ದೇಶ

ವಾರಣಾಸಿ ಕಾಶಿ ವಿಶ್ವನಾಥ್ ದೇಗುಲ ಪ್ರವೇಶಿಸುವ ಭಕ್ತರಿಗೆ ವಸ್ತ್ರಸಂಹಿತೆ: ಸದ್ಯದಲ್ಲಿಯೇ ಜಾರಿ 

Sumana Upadhyaya

ವಾರಣಾಸಿ: ಉತ್ತರ ಪ್ರದೇಶದ ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಹೋಗುವ ಭಕ್ತರಿಗೆ ವಸ್ತ್ರಸಂಹಿತೆ ಜಾರಿಗೆ ತರಲಾಗುತ್ತಿದೆ.


ಅದರ ಪ್ರಕಾರ, ಪುರುಷರು ಧೋತಿ ಮತ್ತು ಕುರ್ತಾ ಧರಿಸಿದರೆ ಮಹಿಳೆಯರು ಸೀರೆಯಲ್ಲಿ ಪ್ರವೇಶಿಸಬೇಕಾಗುತ್ತದೆ. ಭಕ್ತರು ಬೆಳಗ್ಗೆ 11 ಗಂಟೆಯವರೆಗೆ ದೇವಾಲಯ ಪ್ರವೇಶಿಸಬಹುದಾಗಿದೆ. ಕಾಶಿ ವಿದ್ವತ್ ಪರಿಷತ್ ಈ ನಿರ್ಧಾರಕ್ಕೆ ಬಂದಿದೆ.


ಈ ನಿಯಮವನ್ನು ಕಟ್ಟು ನಿಟ್ಟಾಗಿ ಪಾಲಿಸಲಾಗುತ್ತಿದ್ದು, ಪ್ಯಾಂಟ್, ಶರ್ಟ್, ಜೀನ್ಸ್ ಪ್ಯಾಂಟ್ ಗಳಲ್ಲಿ ದೇವಾಲಯ ಪ್ರವೇಶಿಸಿದರೆ ದೂರದಲ್ಲಿ ನಿಂತು ಪ್ರಾರ್ಥನೆ ಸಲ್ಲಿಸಬಹುದಾಗಿದೆ. ಗರ್ಭಗುಡಿಯ ಹತ್ತಿರ ಅವರನ್ನು ಬಿಡುವುದಿಲ್ಲ. ಈ ಹೊಸ ನಿಯಮ ಯಾವಾಗ ಜಾರಿಗೆ ಬರುತ್ತದೆ ಎಂದು ಹೇಳಿಲ್ಲವಾದರೂ ಸದ್ಯದಲ್ಲಿಯೇ ಜಾರಿಗೆ ಬರಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.


ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಲೋಕಸಭಾ ಕ್ಷೇತ್ರವಾಗಿರುವ ವಾರಣಾಸಿಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಗಂಗಾ ನದಿ ಮತ್ತು ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ನೇರ ಸಂಪರ್ಕ ಕಲ್ಪಿಸಲಾಗಿದೆ. 

SCROLL FOR NEXT