ದೇಶ

ಪತ್ರಿಯನ್ನು ಸಾಯಿಬಾಬಾ ಜನ್ಮಸ್ಥಾನವೆಂದು ಕರೆಯದಿರಲು ಸಿಎಂ ಒಪ್ಪಿಗೆ, ವಿವಾದ ಕೊನೆಯಾಗಿದೆ ಎಂದ ಸೇನಾ ಮುಖಂಡ

Raghavendra Adiga

ಮುಂಬೈ: , ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪತ್ರಿ ಗ್ರಾಮವನ್ನು ಗುರು, ಮಹಾ ಸಂತ ಶ್ರೀ ಸಾಯಿಬಾಬಾ ಅವರ  ಜನ್ಮಸ್ಥಳ ಎಂದು ಕರೆಯುವುದಿಲ್ಲಎಂದು ಭರವಸೆ ನೀಡಿದ್ದಾರೆಂದು ಶಿವಸೇನೆ ಮುಖಂಡ ಕಮಲಾಕರ್ ಕೋಥೆ ಸೋಮವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಂತೆಯೇ ಈ ವಿಷಯವು ಇಲ್ಲಿಗೇ ಮುಕ್ತಾಯವಾಗಿದ್ದು ಯಾವುದೇ ಹೊಸ ವಿವಾದ ಸೃಷ್ಟಿಯಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

"ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಮ್ಮ ಬೇಡಿಕೆಗಳನ್ನು ಒಪ್ಪಿಕೊಂಡಿದ್ದಾರೆ. ಶಿರಡಿ ಜನರು ಸಿಎಂ ಅವರ ಮಾತುಗಳಿಂದ ತೃಪ್ತರಾಗಿದ್ದಾರೆ. ಯಾವುದೇ ಹೊಸ ವಿವಾದ ಸೃಷ್ಟಿಯಾಗುವುದಿಲ್ಲ ಎಂದು ಅವರು ನಮಗೆ ಭರವಸೆ ನೀಡಿದ್ದಾರೆ ಮತ್ತು ನಾವು ಈ ವಿಷಯವನ್ನು ಇಲ್ಲಿಗೆ ಕೊನೆಗೊಳಿಸುತ್ತಿದ್ದೇನೆ" ಸಾಯಿ ಪ್ರತಿನಿಧಿಯೂ ಆಗಿರುವ ಕೋಥೆ ಬಾಬಾ ಸಂಸ್ಥಾನ್ ಟ್ರಸ್ಟ್, ಸಭೆಯ ನಂತರ ಹೇಳಿದರು

ಸಾಯಿ ದೇವಾಲಯ ಟ್ರಸ್ಟ್ ಸದಸ್ಯರು ಮತ್ತು ಶಿವಸೇನೆ ಸಂಸದ ಸದಾಶಿವ್ ಲೋಖಂಡೆ ಸೇರಿದಂತೆ 40 ಜನರ ನಿಯೋಗ ಇಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡಿತು.

ಪರಭಾನಿ ಜಿಲ್ಲೆಯ ಪತ್ರಿ ಗ್ರಾಮ ಶ್ರೀ ಸಾಯಿಬಾಬಾ ಅವರ ಜನ್ಮಸ್ಥಳ ಎಂದೆನ್ನುವ ಮೂಲಕ ಆ ಗ್ರಾಮಕ್ಕೆ ಕೋಟಿ ಕೋಟಿ ಅನುದಾನ ನೀಡಿದ್ದ ಸಿಎಂ ಠಾಕ್ರೆ ವಿರುದ್ಧ ಭಾನುವಾರ ಶಿರಡಿ ಗ್ರಾಮಸ್ಥರು ಪ್ರತಿಭಟಿಸಿ ಬಂದ್ ಆಚರಿಸಿದ್ದರು.

SCROLL FOR NEXT