ಸಂಗ್ರಹ ಚಿತ್ರ 
ದೇಶ

ನಿರ್ಭಯಾ 'ಹತ್ಯಾಚಾರ': ಫೆ.1ರಂದು ರೇಪಿಸ್ಟ್'ಗಳಿಗೆ ಗಲ್ಲು, ಹೊಸ ದಿನಾಂಕ ಕೂಡ ಶಿಕ್ಷೆ ಡೌಟ್

ನಿರ್ಭಯಾ ಗ್ಯಾಂಗ್ ರೇಪ್ ದೋಷಿಗಳಿಗೆ ಫೆಬ್ರವರಿ 1ಕ್ಕೆ ಗಲ್ಲುಶಿಕ್ಷೆ ಮರುನಿಗದಿ ಮಾಡಿ ದೆಹಲಿ ಕೋರ್ಟ್ ಹೊಸ ಡೆತ್ ವಾರಂಟ್ ಹೊರಡಿಸಿದೆ. ಆದರೆ, ಪ್ರಕರಣದ ದೋಷಿಗಳ ಮುಂದೆ ಕಾನೂನಿನ ಇನ್ನೂ ಕೆಲವು ಆಯ್ಕೆಗಳು ಇರುವ ಕಾರಣ ಫೆ.1ಕ್ಕೂ ನೇಣು ಜಾರಿ ಅನುಮಾನ ಎಂದು ಹೇಳಲಾಗುತ್ತಿದೆ. 

ದೋಷಿಗಳ ಮುಂದಿ ಇನ್ನೂ ಇವೆ ಹಲವು ಕಾನೂನು ಅವಕಾಶ: ನೇಣು ತಪ್ಪಿಸಿಕೊಳ್ಳಲು ಆರೋಪಿಗಳಿಂದ ಮುಂದುವರೆದ ಯತ್ನ

ನವದೆಹಲಿ: ನಿರ್ಭಯಾ ಗ್ಯಾಂಗ್ ರೇಪ್ ದೋಷಿಗಳಿಗೆ ಫೆಬ್ರವರಿ 1ಕ್ಕೆ ಗಲ್ಲುಶಿಕ್ಷೆ ಮರುನಿಗದಿ ಮಾಡಿ ದೆಹಲಿ ಕೋರ್ಟ್ ಹೊಸ ಡೆತ್ ವಾರಂಟ್ ಹೊರಡಿಸಿದೆ. ಆದರೆ, ಪ್ರಕರಣದ ದೋಷಿಗಳ ಮುಂದೆ ಕಾನೂನಿನ ಇನ್ನೂ ಕೆಲವು ಆಯ್ಕೆಗಳು ಇರುವ ಕಾರಣ ಫೆ.1ಕ್ಕೂ ನೇಣು ಜಾರಿ ಅನುಮಾನ ಎಂದು ಹೇಳಲಾಗುತ್ತಿದೆ. 

ನಾಲ್ವರು ಅಪರಾಧಿಗಳ ಪೈಕಿ ವಿನಯ್ ಶರ್ಮಾ ಹಾಗೂ ಮುಕೇಶ್ ಅವರ ಕ್ಯುರೇಟಿವ್ ಅರ್ಜಿಗಳು ಈಗಾಗಲೇ ತಿರಸ್ಕಾರಗೊಂಡಿವೆ. ಆದರೆ, ಪವನ್ ಗುಪ್ತಾ ಹಾಗೂ ಅಕ್ಷಯ್ ಸಿಂಗ್ ಅವರು ಇನ್ನೂ ಕ್ಯೂರೇಟಿವ್ ಅರ್ಜಿ ಸಲ್ಲಿಸಿಲ್ಲ. ಈ ಇಬ್ಬರ ಕ್ಯೂರೇಟಿವ್ ಅರ್ಜಿಗಳನ್ನು ಸಲ್ಲಿಸರು ಅವರ ವಕೀಲರು ಈಗ ಸಿದ್ಧತೆ ನಡೆಸುತತಿದ್ದಾರೆ. ಹೀಗಾಗಿ ಈ ಅರ್ಜಿಯೇನಾದರೂ ಈಗ ಸಲ್ಲಿಕೆಯಾದರೆ ಇದು ಇತ್ಯರ್ಥವಾಗುವ ವರೆಗೂ ಮುಂದಿನ ಪ್ರಕ್ರಿಯೆ ಬಗ್ಗೆ ಖಚಿತವಾಗಿ ಹೇಳಲು ಆಗುವುದಿಲ್ಲ. 

