ದೇಶ

ಕೊರೋನಾ ವೈರಸ್ ಗೆ ಯಾವುದೇ ಭಾರತೀಯರೂ ತುತ್ತಾಗಿಲ್ಲ: ಎಂಇಎ ಸ್ಪಷ್ಟನೆ 

Srinivas Rao BV

ನವದೆಹಲಿ: ಚೀನಾದಲ್ಲಿ ಕಾಣಿಸಿಕೊಂಡಿರುವ ಕೊರೋನಾ ವೈರಸ್ ಗೆ ಯಾವುದೇ ಭಾರತೀಯರೂ ತುತ್ತಾಗಿಲ್ಲ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಸ್ಪಷ್ಟನೆ ನೀಡಿದೆ. 

ಬೀಜಿಂಗ್ ನಲ್ಲಿರುವ ಭಾರತದ ರಾಯಭಾರಿ ಕಚೇರಿ ಚೀನಾದಲ್ಲಿರುವ ಭಾರತೀಯರೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. 
 
ಕೊರೋನಾ ವೈರಸ್ ಗೆ ಈ ವರೆಗೂ ಚೀನಾದಲ್ಲಿ 56 ಮಂದಿ ಸಾವನ್ನಪ್ಪಿದ್ದರೆ, ವೈರಸ್ ಸೋಂಕು ತಗುಲಿರುವವರ ಸಂಖ್ಯೆ 2,008 ನ್ನು ದಾಟಿದೆ. 

SCROLL FOR NEXT