ದೇಶ

ಅಮೆರಿಕ-ಇರಾನ್ ಸಂಘರ್ಷ: ಭಾರತೀಯರ ರಕ್ಷಣೆಗೆ ಸರ್ವ ಸನ್ನದ್ಧ ಸ್ಥಿತಿಯಲ್ಲಿ ನೌಕಾಪಡೆ

Srinivasamurthy VN

ನವದೆಹಲಿ: ಅಮೆರಿಕ-ಇರಾನ್ ನಡುವಿನ ಸಂಘರ್ಷ ತಾರಕಕ್ಕೇರಿರುವಂತೆಯೇ ಇತ್ತ ಇರಾನ್, ಇರಾಕ್ ನಲ್ಲಿರುವ ಭಾರತೀಯರ ರಕ್ಷಣೆಗಾಗಿ ಭಾರತೀಯ ನೌಕಾಪಡೆ ಸರ್ವ ಸನ್ನದ್ಧ ಸ್ಥಿತಿಯಲ್ಲಿ ಸಜ್ಜಾಗಿ ನಿಂತಿದೆ.

ಮೂಲಗಳ ಪ್ರಕಾರ ಇರಾನ್ ಮತ್ತು ಇರಾಕ್ ನಲ್ಲಿರುವ ಭಾರತೀಯ ಪ್ರಜೆಗಳ ರಕ್ಷಣೆಗಾಗಿ ಭಾರತೀಯ ನೌಕಾಪಡೆ ತನ್ನ 4 ಸಾವಿರ ಟನ್ ತೂಕದ ಐಎನ್ಎಸ್ ತ್ರಿಖಂಡ್ ಸೇರಿದಂತೆ ಹಲವು ಯುದ್ಧ ನೌಕೆಗಳನ್ನು ಗಲ್ಫ್ ಆಫ್ ಒಮನ್ ಸಮುದ್ರ ಪ್ರದೇಶದಲ್ಲಿ ಸರ್ವಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ.

ಮೂಲಗಳ ಪ್ರಕಾರ ಭಾರತೀಯ ನೌಕಾಪಡೆ ಈಗಾಗಲೇ ಆಪರೇಷನ್ ಸಂಕಲ್ಪ್ ಎಂಬ ಹೆಸರಿನಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, ಕಳೆದ ಜೂನ್ ತಿಂಗಳಿನಲ್ಲಿಯೇ ಐಎನ್ಎಸ್ ತ್ರಿಖಂಡ್ ತನ್ನ ಕಾರ್ಯಾಚರಣೆ ಆರಂಭಿಸಿದೆ ಎನ್ನಲಾಗಿದೆ. ಇರಾಕ್ ನಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದರೆ ನೌಕೆಯ ಮಾರ್ಗ ಬದಲಿಸಿ ಅದನ್ನು ಮಧ್ಯ ಪ್ರಾಚ್ಯದತ್ತ ತಿರುಗಿಸಿ ಭಾರತೀಯ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ನೌಕಾಪಡೆ ಮೂಲಗಳು ತಿಳಿಸಿವೆ.

ಅಂತೆಯೇ ಅಗತ್ಯ ಬಿದ್ದರೆ ರಕ್ಷಣಾ ಕಾರ್ಯಾಚರಣೆಗೆ ಭಾರತೀಯ ವಾಯುಸೇನೆ ಕೂಡ ಕಾರ್ಯಾಚರಣೆಗೆ ಸಿದ್ಧವಾಗಿದ್ದು, ಅನಿವಾರ್ಯವಾದರೆ ತನ್ನ ಹೆವಿ ಲಿಫ್ಟ್ ವಿಮಾನ ಸಿ-17 ಗ್ಲೋಬ್ ಮಾಸ್ಟರ್ 3 ಯುದ್ಧ ವಿಮಾನವನ್ನು ಕಾರ್ಯಾಚರಣೆಗೆ ಇಳಿಸುವುದಾಗಿ ಹೇಳಿದೆ.

SCROLL FOR NEXT