ದೇಶ

ಸಿಎಎ ಅಡಿಯಲ್ಲಿ ಪೌರತ್ವ ಪಡೆಯಲು ಧಾರ್ಮಿಕ ನಂಬಿಕೆಗಳ ಪುರಾವೆ ಅತ್ಯಗತ್ಯ

Srinivas Rao BV

ನವದೆಹಲಿ: ಸಿಎಎ ಅಡಿಯಲ್ಲಿ ಪೌರತ್ವ ಪಡೆಯಲು ಅರ್ಜಿ ಸಲ್ಲಿಸಬೇಕಾದರೆ ಧಾರ್ಮಿಕ ನಂಬಿಕೆಗಳ ಪುರಾವೆಗಳೂ ಅಗತ್ಯ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಬಾಂಗ್ಲಾ, ಪಾಕ್, ಅಫ್ಘಾನಿಸ್ತಾನದಿಂದ ಮುಸ್ಲಿಮೇತರ ನಿರಾಶ್ರಿತ ವಲಸಿಗರಿಗೆ ಭಾರತೀಯ ಪೌರತ್ವ ನೀಡಬೇಕಾದರೆ ಅವರು ತಮ್ಮ ಧಾರ್ಮಿಕ ನಂಬಿಕೆಗಳ ಪುರಾವೆಗಳನ್ನು ನೀಡಬೇಕು ಹಾಗೂ 2014 ರ ಡಿ.31 ಕ್ಕೂ ಮುನ್ನ ಭಾರತಕ್ಕೆ ಬಂದಿರುವುದಕ್ಕೂ ಪುರಾವೆಗಳನ್ನು ಒದಗಿಸಬೇಕು. 

ಈ ಎರಡೂ ಅಂಶಗಳನ್ನು ಸಿಎಎ ನಿಯಮಾವಳಿಗಳಲ್ಲಿ ಉಲ್ಲೇಖಿಸಲಾಗುತ್ತದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ. ಅಸ್ಸಾಮ್ ನಲ್ಲಿ ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಬೇಕಾದರೆ 3 ತಿಂಗಳ ಸಮಯ ವಿಸ್ತರಣೆ ಮಾಡಲಾಗುತ್ತದೆ ಹಾಗೂ ಅಸ್ಸಾಂ ಗೆ ನಿರ್ದಿಷ್ಟವಾದ ನಿಬಂಧನೆಗಳನ್ನು ಸಿಎಎ ಗೆ ವಿಧಿಸಲು ಅಲ್ಲಿನ ಸಿಎಂ ಸರ್ಬಾನಂದ ಸೋನೋವಾಲ್ ಹಾಗೂ ಹಣಕಾಸು ಸಚಿವ ಹಿಮಂತ ಬಿಸ್ವ ಶರ್ಮಾ ಮನವಿ ಮಾಡಿದ್ದಾರೆ. 

SCROLL FOR NEXT