ಸಂಗ್ರಹ ಚಿತ್ರ 
ದೇಶ

ಅಂತಿಮ ಘಟ್ಟ ತಲುಪಿದ ಶಬರಿಮಲೆ ಯಾತ್ರೆ: ಇಂದು ಸಂಜೆ 6.45ಕ್ಕೆ ಮಕರಜ್ಯೋತಿ ದರ್ಶನ

ಪ್ರಸಕ್ತ ಸಾಲಿನ ಶಬರಿಮಲೆ ಯಾತ್ರೆ ಅಂತಿಮ ಘಟ್ಟ ತಲುಪಿದ್ದು, ಜನವರಿ 15ರ ಬುಧವಾರ ಸಂಜೆ 6.45ಕ್ಕೆ ಮಕರಜ್ಯೋತಿ ದರ್ಶನವಾಗಲಿದೆ. 

ಶಬರಿಮಲೆ: ಪ್ರಸಕ್ತ ಸಾಲಿನ ಶಬರಿಮಲೆ ಯಾತ್ರೆ ಅಂತಿಮ ಘಟ್ಟ ತಲುಪಿದ್ದು, ಜನವರಿ 15ರ ಬುಧವಾರ ಸಂಜೆ 6.45ಕ್ಕೆ ಮಕರಜ್ಯೋತಿ ದರ್ಶನವಾಗಲಿದೆ. 

ಪೊನ್ನಂಬಳಮೇಡಂ ಬೆಟ್ಟದಲ್ಲಿ ನಾಳೆ ಸಂಜೆ ಮಕರ ಜ್ಯೋತಿ ದರ್ಶನವಾಗಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ಸೋಮವಾರ ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಶುದ್ಧೀಕರಣ ಪ್ರಕ್ರಿಯೆಗಳನ್ನು ನಡೆಸಲಾಗಿದೆ. 

ಮಂಗಳವಾರ ಪಂಪ ವಿಳಕ್ಕು ಹಾಗೂ ಪಂಪಸಧ್ಯ ಪೂಜಗಳು ನಡೆಯಲಿದೆ. ಮಂಗಳವಾರ ತಡರಾತ್ರಿ 2 ಗಂಟೆಯಿಂದ ಮಕರ ಸಂಕ್ರಮಣ ಪೂಜೆಗಳು ನಡೆಯಲಿದ್ದು, ಬುಧವಾರ ಸಂಜೆ 6.45ರ ವೇಳಗೆ ಪೊನ್ನಂಬಳಮೇಡುವಿನಲ್ಲಿ ಪವಿತ್ರ ಮಕರ ಜ್ಯೋತಿಯ ದರ್ಶನವಾಗಲಿದೆ. 

ತದನಂತರ ಜನವರಿ 16ರಿಂದ 20ರವರೆಗೆ ಸಾರ್ವಜನಿಕ ದರ್ಶನಕ್ಕೆ ದೇಗುಲ ತೆರೆದಿರಲಿದ್ದು, ಜನವರಿ 21 ರಂದು ಪಂದಳ ರಾಜ ಮನೆತನದ ಪೂಜಾ ಕಾರ್ಯಗಳು ಅಂತಿಮಗೊಂಡ ಬಳಿಕ ದೇಗುಲದ ಬಾಗಿಲು ಮುಚ್ಚಲಿದೆ ಎಂದು ವರದಿಗಳು ತಿಳಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

SCROLL FOR NEXT