ಸಂಗ್ರಹ ಚಿತ್ರ 
ದೇಶ

ಭಾರತದ ವಿರುದ್ಧ ಅಪಪ್ರಚಾರ ಮಾಡಲು ಯುವಕರ ನೇಮಕ: ಪಾಕ್ ಕುತಂತ್ರ ಬಯಲು

ಭಾರತದ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳಲು ಸದಾಕಾಲ ಹವಣಿಸುತ್ತಿರುವ ಪಾಕಿಸ್ತಾನ, ಈಗಾಗಲೇ ಎಲ್ಲಾ ರೀತಿಯಲ್ಲು ಮುಖಭಂಗವನ್ನು ಅನುಭವಿಸಿದೆ. ಆದರೂ, ತನ್ನ ಕುತಂತ್ರ ಬುದ್ಧಿಯನ್ನು ನಿಲ್ಲಿಸದ ಪಾಕಿಸ್ತಾನ, ಇದೀಗ ಭಾರತದ ವಿರುದ್ಧ ಅಪಪ್ರಚಾರ ಮಾಡಲು ಯುವಕರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ ಎಂದು ವರದಿಗಳು ತಿಳಿಸಿವೆ. 

ನವದೆಹಲಿ: ಭಾರತದ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳಲು ಸದಾಕಾಲ ಹವಣಿಸುತ್ತಿರುವ ಪಾಕಿಸ್ತಾನ, ಈಗಾಗಲೇ ಎಲ್ಲಾ ರೀತಿಯಲ್ಲು ಮುಖಭಂಗವನ್ನು ಅನುಭವಿಸಿದೆ. ಆದರೂ, ತನ್ನ ಕುತಂತ್ರ ಬುದ್ಧಿಯನ್ನು ನಿಲ್ಲಿಸದ ಪಾಕಿಸ್ತಾನ, ಇದೀಗ ಭಾರತದ ವಿರುದ್ಧ ಅಪಪ್ರಚಾರ ಮಾಡಲು ಯುವಕರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ ಎಂದು ವರದಿಗಳು ತಿಳಿಸಿವೆ. 

ಭಾರತದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸಲು ಜನರಲ್ ಆಸೀಪ್ ಗಫೂರ್ ನೇತೃತ್ವದ ಪಾಕಿಸ್ತಾನ ಇಂಟರ್ ಸರ್ವಿಸ್ ಪಬ್ಲಿಕ್ ರಿಲೇಷನ್ (ಐಎಸ್'ಪಿಆರ್) 1000ಕ್ಕೂ ಹೆಚ್ಚು ಯುವಕರ ನೇಮಕಾತಿ ಮಾಡಿಕೊಳ್ಳುತ್ತಿದೆ ಎಂಬ ವಿಚಾರ ಇದೀಗ ಬಹಿರಂಗಗೊಂಡಿದೆ. 

ಐಎಸ್'ಪಿಆರ್, ಪಾಕಿಸ್ತಾನ ಸೇನೆಯ ಮಾದ್ಯಮ ವಿಭಾಗವಾಗಿದ್ದು, ಪ್ರತಿ ತಿಂಗಳು ಸ್ಪರ್ಧೆಯೊಂದನ್ನು ಏರ್ಪಡಿಸುವ ಈ ಐಎಸ್'ಪಿಆರ್ ಅತೀ ಹೆಚ್ಚು ರೀಟ್ವೀಟ್ ಪಡೆಯುವ ಯುವಕರ ಟ್ವೀಟ್'ಗೆ ಪ್ರಶಸ್ತಿಗಳನ್ನು  ನೀಡುತ್ತಿದೆ. ಪ್ರಶಸ್ತಿಯು ಉದ್ಯೋಗ ಮತ್ತು ಫೌಜಿ ಫೌಂಡೇಶನ್ ನಲ್ಲಿ ಉದ್ಯೋಗ ಒಪ್ಪಂದವನ್ನು ಒಳಗೊಂಡಿದೆ ಎಂದು ಹೇಳಲಾಗುತ್ತಿದೆ. 

ಐಎಸ್'ಪಿಆರ್ ಕಳುಹಿಸುವ ಕೆಲವೊಂದು ಪ್ರಶ್ನೆಗಳಿಗೆ ಭಾರತದ ವಿರುದ್ಧ ಅಪಪ್ರಚಾರ ಸುದ್ದಿಯನ್ನು ಪೋಸ್ಟ್ ಮಾಡುವಂತಹ ಪ್ರಭಾವಿ ಸಾಮಾಜಿಕ ಜಾಲತಾಣ ಬಳಕೆದಾರರು ಈ ಸ್ಪರ್ಧೆಯಲ್ಲಿ ಜಯಗಳಿಸುತ್ತಾರೆ ಎಂದು ಮೂಲಗಳು ತಿಳಿಸಿವೆ. ಸ್ಪರ್ಧೆಯಲ್ಲಿ 100,00ಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆಂದು ವರದಿಗಳು ತಿಳಿಸಿವೆ. 

ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಯುವಕರಿಗೆ ಪ್ರಭಾವಿ ಭಾರತೀಯರ ಸಾಮಾಜಿಕ ಜಾಲತಾಣ ಖಾತೆಗಳ ಮಾಹಿತಿಯನ್ನು ಕೊಡಲಾಗುತ್ತಿದೆ. ಬಳಿಕ ಭಾರತದ ನಾಯಕರು, ಸೈನಿಕರು ಮತ್ತು ಅಧಿಕಾರಿಗಳ ಬಗ್ಗೆ ವಿಭಿನ್ನ ಸ್ಟೋರಿ ಬರೆಯುವಂತೆ ಹೇಳಲಾಗುತ್ತದೆ. ಇದರಲ್ಲಿ ಯಾರ ಪೋಸ್ಟ್ ಹೆಚ್ಚು ರೀಟ್ವೀಟ್ ಪಡೆದುಕೊಳ್ಲುತ್ತದೆಯೋ ಅವರನ್ನು ವಿಜೇತರೆಂದು ಘೋಷಣೆ ಮಾಡಲಾಗುತ್ತದೆ. ಅಲ್ಲದೆ, ಭಾರತದ ವಿರುದ್ಧ ವಿಭಿನ್ನ ಸ್ಟೋರಿಯವವರು ದೇಶದ ಯೋಧರಂತೆ ಪ್ರಮುಖರು ಎಂದು ಯುವಕರಿಗೆ ತಿಳಿಸಿದ್ದಾರೆಂದು ತಿಳಿದುಬಂದಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

ಬಿಗ್ ಬಾಸ್ 12 ಫಿನಾಲೆ ಹೊತ್ತಲ್ಲಿ ಕಿಚ್ಚ ಸುದೀಪ್‌ಗೆ ಸಂಕಷ್ಟ ತಂದ 'ರಣಹದ್ದು'!

CM ಕುರ್ಚಿ ಗುದ್ದಾಟ: ಅಗತ್ಯವಿದ್ದಾಗ ಸಿದ್ದರಾಮಯ್ಯ, ಶಿವಕುಮಾರ್‌ರನ್ನು ಮಾತುಕತೆಗೆ ಕರೆಯಲಾಗುವುದು; ಮಲ್ಲಿಕಾರ್ಜುನ ಖರ್ಗೆ

ಉತ್ತರ ಪ್ರದೇಶ: "ಆಕ್ಷೇಪಾರ್ಹ" ಸ್ಥಿತಿಯಲ್ಲಿದ್ದ ಪ್ರೇಮಿಗಳನ್ನು ಹೊಡೆದು ಕೊಂದ ಕುಟುಂಬಸ್ಥರು!

ಮಹಾತ್ಮ ಗಾಂಧಿ ಸಂದೇಶಗಳು ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಸ್ತುತ: ಸಬರಮತಿ ಆಶ್ರಮದಲ್ಲಿ ಜರ್ಮನ್ ಚಾನ್ಸೆಲರ್!

SCROLL FOR NEXT