ದೇಶ

ಚೀನಾ ಆಪ್ ಗಳ ನಿಷೇಧದ ಬೆನ್ನಲ್ಲೇ ಭಾರತದಲ್ಲಿ ಹ್ಯುವಾಯಿ, ಝೆಡ್ ಟಿಇ ಭವಿಷ್ಯವೂ ಡೋಲಾಯಮಾನ!

Srinivas Rao BV

ನವದೆಹಲಿ: ಭಾರತ ಸರ್ಕಾರ ಚೀನಾದ 59 ಆಪ್ ಗಳನ್ನು ನಿಷೇಧಿಸಿದ ಬೆನ್ನಲ್ಲೇ ಟೆಲಿಕಾಂ ಉಪಕರಣಗಳ ಕಂಪನಿಗಳಾದ ಹ್ಯುವಾಯಿ ಹಾಗೂ ಝೆಡ್ ಟಿಇ ಭವಿಷ್ಯವೂ ಸಹ ಡೋಲಾಯಮಾನವಾಗಿದೆ. 

ಅಮೆರಿಕಾದಲ್ಲಿ ಈ ಎರಡೂ ಕಂಪನಿಗಳನ್ನು ಅಲ್ಲಿನ ಫೆಡರೇಷನ್ ಕಮ್ಯುನಿಕೇಷನ್ಸ್ ಕಮಿಷನ್ (ಎಫ್ ಸಿಸಿ) ರಾಷ್ಟ್ರೀಯ ಭದ್ರತೆಗೆ ಮಾರಕ ಎಂದು ಅಧಿಕೃತವಾಗಿ ಘೋಷಿಸಿದ ಬಳಿಕ ಭಾರತದಲ್ಲಿಯೂ ಇವುಗಳ ಭವಿಷ್ಯವನ್ನು ನಿರ್ಧರಿಸಲು ಸರ್ಕಾರ ಮುಂದಾಗಿದೆ. 

ಹ್ಯುವಾಯಿ ಹಾಗೂ ಝೆಡ್ ಟಿಇ ಸಂಸ್ಥೆಗಳು ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷ ಹಾಗೂ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್ಎ) ಜೊತೆ ನೇರ ಅಥವಾ ಪರೋಕ್ಷ ಸಂಪರ್ಕದಲ್ಲಿದ್ದು, ಅಲ್ಲಿನ ಸೇನೆಯ ಉಪಕರಣಗಳೊಂದಿಗೆ ನಿಕಟ ಸಂಬಂಧಗಳನ್ನು ಹೊಂದಿದೆ ಈ ಹಿನ್ನೆಲೆಯಲ್ಲಿ ಗೃಹ ಸಚಿವಾಲಯ ಹಾಗೂ ಟೆಲಿಕಮ್ಯುನಿಕೇಷನ್ಸ್ ಇಲಾಖೆ ಝೆಡ್ ಟಿಇ ಹಾಗೂ ಹ್ಯುವಾಯಿಯ ಕುರಿತು ಚರ್ಚೆ ನಡೆಸಿದ್ದು, ಈ ಎರಡೂ ಸಂಸ್ಥೆಗಳ ನೆಟ್ವರ್ಕಿಂಗ್ ವ್ಯವಸ್ಥೆಗೆ ಸಂಬಂಧಿಸಿದ ತಾಂತ್ರಿಕ ಉಪಕರಣಗಳನ್ನು ಗುರುತಿಸುವ ಹೊಣೆಯನ್ನು ಟೆಲಿಕಾಮ್ ಇಲಾಖೆಗೆ ವಹಿಸಲಾಗಿದೆ.

ಚೀನಾ ಆಪ್ ಗಳಷ್ಟೇ ಅಲ್ಲದೇ ಈ ಎರಡೂ ಸಂಸ್ಥೆಗಳೂ ಸಹ ಭಾರತದ ಭದ್ರತೆಗೆ ಮಾರಕ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಹ್ಯುವಾಯಿ ಹಾಗೂ ಝೆಟಿಇ ಗಳನ್ನು ಇಲ್ಲಿ ಮುಂದುವರೆಸುವ ಬಗ್ಗೆ ಗಂಭೀರ ಚಿಂತನೆಯಲ್ಲಿ ತೊಡಗಿದೆ.

SCROLL FOR NEXT