ದೇಶ

ಪ್ರತಿಭಟನೆ ವೇಳೆ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ: ಆಸ್ತಿ ಮುಟ್ಟುಗೋಲಿನಲ್ಲಿ ಕೇಂದ್ರದಿಂದ ತಾರತಮ್ಯ- ಓವೈಸಿ ಆರೋಪ

Manjula VN

ನಿಜಾಮಾಬಾದ್: ಪ್ರತಿಭಟನೆ ವೇಳೆ ಎದುರಾದ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವನ್ನು ಹೋರಾಟಗಾರರ ಆಸ್ತಿ ಮುಟ್ಟುಗೋಲು ಮಾಡಿಕೊಳ್ಳುವ ಮುಖಾಂತರ ಪರಿಹಾರ ಮಾಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ಆಸ್ತಿ ಮುಟ್ಟುಗೋಲಿನಲ್ಲಿ ಕೇಂದ್ರ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿಗಳು ತಾರತಮ್ಯ ಮಾಡುತ್ತಿದ್ದಾರೆಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. 

ಆರ್ಎಸ್ಎಸ್ ಜೊತೆಗೆ ಸಂಪರ್ಕ ಹೊಂಡಿರುವ ರಾಮ್ ಮಾಧವ್ ಅವರು, ಪೌರತ್ವ ಕಾಯ್ದೆ ಪ್ರತಿಭಟನೆ ವೇಳೆ ಎದುರಾದ ನಷ್ಟವನ್ನು ದಾಳಿ ಮಾಡಿದವರ ಆಸ್ತಿ ಜಪ್ತಿ ಮಾಡುವ ಮೂಲಕ ಪರಿಹಾರ ಮಾಡಿಕೊಳ್ಳಲಾಗುತ್ತದೆ ಎಂದು ಹೇಳಿದ್ದರು. ಜಾಟ್ ಹಾಗೂ ಪಟೇಲರ ಪ್ರತಿಭಟನೆ ವೇಳೆಯೂ ಕೋಟಿಗಟ್ಟಲೆ ಆಸ್ತಿ ಪಾಸ್ತಿಗಳು ನಷ್ಟವಾಗಿತ್ತು. ಅಂದು ಪ್ರತಿಭಟನೆ ನಡೆಸಿದ್ದ ಪ್ರತಿಭಟನಾಕಾರರ ಆಸ್ತಿಪಾಸ್ತಿಗಳನ್ನೇಕೆ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. 

ಉತ್ತರಪ್ರದೇಶದಲ್ಲಿ ನಡೆದಿದ್ದ ಪ್ರತಿಭಟನೆ ವೇಳೆ ರೂ.14.5 ಲಕ್ಷ ನಷ್ಟ ಉಂಟಾಗಿತ್ತು. ಜಾಟ್ ಸಮುದಾಯ ನಡೆಸಿದ್ದ ಪ್ರತಿಭಟನೆಯಿಂದಾಗಿ ರೂ.2,000 ಕೋಟಿ ನಷ್ಟ ಎದುರಾಗಿತ್ತು. ಆದರೆ, ಯಾರೊಬ್ಬರಿಗೂ ನೋಟಿಸ್ ಜಾರಿ ಮಾಡಿಲ್ಲ. ಇದು ನ್ಯಾಯವೇ? ಹಿಂದೂಗಳಾದ ಕಾರಣ ಜಾಟ್ ಹಾಗೂ ಪಟೇಲ್ ಹೋರಾಟಗಾರರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ನಿಮಗೆ ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ. 

SCROLL FOR NEXT