ದೇಶ

ಆನ್ ಲೈನ್ ವಿಚಾರಣೆಗಾಗಿ ಹೊಸ ಮಾರ್ಗಸೂಚಿ ಪ್ರಕಟಿಸಿದ ಸುಪ್ರೀಂಕೋರ್ಟ್

Nagaraja AB

ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ಕಾಯಿಲೆ ನಡುವೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ಹಾಗೂ ಇ- ನೋಂದಾಯಿತ ಕೇಸ್ ಗಳಿಗಾಗಿ ಹೊಸ ಮಾರ್ಗಸೂಚಿಗಳನ್ನು ಸುಪ್ರೀಂಕೋರ್ಟ್ ಪ್ರಕಟಿಸಿದೆ.

ಹೊಸ ಮಾರ್ಗಸೂಚಿಗಳ ಪ್ರಕಾರ, ಸುಪ್ರೀಂ ಕೋರ್ಟ್‌ನ ನ್ಯಾಯಪೀಠಗಳಿಂದ  ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆ ಮುಂದುವರಿಯಲಿದೆ.ವಿಚಾರಣೆ ನಡೆಯದಿರುವ ವಿಷಯಗಳು ಜುಲೈ 6ರಿಂದ  ವರ್ಚುವಲ್ ಕೋರ್ಟ್ ಮುಂದೆ ಬರಲಿವೆ.

ಜುಲೈ 6ರಿಂದ ವರ್ಚುವಲ್ ನ್ಯಾಯಾಲಯಗಳ ಮೂಲಕ ವಿಷಯಗಳ ವಿಚಾರಣೆ ನಡೆಸುವಂತೆ ಸಂವಿಧಾನಿಕ ಪೀಠಗಳಿಗೆ ಮುಖ್ಯ ನ್ಯಾಯಾಧೀಶರು ಸಂತೋಷದಿಂದ ನಿರ್ದೇಶಿಸಿದ್ದಾರೆ ಎಂದು ಅಪೆಕ್ಸ್ ಕೋರ್ಟಿನ ವೆಬ್ ಸೈಟ್ ನಲ್ಲಿ ಹೇಳಲಾಗಿದೆ.

ಜುಲೈ 13ರಿಂದ ವಿಷಯಗಳ ಲಭ್ಯತೆ ಮತ್ತು ಅಗತ್ಯತೆಗೆ ಅನುಗುಣವಾದ ವಿಚಾರಣೆ ನಡೆಯಲಿದ್ದು, ಸೋಮವಾರ ಮತ್ತು ಶುಕ್ರವಾರ ವಿವಿಧ ಪ್ರಕರಣಗಳ ವಿಚಾರಣೆ ನಡೆಯುವ ಸಾಧ್ಯತೆ ಇದೆ. ಮಂಗಳವಾರ, ಬುಧವಾರ,ಹಾಗೂ ಗುರುವಾರ ಅಂತಿಮ ವಿಚಾರಣೆ ವಿಷಯಗಳು ಮತ್ತು ನಿಯಮಿತ ವಿಷಯಗಳ ವಿಚಾರಣೆ ನಡೆಯಬಹುದು ಎಂದು ತಿಳಿಸಲಾಗಿದೆ. 

ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ಕಾರ್ಯಗತವಾಗದ ಸಂದರ್ಭದಲ್ಲಿ ಟೆಲಿ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಬಹುದೆಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

SCROLL FOR NEXT