ದೇಶ

ಸಿಎಎ ಕುರಿತು ಐರೋಪ್ಯ ಒಕ್ಕೂಟ ನಿರ್ಣಯದ ಕುರಿತು ಇಂದು ಮತದಾನವಿಲ್ಲ: ಸರ್ಕಾರಿ ಮೂಲಗಳು 

Sumana Upadhyaya

ನವದೆಹಲಿ; ಭಾರತದ ಹೊಸ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಿರ್ಣಯದ ಮೇಲೆ ಗುರುವಾರ ಮತದಾನ ನಡೆಸದಿರಲು ಐರೋಪ್ಯ ಸಂಸತ್ತು ನಿರ್ಧರಿಸಿದೆ. 


ದ್ವಿಪಕ್ಷೀಯ ಶೃಂಗಸಭೆ ಮಾರ್ಚ್ ನಲ್ಲಿ ನಡೆಯಲಿದ್ದು ಪ್ರಧಾನಿ ನರೇಂದ್ರ ಮೋದಿಯವರ ಬ್ರುಸೆಲ್ಸ್ ಭೇಟಿಗೆ ಯಾವುದೇ ತೊಂದರೆ ಉಂಟುಮಾಡದಿರಲು ಐರೋಪ್ಯ ಸಂಸತ್ತು ನಿರ್ಧರಿಸಿದೆ.ಮಾರ್ಚ್ 2ರಂದು ಆರಂಭವಾಗಲಿರುವ ಹೊಸ ಅಧಿವೇಶನ ಸಂದರ್ಭದಲ್ಲಿ ಸಿಎಎ ಮೇಲೆ ಮತದಾನ ನಡೆಸಲು ಐರೋಪ್ಯ ಸಂಸತ್ತು ನಿರ್ಧರಿಸಿದೆ.


ಪೌರತ್ವ ತಿದ್ದುಪಡಿ ಕಾಯ್ದೆ ವಿಷಯದಲ್ಲಿ ಮೂಗು ತೂರಿಸದಂತೆ ಯುರೋಪ್​ಗೆ ಭಾರತ ಖಡಕ್ ಪ್ರತಿಕ್ರಿಯೆ ನೀಡಿರುವ ಬೆನ್ನಲ್ಲೇ, ಅಲ್ಲಿನ ಸಂಸತ್​ನಲ್ಲಿ ಸಿಎಎ ವಿರುದ್ಧದ ಜಂಟಿ ಗೊತ್ತುವಳಿ ಮೇಲೆ ಮತದಾನಕ್ಕೆ ಸಿದ್ಧತೆ ನಡೆದಿತ್ತು. ಸಿಎಎ ವಿರೋಧಿ ಗೊತ್ತುವಳಿ ಕುರಿತು ಐರೋಪ್ಯ ಒಕ್ಕೂಟದ ಸಂಸತ್​ನಲ್ಲಿ ನಿನ್ನೆ ಚರ್ಚೆ ಪ್ರಾರಂಭವಾಗಿ,ಇಂದು ಮತದಾನ ನಡೆಯುವ ಸಾಧ್ಯತೆಯಿತ್ತು.

ಯುರೋಪ್ ಸಂಸತ್​ನ 751 ಸಂಸದರಲ್ಲಿ 560 ಸಂಸದರು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿದ್ದಾರೆ. ಇದು ತಾರತಮ್ಯ ಮತ್ತು ಅಪಾಯಕಾರಿ ವಿಭಜನೆ ಎಂದು ಆರೋಪಿಸಿ ಕಳೆದ ವಾರ ಗೊತ್ತುವಳಿ ಮಂಡಿಸಿದ್ದರು. ಇದರ ಮೇಲೆ ಚರ್ಚೆ ನಡೆಯಲಿದೆ. ಸಂಸತ್​ನಲ್ಲಿ ಸಿಎಎ ವಿರುದ್ಧ ಇರುವ ಸಂಸದರು ಬಹುಸಂಖ್ಯೆಯಲ್ಲಿರುವುದರಿಂದ ಗೊತ್ತುವಳಿ ಸುಲಭ ಅಂಗೀಕಾರವಾಗಲಿದೆ.


ಸಿಎಎ ವಿರುದ್ಧ ನಿರ್ಣಯ ಮಂಡಿಸುವ ಐರೋಪ್ಯ ಒಕ್ಕೂಟದ ಪರವಾಗಿ ಯಾವ ದೇಶಗಳೂ ಬೆಂಬಲಿಸದಂತೆ ಬೇರೆ ದೇಶಗಳ ಮನವೊಲಿಸಲು ಭಾರತ ಪ್ರಯತ್ನಿಸುತ್ತಿದೆ. 

SCROLL FOR NEXT