ದೋಷಿಗಳ ಮುಂದೆ ಇರುವ ಮತ್ತೊಂದು ಆಯ್ಕೆ ಎಂದರೆ ಕ್ಷಮಾದಾನ ಅರ್ಜಿ. ಶುಕ್ರವಾರ ಮುಕೇಶ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ತಿರಸ್ಕರಿಸಿದ್ದಾರೆ. ಈ ಹಿಂದೆ ವಿನಯ್ ಪರವಾಗಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಇದಕ್ಕೆ ತಾನು ಸಹಿ ಹಾಕಿರಲಿಲ್ಲ ಎನ್ನುತ್ತಿದ್ದಾನೆ ಆತ. ಹೀಗಾಗಿ ವಿನಯ್ ಸೇರಿದರೆ ಇನ್ನೂ ಮೂವರ ಕ್ಷಮಾದಾನ ಅರ್ಜಿ ಸಲ್ಲಿಕೆ ಇನ್ನೂ ಬಾಕಿ ಉಳಿದಂತಾಗುತ್ತದೆ. ಕ್ಷಮಾದಾನ ಅರ್ಜಿ ಸಲ್ಲಿಕೆಯಾದರೆ, ಅದು ಇತ್ಯರ್ಥ ಆಗುವ ವರೆಗೂ ಗಲ್ಲು ಜಾರಿ ಅನುಮಾನ. 

ಇನ್ನು ಡೆತ್ ವಾರೆಂಟ್ ವಿರುದ್ಧ ಮುಕೇಶ್ ಸಲ್ಲಿಸಿದ್ದ ಅರ್ಜಿ ವಜಾ ಆಗಿದೆ. ಆದರೆ, ಇನ್ನೂ ಮೂವರು ಡೆತ್ ವಾರಂಟ್ ಮುಂದೂಡಿಕೆ ಪ್ರಶ್ನಿಸಿಲ್ಲ. ಹೀಗೆ ಒಟ್ಟು ಮೂರು ಅವಕಾಶಗಳು ದೋಷಿಗಳ ಮುಂದಿದೆ. 

ಈ ನಡುವೆ ನೇಣು ತಪ್ಪಿಸಿಕೊಳ್ಳಲು ನಿರ್ಭಯಾ ರೇಪ್ ಹಾಗೂ ಕೆಲೆ ಪ್ರಕರಣದ ದೋಷಿ ಪವನ್ ಗುಪ್ತಾ ಹೊಸ ದಾಳವನ್ನು ಉರುಳಿಸಿದ್ದು, ಅತ್ಯಾಚಾರ ನಡೆದಾಗ ನಾನು ಅಪ್ರಾಪ್ತ ಬಾಲಕನಾಗಿದ್ದೆ ಎಂದು ಹೇಳಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾನೆ. ನನ್ನನ್ನು ಬಾಲಾರೋಪಿ ಎಂದು ಪರಿಗಣಿಸಿ ಎಂದು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕಾರ ಮಾಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods: ಸಾವಿನ ಸಂಖ್ಯೆ 157ಕ್ಕೇರಿಕೆ, 750ಕ್ಕೂ ಅಧಿಕ ಮಂದಿ ನಾಪತ್ತೆ, ನೇಪಾಳಕ್ಕೆ ಭಾರತ ನೆರವು! ಸಹಾಯವಾಣಿ ಬಿಡುಗಡೆ

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

ನೇಪಾಳ ಪ್ರವಾಹ: ಭಾರತಕ್ಕೆ ದೊಡ್ಡ ಆತಂಕವಿಲ್ಲ, ಜಲಾಶಯಗಳ ನೀರಿನ ಮಟ್ಟ ಇಳಿಕೆ: ಕೇಂದ್ರ ಸ್ಪಷ್ಟನೆ

Sugar Price: ಈರುಳ್ಳಿ ಬೆನ್ನಲ್ಲೇ ಇದೀಗ ಸಕ್ಕರೆ ಶಾಕ್: ಕೆಜಿಗೆ 65 ರೂ ದಾಟಿದ ದರ, ಗ್ರಾಹಕರ ಜೇಬಿಗೆ 'ಸಿಹಿ ಕಹಿ'!

2nd Test: ಬೌಂಡರಿ ಲೈನ್ ಬಳಿ ದುರ್ವರ್ತನೆ ತೋರಿದ್ದ ಲಂಕಾ ಆಟಗಾರ Prabath Jayasuriyaಗೆ ಬರೆ ಹಾಕಿದ ICC!