ದೇಶ

ಲಡಾಖ್: ಮತ್ತೆರಡು ಪ್ರದೇಶಗಳಲ್ಲಿ ತಾತ್ಕಾಲಿಕ ಸೇನಾ ಟೆಂಟ್ ತೆಗೆದು ಹಿಂದೆಸರಿದ ಚೀನಾ 

Srinivas Rao BV

ಲಡಾಖ್: ಚೀನಾ ಸೇನೆ ಲಡಾಖ್ ನಲ್ಲಿ ಘರ್ಷಣೆಯಾಗಿದ್ದ ಮತ್ತೆರಡು ಪ್ರದೇಶಗಳಲ್ಲಿ ತಾತ್ಕಾಲಿಕ ಸೇನಾ ಟೆಂಟ್, ಮೂಲಸೌಕರ್ಯ ರಚನೆಗಳನ್ನು ತೆಗೆದುಹಾಕಿ, ಸೇನಾ ಸಿಬ್ಬಂದಿಗಳನ್ನು ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆಯನ್ನು ಸತತ ಎರಡನೇ ದಿನವೂ ಮುಂದುವರೆಸಿದೆ. 

ಈಶಾನ್ಯ ಲಡಾಖ್ ನಲ್ಲಿ ಘರ್ಷಣೆ ಸಂಭವಿಸಿದ್ದ ಹಾಟ್ ಸ್ಪ್ರಿಂಗ್ಸ್ ಹಾಗೂ ಗೋಗ್ರಾಗಳಲ್ಲಿ ಸತತ ಎರಡನೇ ದಿನವೂ ಸಹ ಚೀನಾ ಸೇನಾ ಸಿಬ್ಬಂದಿಗಳನ್ನು ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆಯನ್ನು ಮುಂದುವರೆಸಿದೆ. ಚೀನಾ ತನ್ನ ಸೇನೆಯ ಹಿಂತೆಗೆತ ಪ್ರಕ್ರಿಯೆ ಮುಂದುವರೆಸಿದ್ದರೂ ಭಾರತ ಮಾತ್ರ ಚೀನಾ ಸೇನೆಯ ಹಿಂತೆಗೆತ ಪ್ರಕ್ರಿಯೆಯ ಮೇಲೆ ಹದ್ದಿನ ಕಣ್ಣಿರಿಸಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಹಾಟ್ ಸ್ಪ್ರಿಂಗ್ಸ್ ಹಾಗೂ ಗೋಗ್ರಾ ಕಳೆದ 8 ವಾರಗಳಲ್ಲಿ ಉಭಯ ಸೇನೆಗಳ ನಡುವೆ ಘರ್ಷಣೆ ಉಂಟಾಗಿದ್ದ ಪ್ರಮುಖ ಪ್ರದೇಶಗಳಾಗಿವೆ. 

ಸರ್ಕಾರಿ ಮೂಲಗಳ ಪ್ರಕಾರ, ಈಗಾಗಲೇ ಚೀನಾ ಗಣನೀಯ ಪ್ರಮಾಣದಲ್ಲಿ ಸೇನಾ ಸಿಬ್ಬಂದಿಗಳನ್ನು ವಾಪಸ್ ಕರೆಸಿಕೊಂಡಿದ್ದು ಇನ್ನೆರಡು ದಿನಗಳಲ್ಲಿ ಈಶಾನ್ಯ ಲಡಾಖ್ ನ ಚೀನಾ ಸೇನಾ ಸಿಬ್ಬಂದಿಗಳ ಹಿಂತೆಗೆತ ಪ್ರಕ್ರಿಯೆ ಪುರ್ಣಗೊಳ್ಳಲಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಮಾತುಕತೆ ನಂತರ ಸೋಮವಾರದಂದು ಚೀನಾ ಈಶಾನ್ಯ ಲಡಾಖ್ ನ ಎಲ್ಎಸಿ ಬಳಿ ಸೇನಾ ಜಮಾವಣೆಯನ್ನು ಹಿಂಪಡೆಯುವ ಪ್ರಕ್ರಿಯೆಗೆ ಚಾಲನೆ ನೀಡಿತ್ತು.

SCROLL FOR NEXT