ದೇಶ

ಇಂದು ವಿಶ್ವದ ಹಲವು ಕಡೆ ಚಂದ್ರಗ್ರಹಣ: ಭಾರತದಲ್ಲಿ ಗೋಚರವಿಲ್ಲ

Manjula VN

ನವದೆಹಲಿ: ವಿಶ್ವದ ಹಲವು ಭಾಗಗಳಲ್ಲಿ ಭಾನುವಾರ ಅರೆನೆರಳಿನ (ಮಸುಕಂಚು) ಚಂದ್ರಗ್ರಹಣ ಸಂಭವಿಸಲಿದ್ದು, ಆದರೆ, ಈ ಚಂದ್ರಗ್ರಹಣ ಭಾರತದಲ್ಲಿ ಗೋಚರವಾಗುವುದಿಲ್ಲ. 

ಭಾನುವಾರ ಲ್ಯಾಟಿನ್ ಅಮೆರಿಕಾ, ಆಫ್ರಿಕಾ, ಪಶ್ಚಿಮ ಯುರೋಪ್ ಹಾಗೂ ಉತ್ತರ ಅಮೆರಿಕಾ ಖಂಡಗಳಲ್ಲಿ ಗ್ರಹಣ ಗೋಚರಗೊಳ್ಳಲಿದೆ. 

ಭಾರತೀಯ ಕಾಲಮಾನ ಬೆಳಿಗ್ಗೆ 8.37ಕ್ಕೆ ಆರಂಭವಾಗಿ ಬೆಳಿಗ್ಗೆ 11.22ಕ್ಕೆ ಗ್ರಹಣ ಅಂತ್ಯಗೊಳ್ಳಲಿದೆ. 9.50ಕ್ಕೆ ಗ್ರಹಣದ ಮಧ್ಯಾವಧಿ ಇರುತ್ತದೆ. ಚಂದ್ರನ ಮೇಲೆ ಅಸ್ಪಷ್ಟವಾಗಿರುವ ಭೂಮಿಯ ನೆರಳು ಬೀಳುವುದಕ್ಕೆ ಮಸುಕಂಚಿನ ಚಂದ್ರಗ್ರಹಣ ಎನ್ನುತ್ತಾರೆ. ಇದು ಬರಿಗಣ್ಣಿಗೆ ಅಷ್ಟು ಸ್ಪಷ್ಟವಾಗಿ ಕಾಣದು.

SCROLL FOR NEXT