಸಿದ್ದಾರೆ.

ಅತಿಯಾದ ಭ್ರಷ್ಟಾಚಾರ ರಾಜ್ಯದ ವರ್ಚಸ್ಸನ್ನು ಕಡಿಮೆ ಮಾಡಿದೆ ಮತ್ತು  ಅಭಿವೃದ್ಧಿ ಹೊಂದುವ ಸಾಮರ್ಥ್ಯವನ್ನು ಕಡಿಮೆ ಮಾಡಿದೆ ಎಂದಿರುವ ಕಮಲ್ ಹಾಸನ್, ಎಂಟರ್ ಪೈಸ್ ಎಕನಾಮಿಯಿಂದ ಉದ್ಯೋಗ ಸೃಷ್ಟಿಯಾಗಲಿದ್ದು, ಪ್ರತಿ ತಮಿಳು ಜನರು ಸಮೃದ್ಧಿಯನ್ನು ಸಾಧಿಸಬಹುದು ಎಂದು ಅವರು ಹೇಳಿದ್ದಾರೆ. 

ಗೃಹಿಣಿಯರದು  ದೊಡ್ಡ ಕೆಲಸವಾಗಿದ್ದು, ಅವರಿಗೂ ಸಂಬಳ ನೀಡಬೇಕಾಗಿದೆ. ಅವರ ಉದ್ಯೋಗಕ್ಕೆ ಸಂಬಳ ನೀಡಬೇಕಾದ ಸಮಯ ಈಗ ಬಂದಿದೆ. ಅದನ್ನು ನಾವು ಈಡೇರಿಸುತ್ತೇವೆ ಎಂಬ ಭರವಸೆಯನ್ನು ವಿಷನ್ ಡಾಕ್ಯುಮೆಂಟ್ ನಲ್ಲಿ ನೀಡಿದ್ದಾರೆ.

ಕಳೆದ ಕೆಲ ವರ್ಷಗಳಿಂದ ತಮಿಳುನಾಡು ರಾಜಕಾರಣ ಸಾಗುತ್ತಿರುವ ದಿಕ್ಕು ಆತಂಕವನ್ನುಂಟುಮಾಡಿದೆ. ಮಹತ್ವಾಕಾಂಕ್ಷೆಯೊಂದಿಗೆ ಕೆಲಸ ಮಾಡುವಂತಹ ವಾತಾವರಣ ಸೃಷ್ಟಿಸುವ ಮೂಲಕ ನಮ್ಮ ಜನರ ಸಬಲೀಕರಣ ಮಾಡಲಾಗುವುದು ಎಂದು ಕಮಲ್ ಹಾಸನ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT