ದೇಶ

ಪೂರ್ವ ಲಡಾಖ್ ಗಡಿಯಲ್ಲಿ ರಾತ್ರಿ ವೇಳೆ ಭಾರತೀಯ ಯುದ್ಧ ವಿಮಾನಗಳ ಬಿಗಿ ಗಸ್ತು!

Vishwanath S

ನವದೆಹಲಿ: ಚೀನಾದೊಂದಿಗಿನ ಉದ್ವಿಗ್ನತೆಯ ಮಧ್ಯೆ, ಭಾರತೀಯ ವಾಯುಪಡೆ(ಐಎಎಫ್) ಪೂರ್ವ ಲಡಾಖ್ ನಲ್ಲಿ ರಾತ್ರಿ ಹೊತ್ತು ಯುದ್ಧ ವಿಮಾನಗಳು ಗಸ್ತು ನಡೆಸುತ್ತಿವೆ.

ಚೀನಾ ಗಡಿಯ ಸಮೀಪ ಒಂದು ಫಾರ್ವರ್ಡ್ ಏರ್ ಬೇಸ್ ಭಾರತೀಯ ವಾಯುಪಡೆಯು ತೀವ್ರ ರಾತ್ರಿ ಕಾರ್ಯಾಚರಣೆಗಳನ್ನು ನಡೆಸುತ್ತಿದೆ. ಮಿಗ್-29 ಮತ್ತು ಸುಖೋಯ್-30 ಎಂಕೆಐ, ಅಪಾಚೆ ದಾಳಿ ಹೆಲಿಕಾಪ್ಟರ್‌ಗಳು ಮತ್ತು ಚಿನೂಕ್ ಹೆವಿ-ಲಿಫ್ಟ್ ಹೆಲಿಕಾಪ್ಟರ್‌ಗಳು ಹಾರಾಟ ನಡೆಸುತ್ತಿವೆ ಎಂದು ಎಎನ್ಐ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಬಲವಾದ ಗಾಳಿ ಮತ್ತು ಮೈಕೊರೆಯುವ ಹವಾಮಾನದ ಹೊರತಾಗಿಯೂ, ಗಾಳಿಯ ವೇಗ ಕಡಿಮೆಯಾದಾಗ ಸಿಬ್ಬಂದಿ ಮತ್ತು ಪೈಲಟ್‌ಗಳು ಹಾರಾಟ ನಡೆಸುತ್ತಿದ್ದಾರೆ.

ರಾತ್ರಿ ಸಮಯದ ಕಾರ್ಯಾಚರಣೆಗಳ ಮಹತ್ವವನ್ನು ವಿವರಿಸಿದ ಹಿರಿಯ ಫೈಟರ್ ಪೈಲಟ್ ಗ್ರೂಪ್ ಕ್ಯಾಪ್ಟನ್ ಎ ರಾಠಿ ಅವರು "ರಾತ್ರಿ ಕಾರ್ಯಾಚರಣೆಗಳು ಆಶ್ಚರ್ಯಕರ ಅಂತರ್ಗತ ಅಂಶವನ್ನು ಹೊಂದಿವೆ. ಭಾರತೀಯ ವಾಯುಪಡೆಯು ಸಂಪೂರ್ಣ ತರಬೇತಿ ಪಡೆದಿದೆ ಮತ್ತು ಯಾವುದೇ ರೀತಿಯಲ್ಲೂ ಸಂಪೂರ್ಣ ಕಾರ್ಯಾಚರಣೆಯನ್ನು ಕೈಗೊಳ್ಳಲು ಸಿಬ್ಬಂದಿಗಳು ಸಿದ್ಧರಾಗಿದ್ದಾರೆ ಎಂದರು.

SCROLL FOR NEXT