ರಾಹುಲ್ ಗಾಂಧಿ(ಸಂಗ್ರಹ ಚಿತ್ರ) 
ದೇಶ

ರಕ್ಷಣಾ ಸ್ಥಾಯಿ ಸಮಿತಿಯ ಒಂದು ಸಭೆಗೂ ಹಾಜರಾಗದ ರಾಹುಲ್ ಗಾಂಧಿ ಸೈನಿಕರ ಶೌರ್ಯ ಪ್ರಶ್ನಿಸುತ್ತಾರೆ: ಜೆ.ಪಿ.ನಡ್ಡಾ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಹೊಸ ವಾಗ್ದಾಳಿ ಮುಂದುವರಿಸಿರುವ ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ, ರಾಹುಲ್ ಗಾಂಧಿಯವರು ರಕ್ಷಣಾ ಸ್ಥಾಯಿ ಸಮಿತಿಯ ಒಂದು ಸಭೆಗೂ ಹಾಜರಾಗಿಲ್ಲ. ಬದಲಾಗಿ ಭಾರತ-ಚೀನಾ ಗಡಿ ವಿವಾದ ಹೆಸರಿನಲ್ಲಿ ದೇಶದ ಬಗ್ಗೆ ಅಪಪ್ರಚಾರ ಮಾಡುತ್ತಾ ಸೇನಾಪಡೆಯ ಶೌರ್ಯವನ್ನು ಪ್ರಶ್ನಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಹೊಸ ವಾಗ್ದಾಳಿ ಮುಂದುವರಿಸಿರುವ ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ, ರಾಹುಲ್ ಗಾಂಧಿಯವರು ರಕ್ಷಣಾ ಸ್ಥಾಯಿ ಸಮಿತಿಯ ಒಂದು ಸಭೆಗೂ ಹಾಜರಾಗಿಲ್ಲ. ಬದಲಾಗಿ ಭಾರತ-ಚೀನಾ ಗಡಿ ವಿವಾದ ಹೆಸರಿನಲ್ಲಿ ದೇಶದ ಬಗ್ಗೆ ಅಪಪ್ರಚಾರ ಮಾಡುತ್ತಾ ಸೇನಾಪಡೆಯ ಶೌರ್ಯವನ್ನು ಪ್ರಶ್ನಿಸುತ್ತಿದ್ದಾರೆ, ಒಬ್ಬ ವಿರೋಧ ಪಕ್ಷದ ನಾಯಕನಾಗಿ ಏನು ಮಾಡಬಾರದು ಅವೆಲ್ಲವನ್ನೂ ರಾಹುಲ್ ಗಾಂಧಿ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ರಾಹುಲ್ ಗಾಂಧಿಯವರು ಈ ದೇಶದ ಒಂದು ಭವ್ಯವಾದ ಸಾಂಪ್ರದಾಯಿಕ ಮನೆತನಕ್ಕೆ ಸೇರಿದ್ದಾರೆ, ಆ ಮನೆತನಕ್ಕೆ ದೇಶದ ಭದ್ರತೆ ಮುಖ್ಯವಲ್ಲ, ಬದಲಿಗೆ ಆಯೋಗಗಳು ಮುಖ್ಯವಾಗಿದೆ. ಕಾಂಗ್ರೆಸ್ ನಲ್ಲಿ ಸಂಸದೀಯ ವಿಷಯಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವ ಹಲವು ಯೋಗ್ಯ ನಾಯಕರಿದ್ದಾರೆ, ಆದರೆ ಒಂದು ಮನೆತನ ಇಂತಹ ನಾಯಕರನ್ನು ಬೆಳೆಯಲು ಬಿಡುವುದಿಲ್ಲ. ಅದು ನಿಜಕ್ಕೂ ಬೇಸರದ ಸಂಗತಿ ಎಂದು ಜೆ ಪಿ ನಡ್ಡಾ ಟೀಕಿಸಿದ್ದಾರೆ.

ಕೋವಿಡ್-19 ನಿರ್ವಹಣೆ, ಭಾರತ-ಚೀನಾ ಗಡಿಯಲ್ಲಿ ಸೇನಾ ನಿಲುಗಡೆ ಬಗ್ಗೆ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಟೀಕಿಸುತ್ತಲೇ ಬಂದಿದ್ದಾರೆ. ಅದಕ್ಕೆ ತಕ್ಕ ಪ್ರತ್ಯುತ್ತರವನ್ನು ಬಿಜೆಪಿ ಕೊಡುತ್ತಾ ಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT