ದೇಶ

ಯಶ್ವಂತ್ ಸಿನ್ಹಾ ಸಿಎಎ ವಿರೋಧಿ ಯಾತ್ರೆಗೆ ಪವಾರ್ ಪವರ್

Raghavendra Adiga

ಮುಂಬೈ: ಕೇಂದ್ರ ಸರ್ಕಾರದ ನೂತನ ಪೌರತ್ವ ಕಾನೂನು, ಪ್ರಸ್ತಾವಿತ ಎನ್‌ಆರ್‌ಸಿ ಮತ್ತು ಎನ್‌ಪಿಆರ್ ವಿರುದ್ಧ ಮಾಜಿ ಕೇಂದ್ರ ಸಚಿವ ಯಶ್ವಂತ್ ಸಿನ್ಹಾ ಅವರ ರಾಷ್ಟ್ರ ಮಂಚ್ ಆಯೋಜಿಸುತ್ತಿರುವ ಯಾತ್ರೆಯಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಬಾಗವಹಿಸಲಿದ್ದಾರೆ. 

"ಗಾಂಧಿ ಶಾಂತಿ ಯಾತ್ರೆ" ಜನವರಿ 9 ರಂದು ದಕ್ಷಿಣ ಮುಂಬೈನ ಗೇಟ್ ವೇ ಆಫ್ ಇಂಡಿಯಾದಿಂದ ಪ್ರಾರಂಭವಾಗಲಿದ್ದು, ಗಾಂಧೀಜಿ ಸ್ಮೃತಿದಿನವಾದ  ಜನವರಿ 30 ರಂದು ದೆಹಲಿಯ 'ರಾಜ್ ಘಾಟ್' ನಲ್ಲಿ ಮುಕ್ತಾಯಗೊಳ್ಳಲಿದೆ 

ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಸಚಿವರಾಗಿದ್ದ ಸಿನ್ಹಾ ಅವರು ಮುಂಬೈನಲ್ಲಿ ಪವಾರ್ ಅವರನ್ನು ಭೇಟಿಯಾದ ನಂತರ ಎನ್‌ಸಿಪಿ ಈ ಘೋಷಣೆ ಮಾಡಿದೆ. ಈ ಯಾತ್ರೆ ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶ, ಹರಿಯಾಣ ಮತ್ತು ದೆಹಲಿ ಮೂಲಕ 3,000 ಕಿ.ಮೀ.ದೂರ ಕ್ರಮಿಸಲಿದೆ.

"ಶರದ್ ಪವಾರ್ ಅವರು ಯಾತ್ರೆಯನ್ನು ಉದ್ಘಾಟಿಸಲಿದ್ದಾರೆ, ಹಾಗೆಯೇ ಅವರೂ ಸಹ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಎನ್‌ಸಿಪಿ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಯಾತ್ರೆಯಲ್ಲಿ ಭಾಗವಹಿಸುವರು " ಎಂದು ಮಹಾರಾಷ್ಟ್ರ ಸಚಿವ ಮತ್ತು ಎನ್‌ಸಿಪಿಯ ಮುಂಬೈ ಘಟಕದ ಮುಖ್ಯಸ್ಥ ನವಾಬ್ ಮಲಿಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಮುಸ್ಲಿಮೇತರ ನಿರಾಶ್ರಿತರಿಗೆ ಭಾರತೀಯ ಪೌರತ್ವ ನೀಡುವ ಪ್ರಸ್ತಾಪವನ್ನು ಹೊಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಅನೇಕ ರಾಜ್ಯಗಳಲ್ಲಿ ವಿರೋಧವನ್ನು ಎದುರಿಸುತ್ತಿದೆ. ಅಲ್ಲದೆ ಪ್ರಸ್ತಾವಿತ ನಾಗರಿಕರ ರಾಷ್ಟ್ರೀಯ ನೊಂದಣಿ ಯನ್ನು ಸಹ ಅನೇಕ ಪಕ್ಷಗಳು ವಿರೋಧಿಸುತ್ತಿವೆ. ಕೇರಳ ಮತ್ತು ಪಶ್ಚಿಮ ಬಂಗಾಳದಂತಹ ಕೆಲವು ರಾಜ್ಯಗಳು ರಾಷ್ಟ್ರೀಯ ಜನಸಂಖ್ಯಾ ನೋಂದಣಿಗೆ ವಿರುದ್ಧವಾಗಿವೆ.

SCROLL FOR NEXT