ದೇಶ

ತಾರಕಕ್ಕೇರಿದ ಸುಶೀಲ್ ಮೋದಿ ನಡುವಿನ ವಾಕ್ಸಮರ; ವಿಡಿಯೋ ಷೇರ್ ಮಾಡಿ ಕಾಲೆಳೆದ ಪ್ರಶಾಂತ್ ಕಿಶೋರ್

Srinivasamurthy VN

ಪಾಟ್ನಾ: ಬಿಹಾರದ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಮತ್ತು ಜೆಡಿಯು ಮುಖಂಡ ಪ್ರಶಾಂತ್ ಕಿಶೋರ್ ಅವರ ನಡುವಿನ ವಾಕ್ಸಮರ ತಾರಕಕ್ಕೇರಿದ್ದು, ಸುಶೀಲ್ ಮೋದಿಗೆ ತಿರುಗೇಟು ನೀಡಿರುವ ಪ್ರಶಾಂತ್ ಕಿಶೋರ್ ಅವರ ಹಳೆಯ ವಿಡಿಯೋವೊಂದನ್ನು ಅಪ್ಲೋಡ್ ಮಾಡಿ ಕಿಡಿಕಾರಿದ್ದಾರೆ.

ಬಿಹಾರ ಡಿಸಿಎಂ ಸುಶೀಲ್ ಮೋದಿ ಅವರು ಸಿಎಂ ನಿತೀಶ್ ಕುಮಾರ್ ಅವರನ್ನು ನಿಂದಿಸುತ್ತಿರುವ ಹಳೆಯ ವಿಡಿಯೋ ಅಪ್ಲೋಡ್ ಮಾಡಲಾಗಿದ್ದು, ಈ ವಿಡಿಯೋದೊಂದಿಗೆ ನಡತೆ ಪ್ರಮಾಣಪತ್ರಗಳನ್ನು ನೀಡುವಾಗ ಸುಶೀಲ್ ಮೋದಿಗೆ ಯಾರನ್ನೂ ಹೊಂದಾಣಿಕೆ ಮಾಡಲು ಸಾಧ್ಯವಿಲ್ಲ. ಅವರು ಮೊದಲು ಮಾತನಾಡುತ್ತಿದ್ದರು ಮತ್ತು ಆದ ನಂತರ ಅವರು ನಡತೆ ಪ್ರಮಾಣಪತ್ರಗಳನ್ನು ಲಿಖಿತವಾಗಿ ನೀಡುತ್ತಿದ್ದಾರೆ. ಅವರ ಕಾಲಗಣನೆ ಬಹಳ ಸ್ಪಷ್ಟವಾಗಿದೆ!' ಎಂದು ಹೇಳಿದ್ದಾರೆ.

ವಿಡಿಯೋದಲ್ಲಿ ಸುಶೀಲ್ ಮೋದಿ, 'ನಿತೀಶ್ ಕುಮಾರ್ ಅವರು ಬಿಹಾರಕ್ಕೆ ಸಮಾನಾರ್ಥಕ ಎಂದು ಭಾವಿಸಿದ್ದಾರೆ. ನಿತೀಶ್ ಬಿಹಾರವಲ್ಲ… ಬಿಹಾರ ನಿತೀಶ್ ಅಲ್ಲ. ವಂಚನೆ ನಿತೀಶ್ ಅವರ ಡಿಎನ್‌ಎಯಲ್ಲಿದೆ. ಬಿಜೆಪಿಯೊಂದಿಗಿನ 17 ವರ್ಷಗಳ ಮೈತ್ರಿ ನಂತರ ಅವರು ದ್ರೋಹ ಬಗೆದರು. ಅವರು ಜೀತಾನ್ ರಾಮ್ ಮಾಂಜಿ, ಬಿಹಾರ ಮತದಾರರು, ಜಾರ್ಜ್ ಫರ್ಂಡೇಡ್ಸ್ ಮತ್ತು ಲಾಲು ಯಾದವ್ ಅವರಿಗೆ ದ್ರೋಹ ಮಾಡಿದರು. ಇದು ನಿತೀಶ್ ಕುಮಾರ್ ಅವರ ಡಿಎನ್ಎ ಮತ್ತು ಬಿಹಾರದ ಜನರ ಡಿಎನ್ಎ ಅಲ್ಲ' ಎಂದು ಪ್ರಶಾಂತ್ ಕಿಶೋರ್ ಹಂಚಿಕೊಂಡಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಬಿಜೆಪಿ ಸಿಎಎ ವಿರುದ್ಧ ವಾಗ್ದಾಳಿ ಮಾಡಿದ್ದ ಜೆಡಿಯು ಹಿರಿಯ ನಾಯಕ ಪವನ್ ಕುಮಾರ್ ವರ್ಮಾ ಅವರನ್ನು ಗುರಿಯಾಗಿಸಿ ‘ಕೃತಜ್ಞತೆಯಿಲ್ಲದವರು’ ಎಂದು ಕರೆದಿತ್ತು. ಇದಾದ ಕೆಲವೇ ದಿನಗಳ ನಂತರ ಸುಶೀಲ್ ಮೋದಿ ಮೇಲೆ ಪ್ರಶಾಂತ್ ಕಿಶೋರ್ ತಿರುಗೇಟು ನೀಡಿದ್ದಾರೆ.

SCROLL FOR NEXT