ದೇಶ

ಅಜ್ಜನ ಸಮಾಧಿ ಭೇಟಿಗೆ ಪ್ರಯತ್ನ, ಮೆಹಬೂಬಾ ಮುಫ್ತಿ ಪುತ್ರಿ ಬಂಧನ

Raghavendra Adiga

ಶ್ರೀನಗರ:  ತನ್ನ ಅಜ್ಜ ಮತ್ತು ಮಾಜಿ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಅವರ ಸಮಾಧಿಗೆ ಭೇಟಿ ನೀಡಲು ಯತ್ನಿಸಿದ ಮೆಹಬೂಬಾ ಮುಫ್ತಿ ಅವರ ಪುತ್ರಿ ಇಲ್ಟಿಜಾ ಮುಫ್ತಿ  ಅವರನ್ನು  ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅನಂತ್‌ನಾಗ್ ಜಿಲ್ಲೆಯ ಬಿಜ್‌ಬೆಹರಾ ಪ್ರದೇಶದಲ್ಲಿ ತನ್ನ ಅಜ್ಜನ ಸಮಾಧಿಗೆ ಭೇಟಿ ನೀಡಲು ಅನುಮತಿ ಕೋರಿರುವುದಾಗಿ ವಿಶೇಷ ಭದ್ರತಾ ದಳದ ಸದಸ್ಯ ಹೇಳಿದ್ದಾರೆ.

"ನನ್ನನ್ನು ಗೃಹಬಂಧನದಲ್ಲಿರಿಸಲಾಗಿದೆ. ಎಲ್ಲಿಗೂ ಹೋಗಲು ಅನುಮತಿಸುತ್ತಿಲ್ಲ" ಇಲ್ಟಿಜಾ  ಹೇಳಿದ್ದಾರೆ.

ಆದರೆ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು (ಕಾನೂನು ಮತ್ತು ಸುವ್ಯವಸ್ಥೆ) ಮುನೀರ್ ಖಾನ್ ಇಲ್ಟಿಜಾ ಅವರನ್ನು ವಶಕ್ಕೆ ಪಡೆದಿರುವ ವಿಚಾರವನ್ನು ನಿರಾಕರಿಸಿದರು ಮತ್ತು "ಅನನಂತ್‌ನಾಗ್ ಜಿಲ್ಲಾಡಳಿತವು ಅವರಿಗೆ ಸಮಾಧಿಗೆ ಭೇಟಿ ಕೊಡಲು ಅನುಮತಿಸಿತ್ತು" ಎಂದು ಹೇಳಿದರು.

"ಅವರು ಎಸ್‌ಎಸ್‌ಜಿ ರಕ್ಷಕರಾಗಿದ್ದಾರೆ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು, ಅವರು ಎಲ್ಲಿಯಾದರೂ ಭೇಟಿ ನೀಡುವ ಮೊದಲು ಪೊಲೀಸ್ ಅನುಮತಿ ಪಡೆಯಬೇಕಾಗಿದೆ" ಎಂದು ಖಾನ್ ಹೇಳಿದರು ಮಾಧ್ಯಮಗಳಿಗೆ ಪೊಲೀಸರು ನಿವಾಸವನ್ನು ತಲುಪಲು ಅನುಮತಿ ನೀಡಲಿಲ್ಲ ನಗರ ಪ್ರದೇಶದ ನಿವಾಸಿಗಳಿಗೆ ಮಾತ್ರ ರಸ್ತೆ ತೆರೆಯಲಾಗಿದೆ.

 ಎರಡು ಬಾರಿ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದ ಸಯೀದ್ ಅವರು ಜನವರಿ 7, 2016 ರಂದು ಅಲ್ಪಾವಧಿಯ ಅನಾರೋಗ್ಯದ ನಂತರ ನಿಧನ ಹೊಂದಿದ್ದರು.

"ನಾನು ನನ್ನ ಅಜ್ಜನ ಸಮಾಧಿಯನ್ನು ನೋಡಲು ಹೋಗಬೇಕೆಂದು ಬಯಸಿದ್ದೆ. ಇದು ನನ್ನ ಹಕ್ಕು. ಮೊಮ್ಮಗಳು ತನ್ನ ಅಜ್ಜನ ಮಾಧಿಗೆ ಭೇಟಿ ನೀಡುವುದು ಅಪರಾಧವೇ ಅಥವಾ ನಾನು ಅಲ್ಲಿ ಕಲ್ಲು ತೂರಾಟ ಅಥವಾ ಪ್ರತಿಭಟನೆಯನ್ನು ಆಯೋಜಿಸಲಿದ್ದೇನೆ ಎಂದು ಅವರು ಭಾವಿಸುತ್ತಾರೆಯೇ" ಎಂದು ಇಲ್ಟಿಜಾ ಹೇಳಿದರು. ನಾಗರಿಕ ಮತ್ತು ಪೊಲೀಸ್ ಆಡಳಿತ ತೀವ್ರ "ಅಧಿಕಪ್ರಸಂಗತನ" ದಿಂಡ ಕೂಡಿದೆ ಅದು ಕಣಿವೆಯಲ್ಲಿ ಶಾಂತಿ ಬಯಸುವುದಿಲ್ಲ" ಎಂದು ಅವರು ಆರೋಪಿಸಿದ್ದಾರೆ.

SCROLL FOR NEXT