ದೇಶ

ದೀರ್ಘಕಾಲದ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ ಗೋಲ್ಡನ್ ಬಾಬಾ

Shilpa D

ನವದೆಹಲಿ: ಪೂರ್ವ ದೆಹಲಿಯ ಗಾಂಧಿನಗರದ ವಾಸಿ ಸುಧೀರ್ ಕುಮಾರ್ ಮಕ್ಕರ್ ಅಲಿಯಾಸ್ ಗೋಲ್ಡನ್ ಬಾಬಾ ಬುಧವಾರ ನಿಧನರಾಗಿದ್ದಾರೆ. 

ಕಳೆದ ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಗೋಲ್ಡನ್ ಬಾಬಾ, ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗೋಲ್ಡನ್ ಬಾಬಾ ಹರಿದ್ವಾರಕ್ಕೆ ಸೇರಿದ ಹಲವು ಅಖಾಡಗಳೊಂದಿಗೆ ಸಂಬಂಧ ಹೊಂದಿದ್ದರು. ಗೋಲ್ಡನ್ ಬಾಬಾ ಹಲವು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದರು. 

ಬಾಬಾ ಅವರು ಮೂಲತಃ ಉತ್ತರ ಪ್ರದೇಶದ ಘಾಜಿಯಾಬಾದ್ ನವರಾಗಿದ್ದು, ಸನ್ಯಾಸಿ ಆಗುವ ಮೊದಲು ದೆಹಲಿಯಲ್ಲಿ ವಸ್ತ್ರ ವ್ಯಾಪಾರ ನಡೆಸುತ್ತಿದ್ದರು. ಸನ್ಯಾಸ ದೀಕ್ಷೆ ಪಡೆದುಕೊಂಡ ನಂತರ ಗಾಂಧಿನಗರದಲ್ಲಿ ಗೋಲ್ಡನ್ ಬಾಬಾ ಆಶ್ರಮ ಸ್ಥಾಪಿಸಿದ್ದರು. ಬಾಬಾ ೧೯೭೨ ರಿಂದ ಭಾರಿ ಪ್ರಮಾಣದಲ್ಲಿ ಚಿನ್ನದ ಆಭರಣ ಧರಿಸುವುದನ್ನು ಆರಂಭಿಸಿದ್ದರು. 

ಬಂಗಾರವನ್ನು ತನ್ನ ಇಷ್ಟ ದೈವವನ್ನಾಗಿ ಬಾಬಾ ಭಾವಿಸುತ್ತಿದ್ದರು ಎಂದು ಜನರು ಹೇಳುತ್ತಾರೆ. ಅಲ್ಲದೆ, ಬಾಬಾ ಅವರ ರಕ್ಷಣೆಗಾಗಿ ನಿತ್ಯ ೩೦ ಮಂದಿ ಅಂಗ ರಕ್ಷಕರು ಕಾರ್ಯನಿರ್ವಹಿಸುತ್ತಿದ್ದರು. ಬಾಬಾ ಅವರ ವಿರುದ್ದ ಅಪಹರಣ, ದರೋಡೆ, ದಾಳಿ, ಕೊಲೆ ಬೆದರಿಕೆ ಮತ್ತಿತರ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿದ್ದವು.
 

SCROLL FOR NEXT