ದೇಶ

ದೇಶಕ್ಕೆ ಸುಭಾಷ್‍ ಚಂದ್ರ ಬೋಸ್ ಕೊಡುಗೆ ಅಪಾರ: ಪ್ರಧಾನಿ ಮೋದಿ

Sumana Upadhyaya

ಕೋಲ್ಕತಾ/ನವದೆಹಲಿ: ದೇಶಾದ್ಯಂತ ಗುರುವಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 123ನೇ ಜನ್ಮದಿನ ಆಚರಿಸಲಾಗುತ್ತಿದ್ದು, ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.


ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಧೈರ್ಯ ಮತ್ತು ದೇಶಕ್ಕಾಗಿ ಅವರು ನೀಡಿದ ಕೊಡುಗೆಯನ್ನು ಎಂದಿಗೂ ಮರೆಯಲಾಗದು. ಭಾರತೀಯರ ಪ್ರಗತಿ ಮತ್ತು ಯೋಗಕ್ಷೇಮಕ್ಕಾಗಿ ಟೊಂಕಕಟ್ಟಿ ನಿಂತ ಅವರಿಗೆ ಜನತೆ ಕೃತಜ್ಞರಾಗಿರಬೇಕು ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.


1897 ಜನವರಿ 23 ರಂದು ಸುಭಾಷರ ಜನನದ ಕುರಿತು, ಜಾನಕಿನಾಥ್ ಬೋಸ್ ತಮ್ಮ ದಿನಚರಿಯಲ್ಲಿ "ಮಧ್ಯಾಹ್ನ ಒಬ್ಬ ಮಗ ಜನಿಸಿದನು, ಈ ಮಗ ಒಬ್ಬ ಶೌರ್ಯ ಸ್ವಾತಂತ್ರ್ಯ ಹೋರಾಟಗಾರ ಮತ್ತು ಚಿಂತಕನಾದನು, ಅವನು ತನ್ನ ಜೀವನವನ್ನು ಒಂದು ದೊಡ್ಡ ಕಾರಣಕ್ಕಾಗಿ ಮೀಸಲಿಟ್ಟನು- ಅದು ಭಾರತದ ಸ್ವಾತಂತ್ರ್ಯ.ನಾನು ಹೇಳುತ್ತಿರುವ ವ್ಯಕ್ತಿ ನೇತಾಜಿ ಸುಭಾಷ್ ಚಂದ್ರ ಬೋಸ್.

ಇವತ್ತು ನಾವು ಅವರ ಜಯಂತಿಯನ್ನು ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತೇವೆ ಎಂದು ಬರೆದಿದ್ದನ್ನು ಮೋದಿ ಟ್ವೀಟ್ ಮಾಡಿದ್ದಾರೆ.

SCROLL FOR NEXT