ಸಾಂದರ್ಭಿಕ ಚಿತ್ರ 
ದೇಶ

ಪಶ್ಚಿಮ ಬಂಗಾಳದಲ್ಲಿ ಬಾಂಬ್ ಸ್ಫೋಟ, ಇಬ್ಬರು ಸಾವು

ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಮನೆಯೊಂದರಲ್ಲಿ ಬಾಂಬ್ ಸ್ಫೋಟಗೊಂಡಿದ್ದು, ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಮತ್ತು ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಶನಿವಾರ ಅಧಿಕಾರಿಗಳು ತಿಳಿಸಿದ್ದಾರೆ.

ಕೋಲ್ಕತಾ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಮನೆಯೊಂದರಲ್ಲಿ ಬಾಂಬ್ ಸ್ಫೋಟಗೊಂಡಿದ್ದು, ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಮತ್ತು ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಶನಿವಾರ ಅಧಿಕಾರಿಗಳು ತಿಳಿಸಿದ್ದಾರೆ.

ಜಂಗಿಪುರ್ ಉಪ ವಿಭಾಗದ ಸುತಿ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಮನೆಯೊಂದರಲ್ಲಿ ಅಕ್ರಮವಾಗಿ ನಾಡ ಬಾಂಬ್ ತಯಾರಿಸುತ್ತಿದ್ದ ವೇಳೆ ಈ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ.

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಅವರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸ್ಫೋಟದ ತೀವ್ರತೆಗೆ ಮನೆ ಸಂಪೂರ್ಣ ಹಾನಿಯಾಗಿದ್ದು, ಮನೆ ಮಾಲೀಕ ತಲೆ ಮರೆಸಿಕೊಂಡಿದ್ದಾರೆ. ಪೊಲೀಸರು ಮಾಲೀಕನ ಪತ್ನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ನಾಯಕರ 'ಹತ್ಯೆಗೆ ಪ್ರತೀಕಾರ': ಆಪಲ್, ಗೂಗಲ್ ಸೇರಿ 18 ಅಮೆರಿಕ ಕಂಪನಿಗಳ ಮೇಲೆ ದಾಳಿ; IRGC ಪ್ರತಿಜ್ಞೆ

"ಬನ್ನಿ, ನಾವು ಕಾಯುತ್ತಿದ್ದೇವೆ": ಅಮೆರಿಕ ಸೇನೆಗೆ ಇರಾನ್ ಸವಾಲು; Video ಬಿಡುಗಡೆ

'ಗಲ್ಲಿಗೇರಿಸುವ ಕಾನೂನಿಗೆ ಅಂಗೀಕಾರ: 90 ದಿನಗಳಲ್ಲಿ 11,000 ಪ್ಯಾಲೆಸ್ತೀನಿಯರು ನೇಣಿಗೆ? ಸಿಹಿಹಂಚಿ ಸಂಭ್ರಮಿಸಿದ ಇಸ್ರೇಲ್ ಸಂಸದರು, Video!

'ಯುಎಸ್ಎ ಇದನ್ನು ಎಂದಿಗೂ ನೆನಪಿಟ್ಟುಕೊಳ್ಳುತ್ತದೆ!': ಫ್ರಾನ್ಸ್ ವಿರುದ್ಧ ಟ್ರಂಪ್ ಆಕ್ರೋಶ

ಸಾಕಪ್ಪಾ ಸಾಕು ಯುದ್ಧ, ನಾವ್ ಯಾರಿಗೂ ಸಹಾಯ ಮಾಡಲ್ಲ; ನಿಮ್ ತೈಲ ನೀವೆ ಹುಡುಕಿಕೊಳ್ಳಿ: ಇತರ ರಾಷ್ಟ್ರಗಳಿಗೆ Trump ಶಾಕ್!

SCROLL FOR NEXT