ದೇಶ

ಹಂತಕರಿಗೆ ಶಿಕ್ಷೆ ಜಾರಿಯಲ್ಲಿ ವಿಳಂಬದಿಂದ ನಿರಾಸೆ, ರಾಜಕೀಯ ಸೇರಲ್ಲ- ನಿರ್ಭಯಾ ತಾಯಿ

Nagaraja AB

ನವದೆಹಲಿ: ಹಂತಕರಿಗೆ ಶಿಕ್ಷೆ ಜಾರಿ ಮಾಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದರಿಂದ ವ್ಯವಸ್ಥೆ ಬಗ್ಗೆ ತಮಗೆ ನಿರಾಸೆಯಾಗಿರುವುದಾಗಿ ನಿರ್ಭಯಾ ತಾಯಿ ಆಶಾ ದೇವಿ ಹೇಳಿದ್ದಾರೆ. 

ಉದ್ದೇಶಪೂರ್ವಕವಾಗಿಯೇ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯನ್ನು ಮುಂದೂಡಲಾಗುತ್ತಿದೆ. ತಾರೀಖು ಮೇಲೆ ತಾರೀಖು ಬದಲಾಯಿಸಲಾಗುತ್ತಿದೆ ಎಂದು  ಅಸಮಾಧಾನ ವ್ಯಕ್ತಪಡಿಸಿದರು.

ಬಳಿಕ  ರಾಜಕೀಯದಲ್ಲಿ ತಮಗೆ ಆಸಕ್ತಿ ಇಲ್ಲ ಎಂದು ಹೇಳುವ ಮೂಲಕ ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲಿದ್ದಾರೆ ಎಂಬ ಊಹಾಪೋಹಗಳಿಗೆ ಅಂತ್ಯವಾಡಿದರು.

ರಾಜಕೀಯದಲ್ಲಿ ತಮಗೆ ಆಸಕ್ತಿ ಇಲ್ಲ.  ನನ್ನ ಮಗಳಿಗೆ ನ್ಯಾಯ ದೊರಕಿಸಲು ಹೋರಾಡಿದೆ. ನಾಲ್ವರು ಅತ್ಯಾಚಾರಿಗಳಿಗೆ ಮರಣದಂಡನೆಯಾಗಬೇಕೆಂದು ತಾವು ಬಯಸಿದ್ದಾಗಿ ತಿಳಿಸಿದರು.

ಅಶಾ ದೇವಿ ದೆಹಲಿ ಚುನಾವಣೆಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಕಾಂಗ್ರೆಸ್ ಟಿಕೆಟ್ ಮೇಲೆ ಸ್ಪರ್ಧಿಸಲಿದ್ದಾರೆ ಎಂದು ಕ್ರೀಡಾಪಟು ಹಾಗೂ ರಾಜಕಾರಣಿ ಕಿರ್ತಿ ಆಜಾದ್  ಟ್ವೀಟ್ ನಲ್ಲಿ ಹೇಳಿದ ನಂತರ  ಆಶಾ ದೇವಿ ರಾಜಕೀಯಕ್ಕೆ ಧುಮುಕ್ಕಲಿದ್ದಾರೆ ಎಂಬಂತಹ ಸುದ್ದಿ ಹರಿದಾಡಿತ್ತು.

ಇಂತಹ ಸುದ್ದಿಗಳು ಸುಳ್ಳೆಂದು , ನಮ್ಮ ಕುಟುಂಬಕ್ಕೆ ರಾಜಕೀಯದಲ್ಲಿ ಆಸಕ್ತಿ ಇಲ್ಲ ಎಂದು ನಿರ್ಭಯಾ ತಂದೆ ಬದ್ರಿನಾಥ್ ಕೂಡಾ ಸ್ಪಷ್ಟಪಡಿಸಿದ್ದಾರೆ. ಫೆಬ್ರವರಿ 8 ರಂದು ದೆಹಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಫೆಬ್ರವರಿ 11ಕ್ಕೆ ಮತ ಎಣಿಕೆ ಆಗಲಿದೆ. 

SCROLL FOR NEXT