ದೇಶ

ಸಿಎಎ ವಿರೋಧಿ ನಿರ್ಣಯ ರಾಜಕೀಯ ನಡೆಯಷ್ಟೇ, ರಾಜ್ಯಗಳ ಪಾತ್ರಕ್ಕೆ ಮಹತ್ವ ಇಲ್ಲ: ಶಶಿ ತರೂರ್ 

Srinivas Rao BV

ಕೋಲ್ಕತ್ತಾ: ಸಿಎಎ ವಿರೋಧಿ ನಿರ್ಣಯಗಳು ರಾಜಕೀಯ ನಡೆಯಷ್ಟೇ, ರಾಜ್ಯ ಸರ್ಕಾರಗಳಿಗೆ ಈ ಸಂಬಂಧ ಹೆಚ್ಚಿನ ಪಾತ್ರ ಇರುವುದಿಲ್ಲ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ. 

ಕಪಿಲ್ ಸಿಬಲ್ ನಂತರ ಕಾಂಗ್ರೆಸ್ ನ ಮತ್ತೋರ್ವ ನಾಯಕ ಶಶಿ ತರೂರ್ ಸಿಎಎ ವಿರೋಧಿ ನಿರ್ಣಯಗಳನ್ನು ರಾಜ್ಯ ಸರ್ಕಾರಗಳು ತೆಗೆದುಕೊಳ್ಳುವಂತಿಲ್ಲ ಎಂಬ ಧ್ವನಿಯಲ್ಲಿ ಮಾತನಾಡಿದ್ದಾರೆ. 

ಪಿಟಿಐ ಗೆ ನೀಡಿರುವ ಸಂದರ್ಶನದಲ್ಲಿ ಶಶಿ ತರೂರ್ ಮಾತನಾಡಿದ್ದು, ಪೌರತ್ವ ನೀಡುವ ವಿಷಯದಲ್ಲಿ ರಾಜ್ಯಗಳ ಪಾತ್ರಕ್ಕೆ ಮಹತ್ವವಿಲ್ಲ. ಆದರೆ ಎನ್ ಆರ್ ಸಿ ಹಾಗೂ ಎನ್ ಪಿ ಆರ್ ವಿಷಯದಲ್ಲಿ ರಾಜ್ಯಗಳಿಗೆ ಅಧಿಕಾರವಿದ್ದು, ರಾಜ್ಯ ಸರ್ಕಾರಗಳ ನಿರ್ಧಾರ ನಿರ್ಣಾಯಕವಾಗಿರಲಿದೆ ಎಂದು ತರೂರ್ ಹೇಳಿದ್ದಾರೆ.

ಎನ್ ಪಿಆರ್, ಎನ್ ಆರ್ ಸಿ ಗಾಗಿ ರಾಜ್ಯಗಳ ಮಾನವಸಂಪನ್ಮೂಲ ಬಳಕೆಯಾಗಲಿವೆ. ಕೇಂದ್ರ ಸರ್ಕಾರದ ಬಳಿ ಅಗತ್ಯವಿರುವಷ್ಟು ಮಾನವ ಸಂಪನ್ಮೂಲ ಇಲ್ಲ. ಈ ಕಾರಣದಿಂದ ರಾಜ್ಯಸರ್ಕಾರಗಳ ನಿರ್ಧಾರ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಶಶಿ ತರೂರ್ ಹೇಳಿದ್ದಾರೆ. 

SCROLL FOR NEXT