ಆರಿಫ್ ಮೊಹಮ್ಮದ್ ಖಾನ್ 
ದೇಶ

ಯುರೋಪಿನ ಎಲ್ಲಾ ಬಾಹ್ಯಾಕಾಶ ಅಧ್ಯಯನಗಳಿಗೆ ಭಾರತದ ಪ್ರಾಚೀನ ಗ್ರಂಥ'ಸೂರ್ಯ ಸಿದ್ಧಾಂತ' ಆಧಾರ: ಕೇರಳ ರಾಜ್ಯಪಾಲ

ಪ್ರಾಚೀನ ಭಾರತೀಯ ಗ್ರಂಥ 'ಸೂರ್ಯ ಸಿದ್ಧಾಂತ' ಯುರೋಪಿನ ಎಲ್ಲಾ ಬಾಹ್ಯಾಕಾಶ ಅಧ್ಯಯನಗಳಿಗೆ ಆಧಾರವಾಗಿದೆ ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ. 

ತಿರುವನಂತಪುರಂ:  ಪ್ರಾಚೀನ ಭಾರತೀಯ ಗ್ರಂಥ 'ಸೂರ್ಯ ಸಿದ್ಧಾಂತ' ಯುರೋಪಿನ ಎಲ್ಲಾ ಬಾಹ್ಯಾಕಾಶ ಅಧ್ಯಯನಗಳಿಗೆ ಆಧಾರವಾಗಿದೆ ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ.

ಸಾಂಪ್ರದಾಯಿಕ ಭಾರತೀಯ ವಿಜ್ಞಾನವನ್ನು ಪುರಾಣದ ರೂಪದಲ್ಲಿ ದೇಶವಾಸಿಗಳ ಮನಸ್ಸಿನಲ್ಲಿ ಇಳಿಸಲಾಗಿದೆ ಎಂದು ಅವರು ಹೇಳಿದರು.

ಶುಕ್ರವಾರ ತಿರುವನಂತಪುರಂನಲ್ಲಿ ಸ್ರೋ ಅಧ್ಯಕ್ಷ ಡಾ.ಕೆ.ಶಿವನ್ ಅವರಿಗೆ ಶ್ರೀ ಚಿತಿರಾ ತಿರುನಾಳ್  ಪ್ರಶಸ್ತಿ ಪ್ರದಾನ ಮಾಡಿದ ನಂತರ ರಾಜ್ಯಪಾಲರು ಮಾತನಾಡುತ್ತಿದ್ದರು.

"ಇತ್ತೀಚಿನ ವರ್ಷಗಳಲ್ಲಿ ಣಾವು ನಮ್ಮ ನೀತಿಯೊಡನೆ ಪರಿಚಯವಿಲ್ಲದವರಾಗಿಬಿಟ್ಟಿದ್ದೇವೆ.ಇದರ ಫಲವಾಗಿ  ನಮ್ಮ ಪುಸ್ತಕಗಳಲ್ಲಿನ ವೈಜ್ಞಾನಿಕ ಉಲ್ಲೇಖಗಳು ನಮ್ಮ ಮನಸ್ಸಿನಲ್ಲಿರುವ ಪುರಾಣಕಥೆಗಳಾಗಿ ಮಾರ್ಪಡಾಗಿದೆ."

'ಸೂರ್ಯ ಸಿದ್ಧಾಂತ' ವನ್ನು ಬಾಗ್ದಾದ್‌ನ ಅಲ್-ಮನ್ಸೂರ್ ನ್ಯಾಯಾಲಯದ ಮುಂದೆ ಇಡಲಾಗಿತ್ತು. ಅಲ್ಲಿ ಎರಡನೇ ಅಬ್ಬಾಸಿಡ್ ಖಲೀಫನನ್ನು ಕನಕ್ ಎಂಬ ವ್ಯಕ್ತಿ ಕಂಡಿದ್ದನು. ನಂತರ ಖಲೀಫರು  ಗಣಿತಜ್ಞ ಇಬ್ರಾಹಿಂ ಅಲ್-ಫಜಾರಿ ಗೆ ಈ ಗ್ರಂಥವನ್ನು ಅರೇಬಿಕ್‌ಗೆ ಭಾಷಾಂತರಿಸಲು ಹೇಳಿದ್ದಾರೆ.. ಅದರ ನಂತರ, ಆಗಿನ ಸ್ಪೇನ್‌ನ ಆಡಳಿತಗಾರನು ಲೇಖಕನಿಗೆ ಭಾರಿ ಲಂಚ ನೀಡುವ ಮೂಲಕ ಪುಸ್ತಕದ ಪ್ರತಿಯನ್ನು ಪಡೆದನು.ಅಂತಿಮವಾಗಿ, ಈ ಪುಸ್ತಕವನ್ನು ಬಹುತೇಕ ಎಲ್ಲಾ ಯುರೋಪಿಯನ್ ಭಾಷೆಗಳಿಗೆ ಅನುವಾದಿಸಲಾಯಿತು ಮತ್ತು ಯುರೋಪಿನ ಎಲ್ಲಾ ಬಾಹ್ಯಾಕಾಶ ಅಧ್ಯಯನಗಳಿಗೆ ಆಧಾರವಾಯಿತು ಎಂದು ರಾಜ್ಯಪಾಲರು ಹೇಳಿದರು.

"ನಮ್ಮ ವಿಜ್ಞಾನಿಗಳಾದ ಡಾ. ಮಾಧವನ್ ನಾಯರ್ ಮತ್ತು ಡಾ. ಶಿವನ್ ಅವರು ನಮಗಾಗಿ ತುಂಬಾ ಸಾಧನೆ ಮಾಡಿದ್ದರಿಂದ ಮಾತ್ರವಲ್ಲ, ನಮ್ಮದೇ ಆದ ಸಂಪ್ರದಾಯಗಳು ಮತ್ತು ನೀತಿಗಳನ್ನು ಪುನರುಜ್ಜೀವನಗೊಳಿಸಿದ್ದಕ್ಕಾಗಿ ನಾವು ಅವರಿಗೆ ಕೃತಜ್ಞರಾಗಿರುತ್ತೇವೆ"   ಸಮಾರಂಭದಲ್ಲಿ ಇಸ್ರೋ ಮಾಜಿ ಅಧ್ಯಕ್ಷರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT