ದೇಶ

2020ರ ಹೊಸ ವರ್ಷದ ದಿನ ಭಾರತದಲ್ಲಿ ಜನಿಸಿದ ಶಿಶುಗಳು ಸುಮಾರು 70 ಸಾವಿರ, ಜಗತ್ತಿನಲ್ಲಿಯೇ ಫಸ್ಟ್ 

Sumana Upadhyaya

ನವದೆಹಲಿ: 2020ನೇ ಜನವರಿ 1, ಹೊಸ ವರ್ಷ ದಿನ ಭಾರತ ದೇಶದಲ್ಲಿ ಸುಮಾರು 67 ಸಾವಿರದ 385 ಶಿಶುಗಳು ಜನಿಸಿದ್ದಾರೆ.

ಜಗತ್ತಿನಲ್ಲಿಯೇ ಜನವರಿ 1ರಂದು ಹುಟ್ಟಿದ ಶಿಶುಗಳ ಸಂಖ್ಯೆ ಭಾರತದಲ್ಲಿ ಹೆಚ್ಚಾಗಿದ್ದು ನಂತರದ ಸ್ಥಾನದಲ್ಲಿ ಚೀನಾ(46,299), ನೈಜೀರಿಯಾ(26,039), ಪಾಕಿಸ್ತಾನ(16,787), ಇಂಡೋನೇಷ್ಯಾ(13,020) ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ(10,452) ಆಗಿವೆ.  


ಯುನಿಸೆಫ್ ಬಿಡುಗಡೆ ಮಾಡಿರುವ ಅಂಕಿಅಂಶದಿಂದ ಈ ಮಾಹಿತಿ ಹೊರಬಿದ್ದಿದ್ದು ಜಗತ್ತಿನಲ್ಲಿ ಹೊಸ ವರ್ಷದಂದು ಜನಿಸಿದ ಅಂದಾಜು 3 ಲಕ್ಷದ 92 ಸಾವಿರದ 078 ಶಿಶುಗಳಲ್ಲಿ ಶೇಕಡಾ 17ರಷ್ಟು ಶಿಶುಗಳು ಭಾರತದಲ್ಲಿ ಜನಿಸಿವೆ.


ನಿನ್ನೆ ಮೊದಲ ಮಗು ಫೆಸಿಫಿಕ್ ನ ಫಿಜಿಯಲ್ಲಿ ಜನಿಸಿದೆ. ಯುನೈಟೆಡ್ ಸ್ಟೇಟ್ಸ್ ನಲ್ಲಿ ಕೊನೆಯ ಮಗು ಹುಟ್ಟಿದೆ. ಇವರಲ್ಲಿ ಅನೇಕರು ಹೊಸ ವರ್ಷದಂದು ಮಗು ಜನಿಸಿದರೆ ಒಳ್ಳೆಯದು ಎಂಬ ಭಾವನೆಯಿಂದ ಕೃತಕ ಹೆರಿಗೆ ಮಾಡಿಸಿಕೊಂಡವರಾಗಿದ್ದಾರೆ.

SCROLL FOR NEXT