ದೇಶ

ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಮಕುಸಿತ:3 ಯೋಧರು ಹುತಾತ್ಮ, ಓರ್ವ ನಾಪತ್ತೆ

Manjula VN

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆ ಮಾಚಿಲ್ ಪ್ರದೇಶದಲ್ಲಿ ಸೇನಾ ಠಾಣೆಯ ಮೇಲೆ ಇದ್ದಕ್ಕಿದ್ದಂತೆಯೇ ಭಾರೀ ಹಿಮವೊಂದು ಕುಸಿದು ಬಿದ್ದ ಪರಿಣಾಮ ಮೂವರು ಯೋಧರು ಹುತಾತ್ಮರಾಗಿದ್ದು, ಮತ್ತೋರ್ವ ಯೋಧ ನಾಪತ್ತೆಯಾಗಿದ್ದಾರೆಂದು ವರದಿಗಳು ತಿಳಿಸಿವೆ. 

ಕಳೆದ ರಾತ್ರಿ 1 ಗಂಟೆ ಸುಮಾರಿಗೆ ಹಿಮ ಕುಸಿದು ಬಿದ್ದಿದ್ದು, ಘಟನೆಯಲ್ಲಿ ಓರ್ವ ಯೋಧ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಯೋಧನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಗಂಡರ್ ಬಲ್ ಜಿಲ್ಲೆಯಲ್ಲಿಯ ಸೊನ್ಮಾರ್ಗ್ ನಲ್ಲಿಯೂ ಹಿಮ ಕುಸಿದು ಬಿದ್ದಿದ್ದು, 5 ಮಂದಿ ನಾಗರೀಕರು ಸೇರಿ ಒಟ್ಟು 9 ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ನಾಲ್ವರನ್ನು ರಕ್ಷಣೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಉತ್ತರ ಕಾಶ್ಮೀರದಲ್ಲಿ ಕಳೆದ 48 ಗಂಟೆಗಲಲ್ಲಿ ಭಾರೀ ಪ್ರಮಾಣದಲ್ಲಿ ಹಿಮಕುಸಿತ ಸಂಭವಿಸಿದ್ದು, ಬಾರಾಮುಲ್ಲಾ ಜಿಲ್ಲೆಯಲ್ಲಿ ಹಿಮದಡಿ ಸಿಲುಕಿ ಕೊಂಡಿದ್ದ ಯುವತಿಯರನ್ನು ಅಧಿಕಾರಿಗಳು ರಕ್ಷಣೆ ಮಾಡಿದ್ದರು. 

SCROLL FOR NEXT